ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇದೇ ತಿಂಗಳ ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ವಿಧಾನಸೌಧದ ಎದುರು ಕರ್ನಾಟಕ ರತ್ನ ಮರಣೋತ್ತರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಪ್ಪು ಅವರ ಪರವಾಗಿ ಅವರ ಪತ್ನಿ ಅಶ್ವಿನಿ ಈ ಗೌರವವನ್ನು ಸ್ವೀಕರಿಸಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರಿಗೆ ಇದೇ ರೀತಿ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಾಗಲು ನಮಗೆ ಅಷ್ಟೇ ಖುಷಿಯಾಗಿತ್ತು.
ಈಗ ಅಪ್ಪು ಕರ್ನಾಟಕ ರತ್ನ ಪ್ರಶಸ್ತಿಯನ್ನು ಮುಡುಗೇರಿಸಿಕೊಂಡಿದ್ದಾರೆ. ಆದರೆ ಅದನ್ನ ಸ್ವೀಕರಿಸಲು ಅವರೇ ಇಲ್ಲ ಇದು ನಿಜಕ್ಕೂ ವಿಷಾದನೀಯ ಸಂಗತಿ. ಅಪ್ಪುವನ್ನು ಕಳೆದುಕೊಂಡು ಒಂದು ವರ್ಷ ಕಳೆದಿದೆ ಆದರೆ ದೊಡ್ಡ ಮನೆ ಕುಟುಂಬದವರು ಮಾತ್ರ ಇನ್ನೂ ಅದೇ ನೋವಿನಲ್ಲಿ ಇದ್ದಾರೆ. ಇನ್ನು ಪುನೀತ್ ರಾಜಕುಮಾರ್ ಅವರನ್ನ ಅವರ ಅಭಿಮಾನಿಗಳು ಕೂಡ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಆದರೆ ಪುನೀತ್ ಅವರಂತೆ ಅವರ ಅಭಿಮಾನಿಗಳು ಕೂಡ ಕೆಲವು ಉತ್ತಮ ಕಾರ್ಯದಲ್ಲಿ ಕೈಜೋಡಿಸಿರುವುದು ನಿಜಕ್ಕೂ ಖುಷಿಯ ಸಂಗತಿ. ಪುನೀತ್ ಎಲ್ಲರಿಗೂ ಮಾದರಿಯಾಗಿದ್ದವರು. ಕೇವಲ ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲದೆ ಸಾಮಾಜಿಕವಾಗಿ ಸಾಕಷ್ಟು ಉತ್ತಮ ಕಾರ್ಯವನ್ನು ಮಾಡಿದವರು ಹಾಗಾಗಿ ಅಪ್ಪು ಅಂದ್ರೆ ಎಲ್ಲರಿಗೂ ಬಹುವಾದ ಪ್ರೀತಿ.
ಇನ್ನು ಅಪ್ಪು ಅವರ ಅಗಲುವಿಕೆಯ ನೋವನ್ನ ಪತ್ನಿ ಅಶ್ವಿನಿ ಭರಿಸಲು ಸಾಧ್ಯವೇ ಇಲ್ಲ. ಆದರೆ ಅಪ್ಪು ಅವರ ದಾರಿಯಲ್ಲಿಯೇ ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಅಶ್ವಿನಿ. ಹೌದು, ಅಪ್ಪು ತಾವು ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಪಾಲನ್ನು ಸಮಾಜ ಸೇವೆಗಾಗಿ ಇಡುತ್ತಿದ್ದರು. ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ, ಸಾವಿರಾರು ಹೆಣ್ಣು ಮಕ್ಕಳಿಗೆ.
ಉಚಿತ ವಿದ್ಯಾಭ್ಯಾಸ ಹೀಗೆ ಅನೇಕರಿಗೆ ಸಹಾಯ ಹಸ್ತ ಇರುವ ಅಪ್ಪು ಅವರು ತಾವು ದುಡಿದ ಹಣದಲ್ಲಿ 30%ರಷ್ಟು ಜನರಿಗಾಗಿಯೇ ಎತ್ತಿಡುತ್ತಿದ್ದರು ಅಂದ್ರೆ ನಿಜಕ್ಕೂ ಆಶ್ಚರ್ಯವಾಗಲೇಬೇಕು. ಇನ್ನು ಪುನೀತ್ ರಾಜಕುಮಾರ್ ಅವರ ಹಿಂದಿನ ಶಕ್ತಿಯಾಗಿದ್ದ ಅಶ್ವಿನಿ ಇದೀಗ ಅಪ್ಪು ಇಲ್ಲದೆ ಇದ್ದರೂ ಅವರ ಜಾಗದಲ್ಲಿ ನಿಂತು ಅವರು ಮಾಡುತ್ತಿದ್ದ ಎಲ್ಲಾ ಜವಾಬ್ದಾರಿಗಳನ್ನು ತಾವು ತೆಗೆದುಕೊಂಡಿದ್ದಾರೆ.
ಚಂದನವನದಲ್ಲಿ ಅಶ್ವಿನಿ ಕಾಸ್ಟಿಂಗ್ ಡಿಸೈನರ್ ಹಾಗೂ ಸಿನಿಮಾ ನಿರ್ಮಾಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದ್ದು ಅದರಿಂದ ಬಂದ ಹಣದಲ್ಲಿ ಒಂದಷ್ಟು ಪಾಲನ್ನು ಜನಸೇವೆಗಾಗಿಯೇ ಮೀಸಲಿಟ್ಟಿದ್ದಾರೆ ಅಶ್ವಿನಿ. ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರನ್ನ ಬಹುವಾಗಿ ಮೆಚ್ಚಿಕೊಂಡು ಮದುವೆಯಾಗಿದ್ದರು.
ಮದುವೆಯಾದ ಬಳಿಕವೂ ಹಾಲು ಜೇನು ಎನ್ನುವಂತೆ ಅಶ್ವಿನಿ ಹಾಗೂ ಪುನೀತ್ ಸಂಸಾರ ನಡೆಸಿದ್ದಾರೆ. ಅಶ್ವಿನಿ ಹಾಗೂ ಪುನೀತ್ ಅವರ ಮದುವೆಯಾಗಿದ್ದು 1999 ಡಿಸೆಂಬರ್ 1ರಂದು. ಈ ಬಾರಿ ಪುನೀತ್ ರಾಜಕುಮಾರ್ ಇಲ್ಲದ ಮದುವೆಯ ವಾರ್ಷಿಕೋತ್ಸವ ಅಶ್ವಿನಿ ಅವರಿಗೆ ಎಷ್ಟು ನೋವನ್ನು ನೀಡಬಹುದು ಅಲ್ವಾ?!
ಇನ್ನು ಪುನೀತ್ ರಾಜಕುಮಾರ್ ಅವರ ಎಲ್ಲಾ ಕೆಲಸಕ್ಕೆ ಬೆನ್ನೆಲುಬಾಗಿದ ಅಶ್ವಿನಿ ತುಂಬಾ ಟ್ಯಾಲೆಂಟೆಡ್. ಬಹಳ ಸೈಲೆಂಟ್ ಆಗಿರುವ ಅಶ್ವಿನಿ ಅವರು 10ನೇ ತರಗತಿಯಲ್ಲಿ 83%ಕ್ಕೂ ಹೆಚ್ಚು ಫಲಿತಾಂಶವನ್ನು ಪಡೆದಿದ್ದರು. ಅಶ್ವಿನಿ ಅವರ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.