ಇತ್ತೀಚಿಗೆ ಕನ್ನಡ ಸಿನಿಮಾ ಅಂದ್ರೆ, ಕನ್ನಡಿಗರಿಗೆ ಮಾತ್ರವಲ್ಲ ಇತರ ಭಾಷಾ ಸಿನಿಪ್ರಿಯರಿಗೂ ಕೂಡ ನಿರೀಕ್ಷೆ ಹೆಚ್ಚಾಗಿದೆ. ಕನ್ನಡ ಭಾಷೆಯ ಸಿನಿಮಾಗಳು ಅಂದ್ರೆ ಎಲ್ಲರೂ ತಿರುಗಿ ನೋಡ್ತಾರೆ. ಇದಕ್ಕೆಲ್ಲ ಕಾರಣ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ಅಗಾಧ ಪ್ರತಿಭೆ. ರಿಷಬ್ ಶೆಟ್ಟಿ ಅವರ ಕಾಂತಾರ ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777, ಪ್ರಶಾಂತ್ ನೀಲ್ ಅವರ ಕೆಜಿಎಫ್ ಇವೆಲ್ಲವೂ ನಿರ್ದೇಶಕರಲ್ಲಿರುವ ಕಥೆಯನ್ನು ವಿಶೇಷವಾಗಿ ಹೆಣೆಯುವ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿದೆ.
ಇದೀಗ ಈವರೆಗೆ ಕನ್ನಡ ಸಿನಿಮಾಗಳು ಮಾಡಿರುವ ಎಲ್ಲ ದಾಖಲೆಗಳನ್ನು ಮಾಡುವುದಕ್ಕೆ ಬರ್ತಾ ಇದೆ ದರ್ಶನ್ ಅವರ ಕ್ರಾಂತಿ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಯಾಂಡಲ್ ವುಡ್ ಕಂಡ ಅತ್ಯದ್ಭುತ ಪ್ರತಿಭೆ. ಒಬ್ಬ ಅತ್ಯುತ್ತಮ ನಟನ ಮಗ ದರ್ಶನ್ ಶ್ರೀನಿವಾಸ್ ಅವರ ಹೆಸರು ಚಂದನದಲ್ಲಿ ಬಹಳ ಫೇಮಸ್ ಆಗಿತ್ತು, ಆದರೆ ತಂದೆಯ ಹೆಸರನ್ನು ಬಳಸಿಕೊಳ್ಳದೆ.
ಸ್ವಂತ ಪ್ರತಿಭೆಯಿಂದ ತಮ್ಮ ಪರಿಶ್ರಮದಿಂದ ಮೇಲೆ ಬಂದು ಇಂದು ಎಲ್ಲರಿಗೂ ಮಾದರಿ ಆಗಿರುವ ನಟ ದರ್ಶನ್. ದರ್ಶನ್ ಅವರು ಸಿನಿಮಾದಲ್ಲಿ ಮಾತ್ರ ಅಲ್ಲದೆ ರಿಯಲ್ ಲೈಫ್ ನಲ್ಲಿಯೂ ಕೂಡ ಹೀರೋ ಎನಿಸಿಕೊಂಡವರು ಸಾಕಷ್ಟು ಸಾಮಾಜಿಕ ಸೇವೆ ಮಾಡಿರುವ ದರ್ಶನ್ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ನೀಡುತ್ತಾರೆ. ಇದೀಗ ಅಕ್ಷರ ಕ್ರಾಂತಿ ಮಾಡುವುದಕ್ಕೆ ಮುಂದಾಗಿದ್ದಾರೆ ನಟ ದರ್ಶನ್.
ಹೌದು ಶೈಲಜಾ ಹಾಗೂ ಬಿ ಸುರೇಶ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಅವರು ವಿಶೇಷವಾದ ಪಾತ್ರವನ್ನು ನಿಭಾಯಿಸಿದ್ದಾರೆ. ಬುಲ್ ಬುಲ್ ಸಿನಿಮಾದ ಮೂಲಕ ದರ್ಶನ್ ಗೆ ಜೊತೆಯಾಗಿ ಅಭಿನಯಿಸಿದ್ದ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ದರ್ಶನ್ ಗೆ ಕ್ರಾಂತಿ ಸಿನಿಮಾದಲ್ಲಿ ಮತ್ತೊಮ್ಮೆ ಜೋಡಿ ಆಗಿದ್ದಾರೆ.
ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್ ಮೊದಲದ ದಿಗ್ಗಜ ನಟರ ತಾರಾಗಣವೇ ಈ ಸಿನಿಮಾದಲ್ಲಿದೆ. ಇನ್ನು ಕ್ರಾಂತಿ ಸಿನಿಮಾದ ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾದ ಪ್ರಮೋಷನ್ ಕಾರ್ಯವನ್ನು ದರ್ಶನ್ ಅವರ ಅಭಿಮಾನಿಗಳೇ ನಡೆಸುತ್ತಿದ್ದಾರೆ. ಯಾವ ಮೀಡಿಯಾಗಲಿಯೂ ದರ್ಶನ್ ಅವರ ಸಿನಿಮಾ ಪ್ರಮೋಷನ್ ಮಾಡದೆ ಇರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳೇ ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ.
ಹಾಗಾಗಿ ಕ್ರಾಂತಿ ಸಿನಿಮಾದ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಇದೇ ಬರುವ ಜನವರಿಯಲ್ಲಿ ಕ್ರಾಂತಿ ಸಿನಿಮಾ ದೇಶಾದ್ಯಂತ ತೆರೆ ಕಾಣಲಿದೆ. ಸದ್ಯ ಕ್ರಾಂತಿ ಸಿನಿಮಾದ ಲಿರಿಕಲ್ ಹಾಡು ಒಂದು ಬಿಡುಗಡೆಯಾಗಿದೆ. ಈ ಹಾಡು ರಿಲೀಸ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಈ ಮೂಲಕ ಇತರ ಎಲ್ಲಾ ಸಿನಿಮಾದ ದಾಖಲೆಯನ್ನು ಉಡೀಸ್ ಮಾಡಿದೆ ಕ್ರಾಂತಿ ಸಿನಿಮಾ. ಒಟ್ಟಿನಲ್ಲಿ ಕ್ರಾಂತಿ ಸಿನಿಮಾ ಕನ್ನಡ ಸಿನಿಮಾ ರಂಗದ ಮತ್ತೊಂದು ಮೇರು ಸಿನಿಮಾ ಎನಿಸಿಕೊಳ್ಳುವುದರಲ್ಲಿ ನೋ ಡೌಟ್.