ಕನ್ನಡ ಬಿಗ್ ಬಾಸ್ ಸೀಸನ್ 9ರ 5ನೇ ಎಲಿಮಿನೇಷನ್ ಕೂಡ ನಡೆದು ಹೋಗಿದೆ. ಬೈಕರ್ ಐಶ್ವರ್ಯ ಪಿಸೆ, ನವಾಜ್, ದೃವ್ ಚಂದ್ರಪ್ಪ, ಮಯೂರಿ ನಂತರ ಇದೀಗ ನೇಹಾ ಗೌಡ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಿಂದ ಔಟ್ ಆಗಿರುವ ಐದನೇ ಸ್ಪರ್ಧಿ ಆಗಿರುವ ನೇಹ ಗೌಡ ಮನೆಯಿಂದ ಹೊರ ಬಂದಿದ್ದಕ್ಕೆ ಗೊಂಬೆ ಅಭಿಮಾನಿಗಳಿಗೆ ಬೇಸರವಾಗಿದೆ.
ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಗೊಂಬೆ ಪಾತ್ರದ ಮೂಲಕ ಮನೆಮಾತಾಗಿದ್ದ ಜನಪ್ರಿಯ ಕಿರುತೆರೆ ನಟಿ ನೇಹಾ ಗೌಡ ಇವರು ತಮಿಳು ಕಿರುತೆರೆಯಲ್ಲಿಯೂ ಕೂಡ ಅಭಿನಯಿಸಿದ್ದಾರೆ ಮದುವೆಯಾದ ಬಳಿಕ ಎಲ್ಲಿಯೂ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ನೇಹಾ ಗೌಡ ಬಿಗ್ ಬಾಸ್ ಗೆ ಆಯ್ಕೆಯಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ರು. ಆದರೆ ದುರದೃಷ್ಟವಶಾತ್ ನೇಹಾ ಗೌಡ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯಲಿಲ್ಲ.
ಕಳೆದ ವಾರ ಬಿಗ್ ಬಾಸ್ ಪಂಚಾಯ್ತಿ ಕಟ್ಟೆ ನಡೆಸಲು ಕಿಚ್ಚ ಸುದೀಪ್ ಬಂದಿರಲಿಲ್ಲ. ಆದರೆ, ಎಲಿಮಿನೇಷನ್ ಮಾತ್ರ ಎಂದಿನಂತೆ ನಡೆದಿತ್ತು. ನಾಮಿನೇಟ್ ಆಗಿರುವ ಸ್ಪರ್ಧಿಗಳಿಗೆ ಟಾಸ್ಕ್ ಗಳನ್ನು ನೀಡಿ ಅದರಲ್ಲಿ ಸೋತ ಮಯೂರಿ ಮನೆಯಿಂದ ಹೊರ ನಡೆದಿದ್ದರು. ಈ ಬಾರಿ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಪಂಚಾಯ್ತಿ ನಡೆಸಿದ್ದರು. ಕಳೆದ ಎರಡು ವಾರಗಳ ಪ್ರಮುಖ ವಿಷಯಗಳನ್ನು ಕಿಚ್ಚ ಸುದೀಪ್ ಸ್ಪರ್ಧಿಗಳ ಜೊತೆ ಚರ್ಚೆ ಮಾಡಿದ್ದಾರೆ.
ಹೌದು, ದೀಪಿಕಾ ದಾಸ್ ಹಾಗೂ ಸಾನಿಯಾ ಅಯ್ಯರ್ ಇಬ್ಬರ ಕ್ಯಾಪ್ಟೆನ್ಸಿಯ ಬಗ್ಗೆಯೂ ಸುದೀಪ್ ಚರ್ಚೆ ಮಾಡಿದ್ದಾರೆ. ಇಬ್ಬರ ತಪ್ಪು ಒಪ್ಪುಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ದೀಪಾವಳಿಗೆ ಕಿಚ್ಚ ಸುದೀಪ್ ಮನೆಯ ಎಲ್ಲಾ ಸದಸ್ಯರಿಗೂ ಪತ್ರದ ಜೊತೆಗೆ ಕೈಯಾರೆ ಅಡುಗೆ ಮಾಡಿ ಕಳುಹಿಸಿದ್ದರು. ಇದು ಬಿಗ್ ಬಾಸ್ ಸ್ಪರ್ಧಿಗಳಿಗೆ ಸಂತಸ ತಂದಿತ್ತು.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಹೊರಬಂದ ನೇಹಾ ಗೌಡ ಟಾಸ್ಕ್ ಗಳನ್ನ ಚೆನ್ನಾಗಿಯೇ ಆಡಿದ್ದಾರೆ ಮನೋರಂಜನೆಯನ್ನು ನೀಡಿದ್ದಾರೆ. ಆದರೂ ಒಬ್ಬ ಧಾರಾವಾಹಿ ನಟಿಯಾಗಿ ಮನೋರಂಜನೆ ವಿಷಯಕ್ಕೆ ಬಂದರೆ ನೇಹಾ ಗೌಡ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದು ತುಸು ಕಡಿಮೆ ಎನ್ನಬಹುದು.
ತಮ್ಮದೇ ಆದ ಕಂಫರ್ಟ್ ಜೋನ್ ನಿರ್ಮಿಸಿಕೊಂಡಿದ್ದ ನೇಹಾ ಗೌಡ ಅವರು ಅಮೂಲ್ಯ ಗೌಡ, ಅನುಪಮಾ, ದಿವ್ಯ ಉರುಡುಗ ಅವರ ಜೊತೆ ಮಾತ್ರ ಹೆಚ್ಚು ಕಾಲ ಕಳೆಯುತ್ತಿದ್ದರು. ನೇಹಾ ಗೌಡ ನವೀನರಾಗಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿ ಪ್ರವೀಣರ ಜೊತೆ ಆಟವಾಡೋದ್ರಲ್ಲಿ ಎಡವಿದ್ರ ಅಂತ ಜನ ಪ್ರಶ್ನಿಸುತ್ತಿದ್ದಾರೆ.
ನೇಹಾ ಗೌಡ ಬಿಗ್ ಬಾಸ್ ಮನೆಯಲ್ಲಿ ತಮ್ಮನ್ನ ತಾವು ಇನ್ನಷ್ಟು ಎಕ್ಸ್ಪ್ಲೋರ್ ಮಾಡಬೇಕಿತ್ತು, ಜನರ ಎದುರು ಇನ್ನಷ್ಟು ತಮ್ಮ ಪ್ರತಿಭೆಯನ್ನು ತೋರಿಸಬೇಕಿತ್ತು ಆದರೆ ಮಾತನಾಡುವ ಸಮಯದಲ್ಲಿ ಸುಮ್ಮನಿದ್ದು ಸುಮ್ಮನಿರಬೇಕಾದ ಸಮಯದಲ್ಲಿ ಮಾತನಾಡುತ್ತಾ ಎಡವಿದ್ರೂ ಎಂದು ಅನಿಸುತ್ತೆ ಹೊರಬಂದಿರುವುದಕ್ಕೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.