PhotoGrid Site 1657339612106

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ನಟ ರವಿಚಂದ್ರನ್ ಅವರ ಮದುವೆ ಈ ಖ್ಯಾತ ನಟಿಯ ಜೊತೆ ಆಗಬೇಕಿತ್ತು! ಆದರೆ ರವಿ ಸರ್ ತಂದೆ ಇದನ್ನು ಒಪ್ಪಲೇ ಇಲ್ಲ, ಯಾರು ಗೊತ್ತಾ ಆ ಖ್ಯಾತ ನಟಿ ನೋಡಿ!!

ಸುದ್ದಿ

ಕನ್ನಡ ಸಿನಿಮಾ ರಂಗದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಂದರೆ ಹಲವರಿಗೆ ವಿಶೇಷವಾದ ಪ್ರೀತಿ. ಯಾಕೆಂದರೆ ಸಿನಿಮಾದಲ್ಲಿ ಒಂದು ಹೊಸತನವನ್ನು, ವಿಶೇಷತೆಯನ್ನು ಪ್ರದರ್ಶಿಸಿದವರು ರವಿ ಸರ್. ಸಾಕಷ್ಟು ಸಿನಿಮಾ ನಿರ್ಮಾಪಕರು ಅಥವಾ ನಿರ್ದೇಶಕರು ಒಂದು ಸಿನಿಮಾವನ್ನು ನಿರ್ಮಾಣ ಮಾಡುವುದು ಹೇಗೆ ಎಂಬುದನ್ನ ರವಿಚಂದ್ರನ್ ಅವರು ನಿರ್ಮಾಣ ಮಾಡಿದ ಸಿನಿಮಾಗಳನ್ನು ನೋಡಿ ಕಲಿಯಬಹುದು. ರವಿಚಂದ್ರನ್ ಮಾಡಿರುವ ಎಲ್ಲಾ ಸಿನಿಮಾಗಳು ಒಂದಕ್ಕಿಂತ ಒಂದು ಡಿಫರೆಂಟ್. ಆದರೆ ಎಲ್ಲಾ ಸಿನಿಮಾಗಳಲ್ಲೂ ಇದ್ದ ಒಂದು ಕಾಮನ್ ವಿಷ್ಯ ಅಂದ್ರೆ ಅದು ಪ್ರೀತಿ.

ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಾಕಷ್ಟು ಸಿನಿಮಾಗಳನ್ನ ನಿರ್ಮಿಸಿದ್ದು ಲವ್ ಸ್ಟೋರಿ ಆಧಾರದ ಮೇಲೆ. ಅವರು ಎಲ್ಲಾ ಸಿನಿಮಾಗಳಲ್ಲಿಯೂ ನಾಯಕಿ ಪಾತ್ರಕ್ಕೆ ಹೆಚ್ಚು ಮುನ್ನಡೆಯನ್ನು ಕೊಡುತ್ತಿದ್ದರು. ನೀವು ಇತ್ತೀಚಿನ ಸಿನಿಮಾಗಳನ್ನು ನೋಡಿದ್ರೆ ಸ್ಟಾರ್ ಹೀರೋಗಳ ಸಿನಿಮಾಗಳೇ ಹೆಚ್ಚು ಆದರೆ 10 ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದ ರವಿಚಂದ್ರನ್ ಅವರು ಮಹಿಳಾ ಪಾತ್ರಕ್ಕೆ ಹೆಚ್ಚು ಮಹತ್ವವನ್ನ ಕೊಡುತ್ತಿದ್ದ ಏಕೈಕ ನಿರ್ದೇಶಕ ಹಾಗೂ ನಿರ್ಮಾಪಕ. ಹಾಗಾಗಿ ರವಿ ಸರ್ ಚಿತ್ರದಲ್ಲಿ ಅಭಿನಯಿಸಲು ಮಹಿಳಾ ನಟಿಯರು ಕೂಡ ತುಂಬಾ ಇಷ್ಟ ಪಡುತ್ತಿದ್ದರು.

ಇದೀಗ ಕನ್ನಡ ಸಿನಿಮಾಗಳಲ್ಲಿ ಪರಭಾಷೆ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ ಆದರೆ ಈ ಟ್ರೆಂಡ್ ಇಂದು ನಿನ್ನಯದಲ್ಲ. ರವಿಚಂದ್ರನ್ ಅವರು ಪ್ರೇಮಲೋಕದಿಂದ ಹಿಡಿದು ತಾವು ಅಭಿನಯಿಸಿದ ಹಾಗೂ ನಿರ್ಮಿಸಿದ ಎಲ್ಲಾ ಸಿನಿಮಾಗಳಲ್ಲೂ ಬಾಲಿವುಡ್ ನಟಿಯರನ್ನ ಕೂಡ ಕರೆಸಿದವರು. ರವಿಚಂದ್ರನ್ ಅವರು ಆ ಕಾಲದಲ್ಲಿಯೇ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿದ್ದರು. ರವಿಚಂದ್ರನ್ ಅವರು ರೋಮ್ಯಾಂಟಿಕ್ ಸ್ಟಾರ್ ಕೂಡ ಹೌದು ಅವರ ರೋಮ್ಯಾಂಟಿಕ್ ಶೈಲಿಯೇ ಅವರನ್ನ ಕ್ರೇಜಿ ಸ್ಟಾರ್ ಎಂದು ಕರೆಸಿಕೊಳ್ಳುವಂತೆ ಮಾಡಿದೆ.

ಇನ್ನು ರವಿಚಂದ್ರನ್ ಅವರು ಇತ್ತೀಚಿಗೆ ಕೆಲವು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಅಲ್ಲದೆ ರಿಯಾಲಿಟಿ ಶೋಗಳ ತೀರ್ಪುಗಾರರಾಗಿಯು ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗುತ್ತಾರೆ. ಇನ್ನು ಎಲ್ಲಾ ಸಂದರ್ಶನಗಳಲ್ಲಿಯೂ ಹೆಣ್ಣಿನ ಬಗ್ಗೆ ಅವರದ್ದೇ ಆದ ಕಲ್ಪನೆ ಇರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಒಂದು ಖಾಸಗಿ ಚಾನೆಲ್ನ ಸಂದರ್ಶನದಲ್ಲಿ ತಮ್ಮ ಲವ್ ಸ್ಟೋರಿಯನ್ನ ರಿವೀಲ್ ಮಾಡಿದ್ದಾರೆ, ರವಿಮಾಮ.

ರವಿಚಂದ್ರನ್ ಹೇಳುವಂತೆ, ಹೆಣ್ಣೇ ನನಗೆ ಸ್ಪೂರ್ತಿ ಅವಳಿಲ್ಲದೆ ಏನು ಪೂರ್ತಿ ಆಗುವುದಿಲ್ಲ, ಎಂದು ಹೇಳುವ ರವಿ ಸರ್ ನನ್ನ ಜೀವನದಲ್ಲಿ ಇಂತಹ ಸಿನಿಮಾಗಳನ್ನ ಮಾಡೋದಕ್ಕೆ ಒಬ್ಬಳು ಹೆಣ್ಣೇ ಕಾರಣ ನನಗೆ ಪ್ರೀತಿ ಪ್ರೇಮದ ವಿಚಾರ ಬಿಟ್ರೆ ಬೇರೆ ಕಥೆಯನ್ನ ಇಟ್ಟುಕೊಂಡು ಸಿನಿಮಾ ಮಾಡೋಕೆ ಬರೋದಿಲ್ಲ ನಾನು ಇಂತಹ ಜಾನರ್ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿದ್ದೇನೆ. ಇನ್ನು ಯಾವುದೇ ಹುಡುಗಿ ಚೆನ್ನಾಗಿದ್ದಾಳೆ ಅಥವಾ ಚೆನ್ನಾಗಿಲ್ಲ ಎಂದು ನಾನು ಹೇಳೋದಿಲ್ಲ ಅದರ ಬದಲು ಅವರು ಯಾವ ಸೀರೆ ಉಟ್ಟರೆ ಚೆನ್ನಾಗಿರುತ್ತೆ ಹೇಗೆ ರೆಡಿಯಾದ್ರೆ ಸುಂದರವಾಗಿ ಕಾಣುತ್ತಾರೆ ಎಂದು ನಾನು ಹೇಳಬಲ್ಲೆ ಅದಕ್ಕಾಗಿ ಅಲ್ವೇ ನನಗೆ ರೋಮ್ಯಾಂಟಿಕ್ ಕಿಂಗ್ ಎಂದು ಕರೆಯುತ್ತಾರೆ ಅಂತ ಹಾಸ್ಯ ಚಟಾಕಿಯನ್ನು ಹಾರಿಸಿದ್ರು.

PhotoGrid Site 1657339624237

ಇನ್ನು ತಮ್ಮ ಲವ್ ಸ್ಟೋರಿಯನ್ನ ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸಿದರು ರವಿಮಾಮ. ನಾನು ನಾನು ಪ್ರೀತಿಸಿದ ಹುಡುಗಿಯ ಕೈಹಿಡಿದು ಒಮ್ಮೆ ಶೇಕ್ ಹ್ಯಾಂಡ್ ಮಾಡಿದ್ದೆ ಅಷ್ಟೇ, ಅದನ್ನ ಬಿಟ್ರೆ ಇದುವರೆಗೂ ಆಕೆಯನ್ನು ಮುಟ್ಟೇ ಇಲ್ಲ. ಅವಳನ್ನ ಪ್ರೀತಿಸುತ್ತಿದ್ದೇನೆ ಅಂತ ಹೇಳುವುದಕ್ಕೆ ಒಂದು ವರ್ಷ ತೆಗೆದುಕೊಂಡಿದ್ದೆ ಆದರೆ ಆಕೆಯ ಹಾಗೂ ನನ್ನ ಜಾತಿ ಬೇರೆಯಾದ ಕಾರಣ ನಮ್ಮಪ್ಪ ಈ ಮದುವೆಗೆ ಒಪ್ಪುದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ನನಗೆ ಗೊತ್ತಿತ್ತು. ಹಾಗಾಗಿ ನನ್ನ ಅಪ್ಪನನ್ನ ಎದುರು ಹಾಕಿಕೊಂಡು ಮದುವೆಯಾಗೋದಕ್ಕೆ ನನಗೆ ಧೈರ್ಯವು ಸಾಕಾಗಲಿಲ್ಲ.

ಜೊತೆಗೆ ನನ್ನ ಹುಡುಗಿಗಿಂತಲೂ ನಾನು ಅಪ್ಪನನ್ನೇ ಹೆಚ್ಚು ಪ್ರೀತಿಸುತ್ತಿದ್ದೆ ಹಾಗಾಗಿ ಅವರಿಗೆ ನಿರಾಸೆ ಮಾಡಲು ನನಗೆ ಇಷ್ಟ ಇರಲಿಲ್ಲ ಕೊನೆಗೆ ಇಬ್ಬರೂ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡಿ ನಮ್ಮ ಲವ್ ಸ್ಟೋರಿಗೆ ಫುಲ್ ಸ್ಟಾಪ್ ಇಟ್ವಿ. ಇದೀಗ ಅವಳು ಅವಳ ಸಂಸಾರದಲ್ಲಿ ಖುಷಿಯಾಗಿದ್ದರೆ ನಾನು ನನ್ನ ಸಂಸಾರದಲ್ಲಿ ಸಂತೋಷವಾಗಿದ್ದೇನೆ ಅಂತ ರವಿ ಸರ್ ತಮ್ಮ ಪ್ರೇಮ್ ಕಹಾನಿಯನ್ನು ಹೇಳಿಕೊಂಡಿದ್ದಾರೆ. ನಟ ರವಿಚಂದ್ರನ್ ಅವರು ಕನ್ನಡದಲ್ಲಿ ಒಬ್ಬ ಲೆಜೆಂಡ್ ಆಕ್ಟರ್ ಎನಿಸಿಕೊಂಡವರು. ಇದೀಗ ಅವರ ಮಕ್ಕಳು ಕೂಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಲು ಸಜ್ಜಾಗಿದ್ದಾರೆ. ತ್ರಿವಿಕ್ರಮ ಸಿನಿಮಾ ಈಗಾಗಲೇ ಅದ್ದೂರಿ ಪ್ರದರ್ಶನವನ್ನು ಕಂಡಿದೆ.

Leave a Reply

Your email address will not be published. Required fields are marked *