PhotoGrid Site 1657614147995

ಎಲ್ಲರ ಮೈ ರೋಮ ಎದ್ದು ನಿಲ್ಲುವಂತೆ ಚಿಂದಿ ಡಾನ್ಸ್ ಮಾಡಿದ ಚೆಂದುಳ್ಳಿ ಚೆಲುವೆ ನಟಿ ಲಾಸ್ಯ ನಾಗರಾಜ್! ವಿಡಿಯೋ ನೋಡಿ ನಿದ್ದೆ ಬಿಟ್ಟ ಅಭಿಮಾನಿಗಳು!!

ಸುದ್ದಿ

ಚಿತ್ರರಂಗದಲ್ಲಿ ಇಂದು ಸಿನಿಮಾಗಳಲ್ಲಿ ಅಭಿನಯಿಸುವುದು ಮಾತ್ರವಲ್ಲದೆ ಎಲ್ಲಾ ನಟಿಯರು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಈ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಕೂಡ ಗಳಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ ಅನ್ನೋದು ಅವರವರ ಪ್ರತಿಭೆಯನ್ನು ತೋರಿಸುವುದಕ್ಕೆ ಅತ್ಯುತ್ತಮ ವೇದಿಕೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದ ಮೂಲಕ ಹಣ ಗಳಿಸೋರು ಸಾಕಷ್ಟು ಜನರಿದ್ದಾರೆ.

ಅದರಲ್ಲಿ ಸಿನಿಮಾ ನಟಿಯರು ಕೂಡ ಸೇರಿಕೊಳ್ಳುತ್ತಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಜಾಸ್ತಿ ಆದ ಹಾಗೆ, ಅಥವಾ ಯಾವುದಾದರೂ ಉತ್ಪನ್ನಗಳನ್ನ ಜಾಹೀರಾತು ಮಾಡಿದ್ರೆ ಸಾಮಾಜಿಕ ಜಾಲತಾಣದಿಂದ ಹಣವನ್ನು ಗಳಿಸಬಹುದು. ಇಂದು ಸಾಕಷ್ಟು ತಾರೆಯರು ಈ ಕಾರ್ಯದಲ್ಲಿ ನಿರತರಾಗಿದ್ದಾರೆ.

ಹಾಗಂತ ಎಲ್ರೂ ಕಾಸು ಮಾಡೋದಕ್ಕೆ ಸೋಶಿಯಲ್ ಮೀಡಿಯಾವನ್ನು ಬಳಸುತ್ತಾರೆ ಎಂದು ಅರ್ಥವಲ್ಲ. ಕೆಲವು ನಟಿಯರು ತಮ್ಮನ್ನ ತಾವು ಎಕ್ಸ್ಫ್ಲೋರ್ ಮಾಡಿಕೊಳ್ಳೋದಕ್ಕೆ ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. ಇಂತಹ ನಟಿಯರಲ್ಲಿ ಲಾಸ್ಯ ನಾಗರಾಜ್ ಕೂಡ ಒಬ್ಬರು. ಹೌದು ಲಾಸ್ಯ ನಾಗರಾಜ್ ಅವರು ಬಹುಭಾಷಾ ನಟಿ ಕನ್ನಡ, ತಮಿಳು ಸಿನಿಮಾಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಮೊದಲು ದೇಶದ ಫೇಮಸ್ ಮಾಡೆಲ್ ಆಗಿದ್ದ ಲಾಸ್ಯ ನಾಗರಾಜ್ ಕೊನೆಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ರು. ಇನ್ನು ಲಾಸ್ಯ ನಾಗರಾಜ್ ಅವರು ಕನ್ನಡದಲ್ಲಿ ಅವರು ನಟಿಸಿದ ಸಿನಿಮಾಗಿಂತಲೂ ಹೆಚ್ಚಾಗಿ ಗುರುತಿಸಿಕೊಂಡಿದ್ದು ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ ನಂತರವೇ! ಲಾಸ್ಯ ನಾಗರಾಜ್ 1991 ಆಗಸ್ಟ್ 4ರಂದು ಹುಟ್ಟಿದರು. ಇವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಇಲ್ಲಿಯೇ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಅಧ್ಯಯನವನ್ನ ಮಾಡಿ, ವಿ ಎಲ್ ಸಿ ಸಿ ಇನ್ಸ್ಟಿಟ್ಯೂಟ್ ಬೆಂಗಳೂರು, ಇಲ್ಲಿ ಡಿಪ್ಲೋಮವನ್ನು ಕೂಡ ಮುಗಿಸಿದ್ದಾರೆ.

ಲಾಸ್ಯ ನಾಗರಾಜ್ ಅವರು ತೆರೆ ಮೇಲೆ ಅವರ ಜರ್ನಿಯನ್ನ ಆರಂಭಿಸಿದ್ದು ಡ್ಯಾನ್ಸ್ ರಿಯಾಲಿಟಿ ಶೋ ನ ಮೂಲಕ. ಸುವರ್ಣ ವಾಹಿನಿಯಲ್ಲಿ 2017ರಲ್ಲಿ ಪ್ರಸಾರವಾಗಿದ್ದ ಡ್ಯಾನ್ಸರ್ ಶೋನಲ್ಲಿ ಲಾಸ್ಯ ನಾಗರಾಜ್ ಕಾಣಿಸಿಕೊಂಡಿದ್ದರು. ನಂತರ ಕನ್ನಡದಲ್ಲಿ ಪ್ರಸಾರವಾದ ಪದ್ಮಾವತಿ ಧಾರಾವಾಹಿಯಲ್ಲಿ ಲಸ್ಯ ನಾಗರಾಜ್ ನಟಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯಾಗಿ ಪಾಲ್ಗೊಂಡಿದ್ದು ಅವರ ತಮ್ಮ ವೃತ್ತಿ ಜೀವನಕ್ಕೆ ಪ್ರಮುಖ ಮೈಲುಗಲ್ಲಾಯಿತು. 2018ರಲ್ಲಿ ರಾಜೇಶ್ ವೇಣೂರು ಅವರ ನಿರ್ದೇಶನದ ’ಅಸತೋಮ ಸದ್ಗಮಯ’ ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿದರೆ ಲಾಸ್ಯ ನಾಗರಾಜ್.

ಮುಂದಿನ ವರ್ಷ ತೆರೆಕಂಡ ರಂಗನಾಯಕಿ ಸಿನಿಮಾದಲ್ಲಿಯೂ ನಟಿ ಲಸ್ಯ ನಾಗರಾಜ್ ಅಭಿನಯಿಸಿದ್ರು. ಈ ಸಿನಿಮಾವನ್ನು ದಯಾಳ್ ಪದ್ಮನಾಭನ್ ನಿರ್ದೇಶಸಿದ್ದಾರೆ. ಇನ್ನು ತಮಿಳಿನ, ಜಿ ತಮಿಳ್ ನಲ್ಲಿ ಡ್ಯಾನ್ಸ್ ಜೋಡಿ ಡ್ಯಾನ್ಸ್ ಸೀಸನ್ 2ರಲ್ಲಿ ಲಾಸ್ಯ ನಾಗರಾಜ್ ಸ್ಪರ್ಧಿಸಿದ್ದಾರೆ. ಅಲ್ಲದೆ ಕಲರ್ಸ್ ತಮಿಳ್ ನಲ್ಲಿ ಪ್ರಸಾರವಾಗುತ್ತಿರುವ ‘ವಂದಾಲ್ ಶ್ರೀದೇವಿ’ ಎನ್ನುವ ಧಾರಾವಾಹಿಯಲ್ಲಿ ಲೀಡ್ ರೋಲ್ ಮಾಡುತ್ತಿದ್ದಾರೆ ಲಾಸ್ಯ.

ಇನ್ನು 27 ವರ್ಷದ ನಟಿ ಲಾಸ್ಯ ತಮ್ಮ ಜೀವನದ ಬಗ್ಗೆ ತುಂಬಾನೇ ಪ್ಯಾಶನೇಟ್ ಆಗಿದ್ದಾರೆ. ಮಾಡೆಲ್ ಕೂಡ ಆಗಿದ್ದ ಇವರು ತಮ್ಮ ಫಿಟ್ನೆಸ್ ಬಗ್ಗೆ ತುಂಬಾನೇ ಕೇರ್ ಮಾಡುತ್ತಾರೆ. ಹಾಗಾಗಿ ಅವರು ತಮ್ಮದೇ ಆದ ರೂಟೀನ್ ಪ್ಲಾನ್ ಹೊಂದಿದ್ದು ದಿನವೂ ವರ್ಕೌಟ್ ಮಾಡದೆ ಅವರ ದಿನ ಕಂಪ್ಲೀಟ್ ಆಗೋದೇ ಇಲ್ಲವಂತೆ. ಇನ್ನು ಚಹಾ ಪ್ರಿಯೆ ಲಾಸ್ಯ ನಾಗರಾಜ್, ಇನ್ಸ್ಟಾಗ್ರಾಮ್ ನಲ್ಲಿ ಹಲವಾರು ರೀಲ್ ಗಳನ್ನ ಮಾಡಿ ಜನರನ್ನ ರಂಜಿಸುತ್ತಾರೆ.

ಇತ್ತೀಚೆಗೆ ಆಡ್ ಶೂಟ್ ನ ಸಮಯದಲ್ಲಿ, ಇಂಗ್ಲಿಷ್ ಮ್ಯೂಸಿಕ್ ಒಂದಕ್ಕೆ, ಲಾಸ್ಯಾ ನಾಗರಾಜ್ ಹೆಜ್ಜೆ ಹಾಕಿದ್ರು, ಬ್ಯಾಡ್ಮಿಂಟನ್ ಆಟಗಾರರು ಧರಿಸುವ ಬಟ್ಟೆಯನ್ನು ಧರಿಸಿದ್ದ ಲಾಸ್ಯ ನಾಗರಾಜ್, ಈ ಧಿರಿಸಿನಲ್ಲಿ ತುಂಬಾನೇ ಹಾಟ್ ಆಗಿ ಕಾಣಿಸುತ್ತಾರೆ. ಸದ್ಯ ಅವರ ಈ ನೃತ್ಯದ ವಿಡಿಯೋ ವೈರಲ್ ಆಗಿದ್ದು ಸಿಕ್ಕಾಪಟ್ಟೆ ಕಮೆಂಟ್ ಗಳು ಬರ್ತಾ ಇವೆ.

 

View this post on Instagram

 

A post shared by Lasya Nagraj (@lasyanagraj)

Leave a Reply

Your email address will not be published. Required fields are marked *