ಬಾಲಿವುಡ್ ನಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರ ಸುದ್ದಿ ಯಲ್ಲಿ ಇರುವುದಿಲ್ಲ. ಅವರ ಮಕ್ಕಳು ಕೂಡ ಸದಾ ಸುದ್ದಿ ಯಲ್ಲಿ ಇರುತ್ತಾರೆ. ಸೆಲೆಬ್ರಿಟಿಗಳ ಮಕ್ಕಳು ಹೋದಲ್ಲಿ ಬಂದಲ್ಲಿ ಪಾಪರಾಜಿಗಳು ಅವರ ಸುತ್ತನೇ ಸುತ್ತುತ್ತಿರುತ್ತಾರೆ. ಬಾಲಿವುಡ್ ಕ್ಷೇತ್ರದಲ್ಲಿ ಅಭಿಮಾನಿಗಳಿಗೆ ಹೊಸ ತಲೆಮಾರಿನ ಅಂದರೆ ಸೆಲೆಬ್ರಿಟಿ ಮಕ್ಕಳ ಮೇಲೆನೇ ಹೆಚ್ಚು ಕ್ಯೂರಿಯಾಸಿಟಿ ಇದೆ. ಮುಖ್ಯವಾಗಿ ಸೈಫ್ ಅಲಿ ಖಾನ್, ಅಜಯ್ ದೇವಗನ್ – ಕಾಜಲ್, ಶಾರುಖ್ ಖಾನ್ ಮುಂತಾದ ಸ್ಟಾರ್ ನಟರ ಮಕ್ಕಳು ಹೋದಲ್ಲಿ ಬಂದಲ್ಲಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತಿವೆ.
ಸೈಫ್ ಆಲಿ ಖಾನ್ ಅವರ ಮೊದಲ ಪತ್ನಿ ಮಗಳಾದ ಸಾರಾ ಆಲಿ ಖಾನ್ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಆದರೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಮಾತ್ರ ಇನ್ನೂ ಯಾವ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿಲ್ಲ. ಹಾಗಿದ್ದರೂ ಅವರಿಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅವರನ್ನು ಅನೇಕರು ಫಾಲೋ ಮಾಡುತ್ತಿದ್ದಾರೆ.
ಇನ್ನು ಸುಹಾನಾ ಖಾನ್ ಅವರಿಗೂ ಸಿನಿಮಾದಲ್ಲಿ ನಟಿಸಬೇಕು ಅನ್ನುವ ಆಸೆ ಇದೆ. ಹೀಗಾಗಿಯೇ ಅವರು ಆಕ್ಟಿಂಗ್ ಕ್ಲಾಸ್ ಕೂಡ ಹೋಗಿದ್ದರು. ಇದೀಗ ಅವರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೌದು, ದಿ ಆರ್ಚೀಸ್’ ಅನ್ನುವ ಸಿನಿಮಾದಲ್ಲಿ ಸುಹಾನಾ ಖಾನ್, ಖುಷಿ ಕಪೂರ್, ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಮುಂತಾದವರು ನಟಿಸುತ್ತಿದ್ದಾರೆ.
ಇನ್ನು ಈ ಸಿನಿಮಾ ನೆಟ್ಫ್ಲಿಕ್ಸ್ ಮೂಲಕ ರಿಲೀಸ್ ಆಗಲಿದ್ದು, ಶಾರುಖ್ ಪುತ್ರಿಯ ಚೊಚ್ಚಲ ಚಿತ್ರದ ಟನೆ ನೋಡಲು ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಸುಹಾನಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಸದಾ ತಮ್ಮ ಬೋಲ್ಡ್ ಲುಕ್ ಇರುವ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸುಹಾನಾ ಖಾನ್ ಅವರು ಹಾ-ಟ್ ಲುಕ್ ನಲ್ಲಿ ಕಾಣಿಸುವುದೇ ಹೆಚ್ಚು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರು ತುಂಬ ಫೇಮಸ್ ಆಗಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಸದ್ಯ ಮಿಲಿಯನ್ ಗಟ್ಟಲೆ ಜನರು ಫಾಲೋ ಮಾಡುತ್ತಿದ್ದಾರೆ.ಸುಹಾನಾ ಖಾನ್ ನ್ಯೂಯಾರ್ಕ್ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಈ ನಡುವೆ ಮತ್ತೆ ಸುಹಾನಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ. ಹೌದು, ದೊಡ್ಡದಾದ ಸ್ವಿಮ್ಮಿಂಗ್ ಫೂಲ್ ದಂಡೆಯಲ್ಲಿ ಕೂತ ಸುಹನಾ ಖಾನ್ ಕೈನಲ್ಲಿ ಪೆಪ್ಸಿ ಟಿನ್ ಹಿಡಿದು ಸಕತ್ ಆಗಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ.
ಸೂರ್ಯನ ಬೆಳಕು ಸುಹಾನಾ ಖಾನ್ ಮುಖದ ಮೇಲೆ ಮುತ್ತನಿಟ್ಟ ಕಾರಣ ಅವರ ಮುಖದಲ್ಲಿ ಮತ್ತಷ್ಟು ಹೊಳಪು ಮೂಡಿದೆ. ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು ಅವರ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ. ಈ ಮೂಲಕ ಮತ್ತೆ ತಮ್ಮ ಬೋಲ್ಡ್ ಲುಕ್ ನಿಂದ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಅದೇನೇ ಆಗಲಿ ಸುಹಾನಾ ಖಾನ್ ಅವರು ನಟಿಸುತ್ತಿರುವ ಹೊಸ ಸಿನಿಮಾ ಯಶಸ್ಸು ಕಾಣಲಿ ಎಂದು ಹಾರೈಸೋಣ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.