ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ತಾರೆಯರು ಆಗಾಗ್ಗೆ ಸುದ್ದಿಯಲ್ಲಿ ಇರುತ್ತಾರೆ. ಸಿನಿಮಾ ನಟಿಯರು ಅದೇನು ಮಾಡಿದರೂ ಸುದ್ದಿಯೇ. ಆದರೆ ಕೊಂಚ ಅತಿರೇಕವಾಗಿ ಆಡಿದರೆ ಮಾತ್ರ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಾರೆ. ಅವರ ಸುದ್ದಿಗಳು ವೈರಲ್ ಆಗುತ್ತವೆ. ಇದೇ ರೀತಿ ಟ್ರೋಲ್ ಆಗುವ ಅದೇ ರೀತಿ ವೈರಲ್ ಆಗುವಂತಹ ನಟಿ ಅಂದರೆ ಅದು ಕನ್ನಡದ ಸಂಯುಕ್ತಾ ಹೆಗ್ಡೆ. ಹೌದು, ನಟಿ ಸಂಯುಕ್ತಾ ಹೆಗ್ಡೆ ಸ್ಯಾಂಡಲ್ವುಡ್ನಲ್ಲಿ ಸದಾ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುವ ನಟಿ.
ಹಿಂದೊಮ್ಮೆ ಪಾರ್ಕ್ನಲ್ಲಿ ಡಾನ್ಸ್ ಪ್ರಾಕ್ಟೀಸ್ ಮಾಡಬೇಕಾದರೆ, ಕವಿತ ರೆಡ್ಡಿ ಅನ್ನುವವರ ಜೊತೆ ಕಿರಿಕ್ ಆಗಿತ್ತು. ಅದಾದ ನಂತರ ಕನ್ನಡ ಸಿನಿಮಾದಲ್ಲಿ ನೀವ್ಯಾಕೆ ನಟಿಸಲ್ಲ ಅನ್ನುವ ಪ್ರಶ್ನೆಗೆ ಕನ್ನಡ ನಿರ್ಮಾಪಕರ ವಿರುದ್ಧ ಗರಂ ಆಗಿದ್ದರು. ಕನ್ನಡ ನಟಿಯರಿಗೆ ಕನ್ನಡ ನಿರ್ಮಾಪಕರು ಅವಕಾಶ ಕೊಡಲ್ಲ ಎಂದು ಹೇಳಿದ್ದರು. ಹೀಗೆ ಸದಾ ವಿವಾದಗಳ ಮೇಲೆ ವಿವಾದಗಳನ್ನು ತನ್ನ ಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ.
ಇವರು ಕನ್ನಡದ ಬಿಗ್ ಬಾಸ್ 5ನೇ ಸಂಚಿಕೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದರು. ಆದರೆ ಅಲ್ಲಿ ಕೆಲವೇ ದಿನದಲ್ಲಿ ಹೊರಗೆ ಕಳುಹಿಸಿದ್ದರು. ಕಾರಣ ಪ್ರತಿಸ್ಪರ್ಧಿ ಸಮೀರ್ ಆಚಾರ್ಯ ಅವರ ಮೇಲೆ ಹ+ಲ್ಲೆ ಮಾಡಿದ್ದರು. ಹೀಗಾಗಿ ಬಿಗ್ ಬಾಸ್ ನಿಂದ ಹೊರ ಬಂದಿದ್ದರು. ಇನ್ನು ನಟಿ ಸಂಯುಕ್ತ ಹೆಗ್ಡೆ ಮೊದಲಿನಿಂದಲೂ, ಸಖತ್ ಬೋಲ್ಡ್. ಸದಾ ಬೋಲ್ಡ್ ಅವತಾರಗಳಲ್ಲಿ ಸಂಯುಕ್ತಾ ಹೆಗ್ಡೆ ಕಾಣಿಸಿಕೊಳ್ಳುತ್ತಾರೆ.
ಇವರ ಈ ಅವತಾರಗಳಿಂದಾಗಿ ಇವರು ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಸಂಯುಕ್ತಾ ಹೆಗ್ಡೆ ಇನ್ಯಾವುದಕ್ಕೂ ಕೇರ್ ಅನ್ನಲ್ಲ. ತಾನು ತನ್ನ ಇಷ್ಟ ಅನ್ನುವ ನೇಚರ್ ಅಚರದ್ದು. ಸಂಯುಕ್ತಾ ಹೆಗ್ಡೆ 17ನೇ ವಯಸ್ಸಿನಲ್ಲಿಯೇ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸೆಕೆಂಡ್ ಹಿರೋಯಿನ್ ಆಗಿ ಆಯ್ಕೆ ಆಗಿದ್ದರು. ಅದರಲ್ಲಿನ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ತನ್ನ ಫಸ್ಟ್ ಸಿನಿಮಾದಲ್ಲಿಯೇ ಇವರು ಹಿಟ್ ಆಗಿದ್ದರು.
ಇದೇ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಕೂಡ ಸಂಯುಕ್ತಾ ಹೆಗ್ಡೆ ನಟಿಸಿದ್ದರು. ಆ ನಂತರ 2017 ರಲ್ಲಿ ತೆರೆಕಂಡ `ಕಾಲೇಜ್ ಕುಮಾರ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು. ಇವರು ಇದೀಗ ತೆಲುಗು ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ.ಇವರಿಗೆ ತೆಲುಗು ಸಿನಿಮಾ ಇಂಡಸ್ಟ್ರಿ ಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಸಂಯುಕ್ತಾ ಹೆಗ್ಡೆ ಹಿಂದಿಯ ರೋಡಿಸ್ ಅನ್ನುವ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದರು.
ಅದರಲ್ಲಿ ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಸಂಯುಕ್ತಾ ಹೆಗ್ಡೆ ಮಲ್ಟಿ ಟ್ಯಾಲೆಂಟ್ ಅಂದರೂ ತಪ್ಪಾಗಲ್ಲ. ಇವರು ಬೆಸ್ಟ್ ಡ್ಯಾನ್ಸರ್. ಸಾಲ್ಸಾ, ಬೆಲ್ಲಿ, ಹೀಗೆ ಎಲ್ಲಾ ರೀತಿಯ ಡ್ಯಾನ್ಸ್ ಗಳನ್ನು ಮಾಡುತ್ತಾರೆ. ಹೂಲಾ ಹೂಪ್ ಡ್ಯಾನ್ಸ್ ಮಾಡುವ ಮೂಲಕ ಅನೇಕರನ್ನು ಬೆರಗಾಗಿಸಿದ್ದಾರೆ. ಇವರು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಸದಾ ಒಂದಲ್ಲ ಒಂದು ವಿಡಿಯೋ ಫೋಟೋ ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇವರು ಹೆಚ್ಚಾಗಿ ತನ್ನ ಅಮ್ಮನ ಜೊತೆ ರೀಲ್ಸ್ ಮಾಡುತ್ತಿರುತ್ತಾರೆ.
ಇದೀಗ ಇವರ ಒಂದು ವಿಡಿಯೋ ಭಾರೀ ವೈರಲ್ ಆಗ್ತಿದೆ.ಡ್ಯಾನ್ಸ್ ಕೊರಿಯೋಗ್ರಫರ್ ಒಬ್ಬರ ಜೊತೆ ಸಕತ್ ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಒಬ್ಬರಿಗೊಬ್ಬರು ಅತೀ ಹತ್ತಿರದಿಂದ ಮೈ ಗೆ ಮೈ ಒತ್ತಿಕೊಡು ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇದೇನು ಡ್ಯಾನ್ಸಾ ಅಥವಾ ರೋಮ್ಯಾನ್ಸಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಇನ್ನು ಸಂಯುಕ್ತಾ ಹೆಗ್ಡೆಯವರು ಕೆಲದಿನದ ಹಿಂದೆ ಭಾರೀ ಪ್ರಾ’ಣಾಪಾಯದಿಂದ ಪಾ’ರಾಗಿದ್ದಾರೆ ಎನ್ನಲಾಗಿದೆ.
ಸಂಯುಕ್ತಾ ನಟನೆಯ ‘ಕ್ರೀಂ’ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಸಿನಿಮಾದ ಸಾಹಸ ಸನ್ನಿವೇಶದ ಶೂಟಿಂಗ್ ಸಮಯದಲ್ಲಿ ಯಾವುದೇ ಡ್ಯೂಪ್ ಬಳಸದೆ ಸಂಯುಕ್ತಾ ಹೆಗ್ಡೆ ರಿಸ್ಕಿ ಸ್ಟಂಟ್ ಮಾಡಿದ್ದರು. ಈ ವೇಳೆ ಜಾರಿ ಬಿದ್ದ ಸಂಯುಕ್ತಾ ಅವರ ಮುಖ ಮತ್ತು ಕಾಲಿಗೆ ಪೆಟ್ಟಾಗಿತ್ತು. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.