ಅಗ್ನಿಸಾಕ್ಷಿಯಲ್ಲಿ ಸನ್ನಿಧಿ ಪಾತ್ರವನ್ನು ಮಾಡಿ ಗೆದ್ದ ನಟಿ ವೈಷ್ಣವಿ ಗೌಡ ಇದೀಗ ಬೇರೆ ಯಾವುದೇ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದೆ ಇದ್ದರೂ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿರುತ್ತಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವಾರು ವಿಡಿಯೋಗಳನ್ನು ಶೇರ್ ಮಾಡಿರುವ ವೈಷ್ಣವಿ ಗೌಡ, ರೀಲ್ ಗಳಿಗೆ ನೃತ್ಯ ಮಾಡುತ್ತಾ ಮಾಡುತ್ತಾ ಈಗೀಗ ಇನ್ನಷ್ಟು ಪಕ್ವವಾಗಿದ್ದಾರೆ. ವೈಷ್ಣವಿ ಗೌಡ ಅವರ ನೃತ್ಯ ನೋಡುವುದಕ್ಕೆ ಜನರಿಗೆ ಬಹಳ ಖುಷಿ.
ವೈಷ್ಣವಿ ಗೌಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಮಿಲಿಯನ್ ಗೂ ಅಧಿಕ ಫಾಲೋವರ್ ಗಳನ್ನ ಹೊಂದಿದ್ದಾರೆ. ಕನಸು ಕಾಣೋದು ಅದನ್ನು ನಂಬಿಕೆ ಇಟ್ಟು ಅಚೀವ್ ಮಾಡೋದು ಇದು ವೈಷ್ಣವಿ ಗೌಡ ಅವರ ಮೂಲ ಮಂತ್ರ. ಫಿಟ್ನೆಸ್ ಬಗ್ಗೆಯೂ ಸಾಕಷ್ಟು ಗಮನ ವಹಿಸುವ ವೈಷ್ಣವಿ ಗೌಡ ಅತ್ಯುತ್ತಮಯವಾಗಿ ಯೋಗ ಮಾಡುತ್ತಾರೆ. ಒಂದು ದಿನವೂ ಬಿಡದೆ ಯೋಗ ಮಾಡುವ ವೈಷ್ಣವಿ ಗೌಡ ಅವರಿಗೆ ಪುಸ್ತಕ ಓದುವುದು ಹಾಗೂ ಟ್ರಾವೆಲ್ ಮಾಡುವುದು ಬಹಳ ಇಷ್ಟದ ವಿಷಯವಂತೆ.
ಕನ್ನಡ ಕಿರುತೆರೆಯ ಡಿಂಪಲ್ ಕ್ವೀನ್ ಎಂದೇ ಹೆಸರಾಗಿರುವ ವೈಷ್ಣವಿ ಗೌಡ ದೇವಿ ಎನ್ನುವ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ರು. ದೇವಿ ಧಾರಾವಾಹಿಯಲ್ಲು ಅತ್ಯುತ್ತಮ ಪಾತ್ರ ನಿಭಾಯಿಸಿದ ವೈಷ್ಣವಿ ಗೌಡ ಹೆಚ್ಚು ಗುರುತಿಸಿಕೊಂಡಿದ್ದು ಮಾತ್ರ ಕಲರ್ಸ್ ವಾಹಿನಿಯಲ್ಲಿ ಕೆಲವು ವರ್ಷ ಪ್ರಸಾರವಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ.
ಇನ್ನು ವೈಷ್ಣವಿ ಗೌಡ ಬಿಗ್ ಬಾಸ್ ಮನೆಯನ್ನು ಕೂಡ ಪ್ರವೇಶಿಸಿ ಟಾಪ್ 4 ಹಂತಕ್ಕೆ ಬಂದಿದ್ದರು. ವೈಷ್ಣವಿ ಅವರ ತಾಳ್ಮೆ ಅವರನ್ನು ಪ್ರತಿಯೊಂದು ವಿಷಯದಲ್ಲಿಯೂ ಸಕ್ಸಸ್ ಕಾಣುವಂತೆ ಮಾಡುತ್ತದೆ. ಸದಾ ನಗು ಮುಖದಲ್ಲಿರುವ ವೈಷ್ಣವಿ ಗೌಡ, ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುವುದನ್ನು ಹೊರತುಪಡಿಸಿ ಕೆಲವು ಉತ್ಪನ್ನಗಳ ಪ್ರಮೋಷನ್ ಕೂಡ ಮಾಡುತ್ತಾರೆ. ಈಗಾಗಲೇ ಕೆಲವು ಹೆಸರಾಂತ ಬ್ರಾಂಡ್ ಗಳಿಗೆ ಮಾಡೆಲ್ ಆಗಿಯೂ ಕೂಡ ವೈಷ್ಣವಿ ಗೌಡ ಕಾಣಿಸಿಕೊಂಡಿದ್ದಾರೆ.
ವೈಷ್ಣವಿ ಗೌಡ ಎರಡು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಆದರೆ ಇತ್ತೀಚಿಗೆ ಅಷ್ಟಾಗಿ ಸಿನಿಮಾಗಳಲ್ಲಿ ಅಥವಾ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ವೈಷ್ಣವಿ ಗೌಡ. ವೈಷ್ಣವಿ ಗೌಡ ಒಂದು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇನ್ನು ನಟಿ ವೈಷ್ಣವಿ ಇತ್ತೀಚೆಗೆ ತಮ್ಮ ಕನಸಿನ ಮನೆಯೊಂದನ್ನು ಕೊಂಡುಕೊಂಡಿದ್ದಾರೆ. ಮನೆಯ ಪ್ರವೇಶದ ದಿನ ಅವರ ಸ್ನೇಹಿತರು ಬಂದು ಬಾಂಧವರು ಮನೆಗೆ ಬಂದು ವೈಷ್ಣವಿ ಗೌಡ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಹಲವು ಸದಸ್ಯರು ವೈಷ್ಣವಿ ಗೌಡ ಅವರ ಮನೆ ಪ್ರವೇಶಕ್ಕೆ ಆಗಮಿಸಿದ್ದರು. ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಭಾಷೆಯ ಹಾಡುಗಳಿಗೆ ಸ್ಟೆಪ್ಸ್ ಹಾಕುತ್ತಾರೆ. ಅವರ ಸುಂದರವಾದ ಮೈಮಾಟ ಜನರನ್ನ ಹೆಚ್ಚು ಆಕರ್ಷಿಸುತ್ತವೆ ಹಾಗಾಗಿ ವೈಷ್ಣವಿ ಗೌಡ ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅವರ ಹೆಸರಿನಲ್ಲಿ ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿವೆ.
ಒಟ್ಟಿನಲ್ಲಿ ಇರುವುದರಲ್ಲಿ ಹೇಗೆ ಆದರೂ ಸಂತೋಷವಾಗಿ ಇರಬೇಕು ಎನ್ನುವ ವೈಷ್ಣವಿ ಗೌಡ ಅವರ ನಿಲುವು ನಿಜಕ್ಕೂ ಇತರರಿಗೂ ಸ್ಪೂರ್ತಿ. ಇತ್ತೀಚಿಗೆ ಹಳದಿ ಬಣ್ಣದ ಟಾಪ್ ಹಾಗೂ ಬೆಲ್ ಬಾಟಮ್ ಜೀನ್ಸ್ ಧರಿಸಿ ನೃತ್ಯ ಮಾಡಿದ ವೈಷ್ಣವಿ ಗೌಡ ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿದ್ದಾರೆ. ವೈಷ್ಣವಿ ಗೌಡ ಅವರ ನೃತ್ಯಕ್ಕೆ ಸಾಕಷ್ಟು ಜನರು ಕಮೆಂಟ್ ಮಾಡಿದ್ದಾರೆ. ವೈಷ್ಣವಿ ಗೌಡ ಅವರ ಇತರ ಹಲವಾರು ವಿಡಿಯೋಗಳನ್ನು ನೀವು ಅವರ imvaishnavioffl ಖಾತೆಯಲ್ಲಿ ನೋಡಬಹುದು.
View this post on Instagram