PhotoGrid Site 1662520467379

ಎಲ್ಲರೂ ದಂಗಾಗುವಂತೆ ಅತೀ ದುಬಾರಿ ಬೆಲೆಯ ಕಾರ್ ಖರೀದಿ ಮಾಡಿದ ನಿರೂಪಕಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್! ಇದರ ಬೆಲೆ ಅದೆಷ್ಟು ಗೊತ್ತೇ? ಅಬ್ಬಬ್ಬಾ ನೋಡಿ!!

ಸುದ್ದಿ

ಇತ್ತೀಚಿಗೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರು ನಿರ್ದೇಶಕರು ನಟಿಯರು ಎಲ್ಲರೂ ಹೊಸ ಕಾರ್ ಖರೀದಿ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಹೌದು ಸುಮಾರು ನಟರು ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಈಗ ಇವರುಗಳ ಸಾಲಿಗೆ ಕನ್ನಡದ ಖ್ಯಾತ ನಿರೂಪಕಿಯೊಬ್ಬರು ಸೇರಿಕೊಂಡಿದ್ದಾರೆ. ಚೈತ್ರ ವಾಸುದೇವನ್ ಹೆಸರಿನ ನೀವು ಕೇಳಿರಬಹುದು ಬಿಗ್ ಬಾಸ್ ಸೀಸನ್ 7ರಲ್ಲಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ ನಂತರ ಚೈತ್ರ ವಾಸುದೇವನ್ ಅವರ ಖ್ಯಾತಿ ಹೆಚ್ಚಾಯ್ತು.

ಬದುಕು ಮೊದಲು ಧಾರಾವಾಹಿಗಳಲ್ಲಿ ನಟಿಸಿದ್ದ ಚೈತ್ರ ವಾಸುದೇವನ್ ನಿರೂಪಕಿಯಾಗಿಯೂ ಕೂಡ ಕಾರ್ಯನಿರ್ವಹಿಸಿದ್ದಾರೆ. ಚೈತ್ರ ವಾಸುದೇವನ್ ಅವರು ತಮಿಳಿಯನ್ ಎಂದು ಬಹಳಷ್ಟು ಜನ ಅಂದುಕೊಂಡಿದ್ದಾರೆ ಆದರೆ ಚೈತ್ರ ಪಕ್ಕ ಕುಂದಾಪುರದ ಬಡಗಿ ಬೆಂಗಳೂರಿನ ಕನ್ನಡವನ್ನ ಬಹಳ ಚೆನ್ನಾಗಿ ಮಾತನಾಡುವ ಚೈತ್ರ ಅಪ್ಪಟ ಕನ್ನಡತಿ. ಚೈತ್ರ ವಾಸುದೇವನ್ ಇತ್ತೀಚಿಗೆ ಯೂಟ್ಯೂಬ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ.

ತಾವು ಭಾಗವಹಿಸಿದ ಎಲ್ಲಾ ಕಾರ್ಯಕ್ರಮದ ಶೂಟಿಂಗ್ ಸೆಟ್ ಇವೆಂಟ್ ಮೇಕಿಂಗ್ ವಿಡಿಯೋ ಬ್ಯೂಟಿ ಪ್ರಾಡೆಕ್ಟ್ ಗಳ ವಿಡಿಯೋ ಹೀಗೆ ಮೊದಲಾದ ವಿಡಿಯೋಗಳನ್ನು ಮಾಡಿ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲದೆ ಇನ್ಸ್ಟಾಗ್ರಾಮ್ ನಲ್ಲಿಯೂ ಕೂಡ ಚೈತ್ರ ವಾಸುದೇವನ್ ಖಾತೆಯನ್ನು ಹೊಂದಿದ್ದು ಅಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ.

ಅತ್ಯುತ್ತಮವಾಗಿ ನಿರೂಪಣೆ ಮಾಡಬಲ್ಲ ಚೈತ್ರ ವಾಸುದೇವನ್ ಸಾಕಷ್ಟು ಸೆಲೆಬ್ರಿಟಿಗಳ ಸಂದರ್ಶನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಚೈತ್ರ ವಾಸುದೇವನ್ ತಮ್ಮ ಅಭಿಮಾನಿಗಳ ಜೊತೆ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ ಅದೇನು ಗೊತ್ತಾ!? ಚೈತ್ರ ವಾಸುದೇವನ್ ಅವರ ತಂದೆ ಒಬ್ಬ ಉದ್ಯಮಿ. ಇನ್ನು ಚೈತ್ರ ಅವರ ತಂದೆಯ ಹೆಸರು ವಾಸುದೇವ ಎಂಬುದಾಗಿ.

ಆದರೆ ಪಾಸ್ ಪೋರ್ಟ್ ನಲ್ಲಿ ತಪ್ಪಾಗಿ ಬರೆದು, ಕೊನೆಗೆ ವಾಸುದೇವನ್ ಎಂದೇ ಕರೆಯಲ್ಪಟ್ತರು ಎಂದು ಚೈತ್ರಾ ಹೇಳಿಕೊಂಡಿದ್ಡಾರೆ. ಚೈತ್ರ ವಾಸುದೇವನ್ ಹಂಚಿಕೊಂಡ ಕೆಲವು ಫೋಟೋಗಳು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹೌದು, ಚೈತ್ರ ವಾಸುದೇವನ್ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಅದುವೇ ರೇಂಜ್ ರೋವರ್ ಈವೋಕ್ ಎಸ್ ಯು ವಿ. ಹೊಸ ಕಾರನ್ನು ಖರೀದಿಸಿ ಫೋಟೋಗಳನ್ನು ಹಂಚಿಕೊಂಡಿರುವ ಚೈತ್ರ ವಾಸುದೇವನ್ ತಮ್ಮ ಬಹುದಿನದ ಕನಸು ನನಸಾಗಿರುವುದರ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಚೈತ್ರ ಮಾಸುದೇವನ ಅವರಿಗೆ ಈಗಾಗಲೇ ಮದುವೆಯಾಗಿದೆ ಅವರ ಪತಿ ಇವೆಂಟ್ ಮ್ಯಾನೇಜ್ಮೆಂಟ್ ಮಾಡುತ್ತಾರೆ. ಚೈತ್ರ ವಾಸುದೇವನ್ ಅವರು ಫಿಲಂ ಫೇರ್ ಮತ್ತು ಮಿರ್ಚಿ ಮ್ಯೂಸಿಕ್ ಶೋಗಳಲ್ಲಿ ನಿರೂಪಣೆ ಮಾಡಿ ನಿರೂಪಣೆಯಲ್ಲಿ ಸೈನಿಸಿಕೊಂಡಿದ್ದಾರೆ. ಇನ್ನು ಚೈತ್ರ ವಾಸುದೇವನ್ ಖರೀದಿಸಿದ ರೇಂಜ್ ರೋವರ್ ಹೊಸ ಮಾಡೆಲ್ ಆಗಿದ್ದು ಬಹಳ ದುಬಾರಿ ಅಲ್ಲದೆ 2022ರ ಹೊಸ ಆಡಿಷನ್ ಆಗಿದೆ.

PhotoGrid Site 1662520548276

ಇನ್ನು ಈ ಕಾರು ದುಬಾರಿ ಕಾರ್ ಗಳಾದ ಬಿಎಂ ಡಬ್ಲ್ಯೂ, ವೊಲ್ಟ್ ಎಕ್ಸ್ ಸಿ 60 ಮೊದಲಾದ ಕಾರುಗಳಿಗೇ ಪೈಪೋಟಿ ನಡೆಸುತ್ತಿದೆ. ಸದ್ಯ ವೈತ್ರಾ ವಾಸುದೇವನ್ ಮಾತ್ರ ದುಬಾರಿ ಕಾರನ್ನು ಕೊಂಡುಕೊಂಡು ಸಂತೋಷದಿಂದ ಟ್ರಿಪ್ ಆರಂಭಿಸಿದ್ಡಾರೆ. ವೈತ್ರಾ ಅವರ ಅಭಿಮಾನಿಗಳು ಸೇಫ್ ಡ್ರೈವ್ ಅಂತ ಬೆಸ್ಟ್ ವಿಶಸ್ ತಿಳಿಸಿದ್ದಾರೆ. ಸ್ನೇಹಿತರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಯಗಳನ್ನು ನಮ್ಮೊಂದಿಗೆ ಕಮೆಂಟ್ ಮಾಡಿ ಹಂಚಿಕೊಳ್ಳಿ.

Leave a Reply

Your email address will not be published. Required fields are marked *