ನಟಿ ರಂಜನಿ ರಾಘವನ್ ಇಂದು ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿರುವ ನಟಿ. ರಂಜಿನಿ ರಾಘವನ್ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದು ಪುಟ್ಟಗೌರಿ ಮದುವೆ ಧಾರವಾಹಿಯ ಮೂಲಕ. ಇದರಲ್ಲಿ ಅವರು ನಿಭಾಯಿಸಿದ ಪಾತ್ರ ಬಹಳ ಭಾವನಾತ್ಮಕವಾಗಿ ಇದ್ದು, ಈ ಪಾತ್ರದ ಮೂಲಕವೇ ಕನ್ನಡಿಗರ ಮನೆ ಮಾತಾದರು. ಇಂದು ನಟಿ ರಂಜನಿ ರಾಘವನ್ ಹೆಚ್ಚು ಗುರುತಿಸಿಕೊಳ್ಳುತ್ತಿರುವುದು ಒಬ್ಬ ಕನ್ನಡ ಶಿಕ್ಷಕಿಯಾಗಿ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾವಾಗುತ್ತಿರುವ ಕನ್ನಡತಿ ಎನ್ನುವ ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರದಲ್ಲಿ ನಟಿ ರಂಜಿನಿ ರಾಘವನ್ ಅಭಿನಯಿಸುತ್ತಿದ್ದಾರೆ. ಇನ್ನು ಅವರ ಈ ಪಾತ್ರವನ್ನು ಮೆಚ್ಚಿಕೊಳ್ಳದವರೆ ಇಲ್ಲ. ಭುವಿ ಹಾಗೂ ಹರ್ಷ ಲವ್ ಸ್ಟೋರಿ ಮದುವೆಯಲ್ಲಿ ಎಂಡ್ ಆಗ್ಬೇಕು ಅಂತ ಅಭಿಮಾನಿಗಳ ಆಸೆಯಾಗಿತ್ತು. ಹಾಗೆಯೇ ಅವರಿಬ್ಬರ ಮದುವೆಯೂ ಆಗಿದೆ.
ಈ ಧಾರಾವಾಹಿಯಲ್ಲಿ ವಿಶೇಷವಾದ ಪಾತ್ರವನ್ನು ನಿಭಾಯಿಸುತ್ತಿರುವ ರಂಜನಿ ರಾಘವನ್, ಧಾರಾವಾಹಿ ಮಾತ್ರವಲ್ಲದೆ, ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ನಟಿ ರಂಜನಿ ರಾಘವನ್ ಅಭಿನಯದ ಎರಡು ಚಿತ್ರಗಳು ಈಗಾಗಲೇ ತೆರೆಕಂಡಿದ್ದು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅಲ್ಲದೆ ಈ ಸಿನಿಮಾಗಳು ಅಮೆಜಾನ್ ಪ್ರೈಮ್ ನಲ್ಲಿಯೂ ಕೂಡ ಈಗಾಗಲೇ ಪ್ರಸಾರವಾಗಿದೆ. ರಂಜನಿ ಅವರು ನಟ ದಿಗಂತ್ ಜೊತೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಹಾಗೂ ‘ಟಕ್ಕರ್’ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ರಂಜನಿ ರಾಘವನ್ ನಟಿ ಮಾತ್ರವಲ್ಲ ಉತ್ತಮ ನೃತ್ಯಗಾರ್ತಿ, ಗಾಯಕಿ ಹಾಗೂ ಸಾಹಿತಿಯೂ ಕೂಡ ಹೌದು. ಇತ್ತೀಚಿಗೆ ಅವರ ಕಥೆ ಡಬ್ಬಿ ಎನ್ನುವ ಪುಸ್ತಕ ಕೂಡ ಬಿಡುಗಡೆಯಾಗಿದೆ. ಬೆಂಗಳೂರಿನ ಮೂಲದ ನಟಿ ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್. ಸದಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಇತ್ತೀಚಿಗೆ ರೀಲ್ ಒಂದನ್ನು ಮಾಡಿದ್ದು ಅದರಲ್ಲಿ ‘ಏನೇನೋ ಚಾಲೆಂಜ್ ಮಾಡ್ತೀವಿ ಲಂಗ ದಾವಣಿ ಚಾಲೆಂಜ್ ಯಾಕೆ ಮಾಡಬಾರದು’ ಅಂತ ಬರೆದುಕೊಂಡಿದ್ದಾರೆ. ಸಾಕಷ್ಟು ಜನ ಇದಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ಟ್ರೆಂಡ್ ಆಗಿರುವ ಗುರು ಶಿಷ್ಯರು ಸಿನಿಮಾದ ‘ಆಣೆ ಮಾಡಿ ಹೇಳುತೀನಿ’ ಹಾಡಿಗೆ ಲಂಗ ದಾವಣಿ ಧರಿಸಿ ಸ್ಟೆಪ್ ಹಾಕಿದ್ದಾರೆ.
ಈ ಸ್ಟೆಪ್ ಈಗಾಗಲೇ ಟ್ರೆಂಡ್ ಆಗಿದ್ದು ಸಾಕಷ್ಟು ಮಂದಿ ಈ ಹಾಡಿಗೆ ರೀಲ್ ಮಾಡಿದ್ದಾರೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿ ಅಮೂಲ್ಯ ಕೂಡ ತನ್ನ ಫಸ್ಟ್ ರೀಲ್ ನಲ್ಲಿ ಇದೇ ಹಾಡಿಗೆ ಸ್ಟೆಪ್ ಹಾಕಿದ್ದರು. ರಂಜನಿ ರಾಘವನ್ ಲಂಗ ದಾವಣಿ ಚಾಲೆಂಜ್ ಗೆ ಯಾರೆಲ್ಲ ಸಪೋರ್ಟ್ ಮಾಡ್ತೀರಿ ಅಂತ ನಮಗೆ ಕಮೆಂಟ್ ಮಾಡಿ ತಿಳಿಸಿ.
View this post on Instagram