ಸೆಲೆಬ್ರಿಟಿಗಳು ಅಂತ ಕರೆಸಿಕೊಂಡವರು ಹೆಚ್ಚಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಪ್ರತಿನಿತ್ಯ ತಮ್ಮ ಫೋಟೋಗಳನ್ನು, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇನ್ನು ಈ ರೀತಿ ಶೇರ್ ಮಾಡುವಂತಹ ಫೋಟೋಗಳಿಗೆ ಪ್ರತಿಸಲವೂ ನೆಟ್ಟಿಗರು ಪಾಸಿಟಿವ್ ಕಾಮೆಂಟ್ ಗಳನ್ನೇ ಹಾಕುತ್ತಾರೆ ಎಂದು ಹೇಳಲು ಸಾಧ್ಯ ಇಲ್ಲ. ಕೆಲಮೊಮ್ಮೆ ಲಿಮಿಟ್ ಮೀರಿದಂತಹ ಕಾಮೆಂಟ್ ಗಳನ್ನು ಹಾಕುತ್ತಾರೆ.
ಇನ್ನು ಈಗಿನ ಕಾಲದಲ್ಲಿ ಒಳಿತನ್ನು ನೋಡುವರಿಗಿಂತ ಕೆಟ್ಟದನ್ನು ಬಿಂಬಿಸುವವರು ಜಾಸ್ತಿ.ಹೆಚ್ಚಾಗಿ ಹೆಣ್ಮಕ್ಕಳನ್ನು ಈ ಸಮಾಜದಲ್ಲಿ ತುಂಬಾ ಕೆಟ್ಟದಾಗಿ ನೋಡಲಾಗುತ್ತದೆ. ಸಮಾಜದಲ್ಲಿ ಗುರುತಿಸಿಕೊಂಡ ಹೆಣ್ಮಕ್ಕಳನ್ನು ಸಮಾಜದ ಕೆಲ ಕೀಳು ಮನಸ್ಥಿತಿಯ ಜನರು ಕೀಳಾಗಿಯೇ ನೋಡುತ್ತಾರೆ.ಆಕೆಯ ಸಾಧನೆಯನ್ನು ಗುರುತಿಸಿ ಬೆನ್ನು ತಟ್ಟುವ ಬದಲು ನೆಗೆಟಿವ್ ವಿಚಾರಗಳನ್ನು ಎತ್ತಿ ಹಿಡಿದು ಕೆಟ್ಟದಾಗಿ ಮಾತನಾಡುತ್ತಾರೆ.
ಇದೇ ರೀತಿ ತೆಲುಗು ಇಂಡಸ್ಟ್ರಿ ಯ ಖ್ಯಾತ ನಿರೂಪಕಿಗೆ ಅನಸೂಯಾ ಭಾರಧ್ವಜ್ ಅವರಿಗೆ ಒಬ್ಬ ನೆಟ್ಟಿಗ ಕೀಳಾಗಿ ಕಾಮೆಂಟ್ ಮಾಡಿದ್ದಾನೆ.ಅದಕ್ಕೆ ಅನಸೂಯಾ ಭಾರದ್ವಾಜ್ ಅವರು ಆ ನೆಟ್ಟಿಗ ಮತ್ತೆಂದೂ ಅಂತಹ ಕಾಮೆಂಟ್ ಮಾಡಬಾರದು ಆ ರೀತಿ ಉತ್ತರ ನೀಡಿದ್ದಾರೆ. ಅನಸೂಯ ಭಾರದ್ವಾಜ್ ಅವರು ತೆಲುಗಿನ ಫೇಮಸ್ ನಿರೂಪಕಿ ಅಷ್ಟೇ ಅಲ್ಲ ನಟಿಯೂ ಹೌದು.ಇವರು ಪ್ಯಾನ್ ಇಂಡಿಯಾ ಸಿನಿಮಾ ಆದ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲಿ ದಾಕ್ಷಾಯಿಣಿ ಪಾತ್ರ ಮಾಡಿ ವಿಭಿನ್ನವಾಗಿ ನಟಿಸಿದ್ದರು.
ಇದೇ ಮೊದಲಲ್ಲ, ಇವರು ಈ ಹಿಂದೆಯೂ ಅನೇಕ ಸಿನಿಮಾಗಳಲ್ಲಿ ನಟಸಿದ್ದಾರೆ.ಇವರು ತೆಲುಗಿನ ರಂಗಸ್ಥಳಂ ಚಿತ್ರದಲ್ಲಿ ರಂಗಮ್ಮತ್ತೆಯಾಗಿ ಮಿಂಚಿದ್ದರು. ಇವರಿಗೆ ಸಿನಿಮಾಗಳಲ್ಲಿ ನಟಸುವ ಅವಕಾಶ ಸಿಗಲು ಕಾರಣ ಅವರ ಅಂಕರಿಂಗ್. ಹೌದು, ಇವರ ನಿರೂಪಣಾ ಶೈಲಿಗೆ ಸಾವಿರಾರು ಅಭಿಮಾನಿಗಳು ಇದ್ದಾರೆ. ಇವರು ಅತಿ ಹೆಚ್ಚು ಟಿ ಆರ್ ಪಿ ಹೊಂದಿರುವ ನಿರೂಪಕಿ.ಮೊದಲು ಇವರು ಹಾಸ್ಯ ಕಾರ್ಯಕ್ರಮವನ್ನು ಬಹಳ ಅಧ್ಬುತವಾಗಿ ನಡೆಸಿಕೊಡುತ್ತಿದ್ದರು.
ಅನೇಕ ರಿಯಾಲಿಟಿ ಶೋ ಗಳನ್ನು ಯಶಸ್ವಿ ಯಾಗಿ ನಡೆಸಿಕೊಟ್ಟವರು, ಸಾಕ್ಷಿ ಟಿವಿಯಲ್ಲಿ ಆಂಕರ್ ಆಗಿದ್ದ ಇವರು ನಿರೂಪಕಿಯರು ಕೇವಲ ಸೀರೆ ಉಟ್ಟು ಸಾಂಪ್ರದಾಯಿಕ ವಾಗಿ ಶೋ ನಡೆಸಿಕೊಡಬೇಕು ಅನ್ನುವ ಸಂಪ್ರದಾಯ ವನ್ನು ಮುರಿದು ಹಾಕಿದವರು.ಹೌದು, ಆಂಕರಿಂಗನ್ನು ಮಾಡರ್ನ್ ಡ್ರೆಸ್ ಹಾಕುವ ಮೂಲಕವೂ ಮಾಡಬಹುದು ಅನ್ನುವ ಟ್ರೆಂಡ್ ಕ್ರಿಯೇಟ್ ಮಾಡಿದವರು.ಇವರ ಶೋ ಅಂದರೆ ಪಡ್ಡೆ ಹುಡುಗರು ಕೂಡ ನೋಡುತ್ತಿದ್ದರು.
ಕಾರಣ ಅವರ ಡ್ರೆಸ್ಸಿಂಗ್ ಸ್ಟೈಲ್. ಇನ್ನು ಇವರು ಮದುವೆ ಅಗಿ ಎರಡು ಮಕ್ಕಳ ತಾಯಿ ಆಗಿದ್ದರೂ ಅವರನ್ನು ಯಾರೂ ಕೂಡ ಅ ರೀತಿ ಹೇಳಲು ಸಾಧ್ಯ ಇಲ್ಲ. ಕಾಣ ಅಷ್ಟು ಅದ್ಭುತ ವಾಗಿ ತನ್ನ ದೇಹ ಸೌಂದರ್ಯ ವನ್ನು ಕಾಪಾಡಿಕೊಂಡು ಬಂದಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚಾಗಿ ಹಾಟ್ ಅಗಿ ಡ್ರೆಸ್ ಮಾಡಿಕೊಂಡ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಿನಿ ಡ್ರೆಸ್, ಶಾರ್ಟ್ ನಲ್ಲಿಯೇ ಹೆಚ್ಚಾಗಿ ಇವರು ಕಾಣಿಸಿಕೊಳ್ಳುತ್ತಾರೆ.
ಈ ರೀತಿ ಇತ್ತೀಚೆಗೆ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಒಂದು ಫೋಟೊಗೆ ಟ್ವಿಟ್ಟಿಗ, “ನೀವು ಎರಡು ಮಕ್ಕಳ ತಾಯಿಯಾಗಿಯೂ ಇಂತಹ ಬಟ್ಟೆ ತೊಡುತ್ತೀರಲ್ಲಾ, ನಿಮಗೆ ನಾಚಿಕೆ ಆಗೋದಿಲ್ವಾ?ನೀವು ಇಡೀ ತೆಲುಗು ಮಹಿಳಾ ಸಮುದಾಯಕ್ಕೆ ಅವಮಾನ” ಎಂದು ಕಾಮೆಂಟ್ ಮಾಡಿದ್ದ. ಇದರಿಂದ ಕೋಪಗೊಂಡ ಅನಸೂಯ ಅವರು, “ನಿಮ್ಮ ಯೋಚನಾ ಲಹರಿ ಇಡೀ ಗಂಡಸಿನ ಸಮುದಾಯಕ್ಕೆ ಅವಮಾನ ಮಾಡಿದಂತೆ.
ನಿಮ್ಮ ಕೆಲಸವನ್ನು ನೀವು ಮಾಡುವುದು ಉತ್ತಮ, ನನಗೆ ಏನು ಅನಿಸುತ್ತದೆಯೋ ಅದನ್ನು ನಾನು ಮಾಡುತ್ತೇನೆ” ಎಂದು ಜಬರ್ ದಸ್ತ್ ಉತ್ತರ ನೀಡಿದ್ದಾರೆ. ಈ ಉತ್ತರ ನೋಡಿ ಮತ್ತೆ ಎಂದು ಕೂಡ ಆತ ಯಾರಿಗೂ ಕಾಮೆಂಟ್ ಮಾಡುವುದಿಲ್ಲ ಆ ರೀತಿ ಹೇಳಿದ್ದಾರೆ.ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.