ಬಹುಭಾಷಾ ನಟಿ ಮೀನಾ ಅವರು ಇದೀಗ ಮದುವೆಯ ಸಂಭ್ರಮದಲ್ಲಿ ಇದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲೂ ನಟಿಸಿರುವ ಮೀನ ಸಿನಿಪ್ರಿಯರ ಅಚ್ಚುಮೆಚ್ಚಿನ ನಟಿಯು ಹೌದು. ನೋಡುವುದಕ್ಕೆ ಸ್ಪುರದ್ರೂಪಿ ಆಗಿರುವ ನಟಿ ರಮ್ಯಾ ಒಂದು ಕಾಲದಲ್ಲಿ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡವರು. ನೋಡುವುದಕ್ಕೆ ಅತ್ಯಂತ ಸುಂದರವಾಗಿದ್ದ ಮೀನಾ ಅವರಿಗೆ ಚಿತ್ರರಂಗ ಪ್ರವೇಶ ಮಾಡುವುದು ಅಷ್ಟು ಕಷ್ಟವಾಗಲಿಲ್ಲ.
ಬಾಲ ನಟಿಯಾಗಿ ಸಿನಿಮಾದಲ್ಲಿ ಬಣ್ಣ ಹಚ್ಚಲು ಆರಂಭಿಸಿದ ಮೀನಾ ಬಹಳ ಬೇಗ ದೊಡ್ಡ ಸ್ಟಾರ್ ನಟಿ ಎನಿಸಿಕೊಂಡರು. ಸಿನಿಮಾದಲ್ಲಿ ಎಷ್ಟು ಹೆಚ್ಚು ಖ್ಯಾತಿಯನ್ನು ಗಳಿಸಿಕೊಂಡರು. ವೈಯಕ್ತಿಕ ಜೀವನದಲ್ಲಿ ಅಂತಹ ಕೆಲವು ನೋವಿನ ಘಟನೆಗಳನ್ನು ಕೂಡ ಎದುರಿಸಿದ್ದಾರೆ ನಟಿ ಮೀನಾ. ಹೌದು ನಟಿ ಮೀನಾ 2009ರಲ್ಲಿ ಆಗರ್ಭ ಶ್ರೀಮಂತನಾಗಿದ್ದ ವಿದ್ಯಾಸಾಗರ್ ಅವರನ್ನು ವಿವಾಹವಾದರೂ ವಿದ್ಯಾಸಾಗರ್ ಇಂಜಿನಿಯರ್ ವೃತ್ತಿ ಮಾಡುತ್ತಿದ್ದವರು.
ಉತ್ತಮವಾಗಿ ಸಂಸಾರಿಕ ಜೀವನ ನಡೆಸಿದ ಮೀನ ಹಾಗೂ ವಿದ್ಯಾಸಾಗರ್ ಅವರಿಗೆ ಆರು ವರ್ಷದ ಪುಟ್ಟ ಮಗುವೂ ಇದೆ. ಕರೋನಾ ಎನ್ನುವ ಮಹಾಮಾರಿ ಮೀನಾ ಅವರ ಸಂಸಾರವನ್ನು ಬಿಟ್ಟಿಲ್ಲ. ಇವರ ಕುಟುಂಬದಲ್ಲಿ ಕೆಲ ಸದಸ್ಯರು ಕರೋನಾಗೆ ತುತ್ತಾಗಿದ್ದರು. ಇನ್ನು ಮೀನಾ ಅವರ ಪತಿ ವಿದ್ಯಾಸಾಗರ್ ಕರೋನಾಗೆ ಬ – ಲಿಯಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ಅ-ಸುನೀಗಿದ್ದಾರೆ.
ಇದರಿಂದ ಮೀನ ಅವರು ಸಾಕಷ್ಟು ನೊಂದುಕೊಂಡಿದ್ದರು. ದಿಕ್ಕು ಕಾಣದೆ ಕಂಗಟ್ಟಿದ್ದರು. ಪುಟ್ಟ ಮಗುವನ್ನು ಇಟ್ಟುಕೊಂಡು ಒಂಟಿಯಾಗಿ ಜೀವನ ನಡೆಸುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಸಿನಿಮಾದ ಅಭಿನಯವನ್ನು ಬಿಟ್ಟು ಮನೆಯಲ್ಲಿ ಇದ್ದಾರೆ. ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿಲ್ಲ. ವಿದ್ಯಾಸಾಗರ್ ಅವರನ್ನ ಕಳೆದುಕೊಂಡು ಆರು ತಿಂಗಳುಗಳೆ ಆಯಿತು ಒಂಟಿಯಾಗಿ ಜೀವನ ನಡೆಸುವುದು ಅವರಿಗೂ ಕಷ್ಟವಾಗುತ್ತಿದೆ.
ಇದೇ ಕಾರಣಕ್ಕೆ ಅವರ ಕುಟುಂಬಸ್ಥರು ಮೀನ ಅವರಿಗೆ ಮತ್ತೊಂದು ಮದುವೆ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿದ್ಯಾಸಾಗರ್ ಸಾಕಷ್ಟು ಹಣ, ಆಸ್ತಿ ಮಾಡಿಟ್ಟಿದ್ದಾರೆ ಹಣಕ್ಕಾಗಿ ಅಲ್ಲದೆ ಇದ್ರೂ ಭಾವನಾತ್ಮಕ ಆಸರೆಯಾಗಿ ಇನ್ನೊಂದು ಜೀವ ಜೊತೆಯಲ್ಲಿ ಇದ್ರೆ ಮೀನಾ ಅವರಿಗೂ ಸಹಾಯವಾಗುತ್ತೆ ಅಂತ ಕುಟುಂಬಸ್ಥರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅದೇ ರೀತಿ ಮೀನಾ ಅವರು ಕೂಡ ಎರಡನೇ ಮದುವೆಗೆ ಸಮ್ಮತಿ ಸೂಚಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯು ಇಲ್ಲ. ಏನೇ ಆದರೂ ನೋವಿನಲ್ಲಿರುವ ಮೀನ ಚೇತರಿಸಿಕೊಳ್ಳಬೇಕು ಎನ್ನುವುದೇ ಅವರ ಅಭಿಮಾನಿಗಳ ಆಶಯ.