ಸದ್ಯ ಕನ್ನಡದ ಫೇಮಸ್ ನಟಿ ಆಶಿಕಾ ರಂಗನಾಥ್. ಸ್ಯಾಂಡಲ್ ವುಡ್ ನ ಮಿಲ್ಕ್ ಬ್ಯೂಟಿ ಎಂದೇ ಖ್ಯಾತರಾಗಿರುವ ಆಶಿಕಾ ರಂಗನಾಥ್ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಆಶಿಕಾ ರಂಗನಾಥ್ ಅವರ ಒಂದು ವಿಡಿಯೋ ವೈರಲ್ ಆಗಿದೆ. ಕೈಯಲ್ಲಿ ಬಾಟಲ್ ಹಿಡಿದು ಕುಡಿಯುತ್ತಾ, ತೂರಾಡುತ್ತಾ ಬರುವ ಆಶಿಕ ರಂಗನಾಥ್ ವಿಡಿಯೋ ಮಾಡ್ತಾ ಇರುವವನಿಗೆ ಬೆರಳು ತೋರಿಸಿ ವಿಡಿಯೋ ಸ್ಟಾಪ್ ಮಾಡು ಎಂದು ಹೇಳುತ್ತಾರೆ.
ಹೌದು ಸದ್ಯ ಮಿಲ್ಕ್ ಬ್ಯೂಟಿಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬ್ಯಾಗ್ರೌಂಡ್ ನಲ್ಲಿ ಜನ ನಿಂತಿರುವುದು ನೋಡಿದರೆ ಇದು ಒಂದು ಸಿನಿಮಾದ ಶೂಟಿಂಗ್ ಇರಬೇಕು ಎಂದೇ ಯಾರಿಗಾದರೂ ಅರ್ಥವಾಗುತ್ತದೆ. ಕೆಲವರು ಇದು ಆಶಿಕ ಅವರ ಹೊಸ ಸಿನಿಮಾದ ಶೂಟಿಂಗ್ ಎಂದುಕೊಂಡಿದ್ದಾರೆ.
ಇನ್ನು ಕೆಲವರು ಈಗಾಗಲೇ ನಟಿಸಿರುವ ಇನ್ನೇನು ತೆರೆ ಕಾಣಲಿರುವ ಸಿನಿಮಾದ ಪ್ರಮೋಷನ್ ಇರಬಹುದು ಎಂದು ಊಹಿಸುತ್ತಿದ್ದಾರೆ. ರೆಮೋ ಸಿನಿಮಾದ ಪಾತ್ರ ಆಗಿದ್ದರೆ, ಇವರಿಗೆ ಆಶಿಕಾ ರಂಗನಾಥ್ ಅಭಿನಯಿಸಿದ ಹೊಸದೊಂದು ಪಾತ್ರ ಇದಾಗಿರಲಿದೆ. ಇದರಲ್ಲಿ ಬಹಳ ಡಿಫರೆಂಟ್ ಆಗಿ ಆಶಿಕಾ ಕಾಣಿಸಿಕೊಂಡಿದ್ದಾರೆ.
ನಟಿ ಆಶಿಕಾ ಅವರು ಹೀಗೆ ಬಾಟಲ್ ಹಿಡಿದು ಬರುವ ದೃಶ್ಯವನ್ನು ನೋಡಿ ರೆಮೋ ಸಿನಿಮಾದ ದೃಶ್ಯ ಎಂದು ಹೇಳಿರುವ ಕೆಲವರು, ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾ ಬಗ್ಗೆ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿಕೊಂಡಿದ್ದಾರೆ. ಆಶಿಕಾ ಅವರು ಚರಣ್ ಜೊತೆ ರಾಂಬೊ ಸಿನಿಮಾದಲ್ಲಿ ನಟಿಸಿ ಯಶಸ್ವಿಯಾಗಿದ್ದರು. ಇನ್ನು ಇತ್ತೀಚಿಗೆ ತೆಲುಗು ಸಿನಿಮಾ ಇಂಡಸ್ಟ್ರಿಗೂ ಕೂಡ ಪ್ರವೇಶ ಮಾಡಿದ್ದಾರೆ. ಆಶಿಕ ರಂಗನಾಥ್ ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು.
ಈ ಸಿನಿಮಾದ ಬಗ್ಗೆ ಹೆಚ್ಚು ಮಾಹಿತಿ ತಿಳಿಯಬೇಕಷ್ಟೇ. ಆಶಿಕಾ ರಂಗನಾಥ್, ಒಬ್ಬಳು ಪ್ರತಿಭಾನ್ವಿತ ನಟಿ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸುವತ್ತ ದಾಪುಗಾಲು ಇಡುತ್ತಿರುವ ಆಶಿಕಾ ಹೆಚ್ಚು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಶಿಕಾ ವಿಡಿಯೋಗೆ ಕೆಲವರು ನೆಗೆಟಿವ್ ಕಮೆಂಟ್ ಕೂಡ ಮಾಡುತ್ತಿದ್ದಾರೆ.
ಆದರೆ ಇದು ಶೂಟಿಂಗ್ ಸೆಟ್ ನಲ್ಲಿ ತಮಾಷೆಗಾಗಿ ಮಾಡಿದ್ದು ಇರಬಹುದು ಎನ್ನುವುದು ಆಶಿಕಾ ಅಭಿಮಾನಿಗಳ ಮಾತು. ಆಶಿಕಾ ರಂಗನಾಥ್ ಯಾವುದೇ ಗಾ-ಸಿ-ಪ್ ಗಾಗಲೀ, ಕಾಂ-ಟ್ರ್ವ-ರ್ಸಿ-ಗಾಗಲೀ ಸಿಲುಕಿಕೊಂಡವರಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದೇ ಇದ್ದವರು. ಹಾಗಾಗಿಯೇ ಅವರಿಗೆ ಆಫರ್ ಗಳೂ ಕೂಡ ಹೆಚ್ಚಾಗಿ ಬರುತ್ತಿವೆ.
ಅವರ ಸಿಂಪ್ಲಿಸಿಟಿಗಾಗಿ ಕನ್ನಡಿಗರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ಡಾರೆ. ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಕೂಡ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಆದರೆ ಇದೀಗ ಸದ್ಯ ವೈರಲ್ ಆಗಿರುವ ಅವರ ವಿಡಿಯೋ ಬಗ್ಗೆ ಮಾತ್ರ ಸರಿಯಾದ ಕ್ಲಾರಿಫಿಕೇಶನ್ ನನ್ನು ನಟಿ ಆಶಿಕಾ ರಂಗನಾಥ್ ಅವರೇ ನೀಡಬೇಕು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.