PhotoGrid Site 1664854830627 scaled

ಊರಿನವರು ಅಮ್ಮನನ್ನು ಹುಚ್ಚಿ ಎಂದು ಕರೆಯುತ್ತಿದ್ದರು, ಅಮ್ಮನನ್ನು ಕೋಣೆಯಲ್ಲಿ ಕೂಡಿಹಾಕಿದ್ವಿ, ಜೀವನದಲ್ಲಿ ನಡೆದ ಆ ಘಟನೆ ನೆನೆದು ಕಣ್ಣೀರಿಟ್ಟ ರೂಪೇಶ್ ಶೆಟ್ಟಿ! ಅಷ್ಟಕ್ಕೂ ಏನಾಗಿತ್ತು ನೋಡಿ!!

ಸುದ್ದಿ

ಬಿಗ್ ಬಾಸ್ ಮನೆ ಎಂದು ಮನೋರಂಜನೆಯ ಅಂಗಳವಾಗಿದೆ ಅದರ ಜೊತೆಗೆ ಬಿಗ್ ಬಾಸ್ ಮನೆಯ ಮೂಲಕ ನೆಚ್ಚಿನ ಸ್ಪರ್ಧಿಗಳ ಬಗ್ಗೆ ಜನರಿಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದ ಸಿಹಿ ಕಹಿ ಘಟನೆಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಕೆಲವರ ಬಗ್ಗೆ ಅನುಕಂಪ ಇನ್ನೂ ಕೆಲವರ ಬಗ್ಗೆ ಬೇಸರವೂ ಆಗತ್ತೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಹೇಳಿಕೊಂಡ ಅಂತಹ ನೋವಿನ ಸಂಗತಿ ಯಾವುದು ಗೊತ್ತಾ?

ತಿಂಗಳ ಹಿಂದೆ ಬಿಗ್ ಬಾಸ್ ಕನ್ನಡ ಓಟಿಟಿ ಯಲ್ಲಿ ಪ್ರಸಾರವಾಗುತ್ತಿದ್ದು, ಅದರಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿದ್ದರು ಜೊತೆಗೆ ಬಿಗ್ ಬಾಸ್ ಸೀಸನ್ 9ಕ್ಕೂ ಪ್ರವೇಶ ಪಡೆದುಕೊಂಡ್ರು ಕೂಡ ರೂಪೇಶ್ ಜನರ ಗಮನ ಸೆಳೆದಿದ್ದಾರೆ ಮನೋರಂಜನೆಯ ವಿಷಯ ಬಂದರು ಕೂಡ ರೂಪೇಶ್ ಎಲ್ಲಿಯೂ ತಮ್ಮ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ. ಇನ್ನು ರೂಪೇಶ್ ಅವರ ಹಿನ್ನೆಲೆಯ ಬಗ್ಗೆ ಮಾತನಾಡುವುದಾದರೆ, ರೂಪೇಶ್ ಕುಂದಾಪುರದ ಕುಗ್ರಾಮದಲ್ಲಿ ಜನಿಸಿದವರು.

ಆದರೆ ಓದಬೇಕು ತಾನು ಏನಾದರೂ ಸಾಧನೆ ಮಾಡಬೇಕು ಎನ್ನುವ ಆಸೆ ಬಲವಾಗಿದ್ದರಿಂದ ರೂಪೇಶ್ ಚೆನ್ನಾಗಿಯೇ ಓದುತ್ತಿದ್ರು ಅಲ್ಲದೆ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಿದ್ದರು ನಟನೆಯಲ್ಲಿ ಆಸಕ್ತಿ ಹೊಂದಿದ ರೂಪೇಶ್ ಕೆಲವು ನಾಟಕಗಳಲ್ಲಿಯೂ ಕೂಡ ಬಾಲ್ಯದಿಂದಲೂ ಅಭಿನಯಿಸಿಕೊಂಡು ಬಂದಿದ್ದಾರೆ. ರೂಪೇಶ್ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಹೊಂದಿದ್ದು ಅದರ ಮೂಲಕ ಎಲ್ಲರ ಗಮನ ಸೆಳೆದರು.

ಹಾಗಾಗಿ 92.7 ಎಫ್ ಎಂ ರೇಡಿಯೋ ದಲ್ಲಿ ರೂಪೇಶ್ ಅವರಿಗೆ ಅವಕಾಶ ಸಿಕ್ತು. ಬಳಿಕ ತುಳು ಭಾಷೆಯಲ್ಲಿ ಐಸ್ ಕ್ರೀಮ್ ಎನ್ನುವ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ತುಳುನಾಡಿನ ಹೆಮ್ಮೆಯ ನಟ ಎನಿಸಿದ್ರು. ಬಳಿಕ ಡೇಂಜರ್ ಜೋನ್ ಎನ್ನುವ ಕನ್ನಡ ಸಿನಿಮಾ ಒಂದರಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಉದಯೋನ್ಮುಖ ನಟ ರೂಪೇಶ್ ಇದೀಗ ತಮ್ಮ ಭವಿಷ್ಯವನ್ನು ಇನ್ನಷ್ಟು ಉತ್ತಮವಾಗಿಸಿಕೊಳ್ಳಲು ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ.

ತನ್ನ ತಾಯಿಯನ್ನು ಕಳೆದುಕೊಂಡ ಸಂಕಷ್ಟದ ದಿನಗಳನ್ನು ರೂಪೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ರೂಪೇಶ್ ಅವರ ತಾಯಿಗೆ ಮಕ್ಕಳಾಗುತ್ತಿದ್ದ ಹಾಗೆ ಮಾನಸಿಕ ಸೀಮಿತ ಕಳೆದುಕೊಂಡರಂತೆ. ಹಾಗಾಗಿ ಅವರನ್ನ ಹುಚ್ಚಿ ಎಂದೇ ಪಟ್ಟಕಟ್ಟಿ ಒಂದು ರೂಮಿನಲ್ಲಿ ಕೂಡಿಹಾಕಲಾಗಿತ್ತು. ಮಾನಸಿಕವಾಗಿ ಸ್ವಲ್ಪ ಸೀಮಿತ ಕಳೆದುಕೊಂಡಿದ್ದ ರೂಪೇಶ್ ಅವರ ತಾಯಿ ಯಾವುದಾದರೂ ಶಾಕಿಂಗ್ ಸುದ್ದಿ ಕೇಳಿದ್ರೆ ವೈಬ್ರೇಶನ್ ಫೀಲ್ ಆಗುತ್ತಿತ್ತಂತೆ.

ಇದನ್ನೇ ಅವರ ಮೈಮೇಲೆ ದೆವ್ವ ಬರುತ್ತೆ ಅಂತ ಹೇಳಿ ಅವರನ್ನು ಒಂದು ರೂಮಿನ ಒಳಗೆ ಕೂಡಿಹಾಕಿಬಿಟ್ಟರು. ಒಮ್ಮೆ ರೂಪೇಶ್ ಅವರ ತಾಯಿ ಮಗನ ಜೊತೆ ಚೆನ್ನಾಗಿ ಮಾತನಾಡಿಕೊಂಡಿದ್ದರು. ಸ್ವಲ್ಪ ಸಮಯದ ನಂತರ ಮತ್ತೆ ಅದೇ ರೂಮಿಗೆ ರೂಪೇಶ್ ಅವರನ್ನ ಬಿಡೋದಕ್ಕೆ ಹೋದರಂತೆ. ಆಗ ರೂಪೇಶ್ ಅವರ ತಾಯಿ ನನಗೆ ಹುಚ್ಚಿಲ್ಲ ಮಗನೇ, ನೀನು ಎಲ್ಲರಂತೆ ಹಾಗೆಯೇ ಭಾವಿಸುತ್ತೀಯಲ್ಲ.

ನನ್ನನ್ನು ದಯವಿಟ್ಟು ಈ ಕತ್ತಲೆ ಕೋಣೆಯಿಂದ ಹೊರಗೆ ಕರೆದುಕೊಂಡು ಹೋಗು ಅಂತ ಗೋಗರೆಯುತ್ತಾರೆ. ಈ ಮಾತುಗಳನ್ನು ಕೇಳಿ ರೂಪೇಶ್ ಅವರಿಗೆ ಬಹಳ ನೋವಾಗುತ್ತೆ. ಅಂದಿನಿಂದ ಅಮ್ಮನನ್ನ ಹೊರಗಡೆ ಹೆಚ್ಚು ಕರೆದುಕೊಂಡು ಬರೋದಕ್ಕೆ ರೂಪೇಶ್ ಆರಂಭಿಸುತ್ತಾರೆ. ಇನ್ನು ಒಮ್ಮೆ ರೂಪೇಶ್ ಅವರ ತಾಯಿ ಮನೆಯ ಹೊರಗಡೆ ತಲೆ ಸುತ್ತಿ ಬೀಳುತ್ತಾರೆ.

ಆಗ ಅವರನ್ನ ನೋಡಿದ ಜನ ಇದು ಯಾವಾಗಲೂ ಇದ್ದಿದ್ದೆ ಅಂತ ಹಾಗೆ ಸುಮ್ಮನೆ ಬಿಟ್ಟು ಬಿಡುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ನೋಡಿದರೆ ಅವರ ಉಸಿರೇ ನಿಂತುಹೋಗುತ್ತದೆ. ಹೀಗೆ ಸರಿ ಇದ್ದ ತಾಯಿಯನ್ನ ರೂಮಿನಲ್ಲಿ ಕೂಡಿಹಾಕಿ ಹಿಂ’ಸೆ ಕೊಟ್ಟಿದ್ದಕ್ಕೆ ಅಮ್ಮನನ್ನು ಕಳೆದುಕೊಂಡು ಅನಾಥವಾಗಿದ್ದೇನೆ ಅಂತ ರೂಪೇಶ್ ಈಗಲೂ ನೊಂದುಕೊಳ್ಳುತ್ತಾರೆ.

Leave a Reply

Your email address will not be published. Required fields are marked *