ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಾಲಿ ಧನಂಜಯ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಾಲಿ ಧನಂಜಯ್ ಭರವಸೆಯ ನಟ. ಖಳನಾಯಕನ ಪಾತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದ ಧನಂಜಯ್ ಇದೀಗ ಸಿನಿಮಾ ನಾಯಕನಾಗಿ ಮಿಂಚುತ್ತಿದ್ದಾರೆ ಅಷ್ಟೇ ಅಲ್ಲ ನಿರ್ದೇಶಕರಾಗಿಯೂ ನಿರ್ಮಾಪಕರಾಗಿಯೂ ಕೂಡ ಕೆಲಸ ಮಾಡುತ್ತಿದ್ದಾರೆ. ತನ್ನನ್ನು ತಾನು ಸಂಪೂರ್ಣವಾಗಿ ಕಲಾ ಸೇವೆಗೆ ಸಮರ್ಪಿಸಿಕೊಂಡಿರುವ ನಟರುಗಳಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು.
ಇದೀಗ ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಮಾನ್ಸೂನ್ ರಾಗ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಜನರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟು ಹಾಕಿದೆ ಅದ್ಭುತವಾಗಿದೆ ಅಂತ ಸಿನಿಪ್ರಿಯರು ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಇತ್ತೀಚೆಗೆ ಡಾಲಿ ಧನಂಜಯ್ ಅವರ ಎಲ್ಲಾ ಸಿನಿಮಾಗಳು ಅತ್ಯುತ್ತಮ ಕಥೆಯನ್ನು ಹೊಂದಿದ್ದು ಹಾಗಾಗಿ ಮಾನ್ಸೂನ್ ರಾಗ ಕೂಡ ಅಭಿಮಾನಿಗಳ ಎದೆಯಲ್ಲಿ ಹರ್ಷದ ಮಳೆ ಸುರಿಸುತ್ತಾ ಕಾದು ನೋಡಬೇಕು.
ಈಗಾಗಲೇ ಟ್ರೈಲರ್ ನೋಡಿ ಮೆಚ್ಚಿರುವ ಕನ್ನಡ ಜನತೆ ಆಗಸ್ಟ್ 19 ಕ್ಕಾಗಿ ಕಾಯುತ್ತಿದ್ದರು. ಆದರೆ ಸಿನಿಮಾದಲ್ಲಿ ಕೆಲವು ಅಂಶಗಳು ಮುಗಿಯುವ ಹಂತದಲ್ಲಿದ್ದು ಚಿತ್ರ ಬಿಡುಗಡೆ ಕೊಳ್ಳುವ ದಿನಾಂಕವನ್ನು ಮುಂದುಡಲಾಗಿದೆ. ಮಾನ್ಸೂನ್ ರಾಗ ಭಾವನೆಗಳಿಂದ ತೋರಿಸುವಂತಹ ಮ್ಯೂಸಿಕಲ್ ಸಿನಿಮಾ. ನಟ ರಾಕ್ಷಸ ಎಂದೇ ಪ್ರಸಿದ್ಧರಾಗಿರುವ ಡಾಲಿ ಧನಂಜಯ್ ಈ ಚಿತ್ರದಲ್ಲಿ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.
ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಬಗ್ಗೆ ಅಂತೂ ಹೇಳುವ ಹಾಗೆ ಇಲ್ಲ ಯಾವುದೇ ಪಾತ್ರ ಮಾಡಿದ್ರು ಆ ಪಾತ್ರಕ್ಕೆ ನ್ಯಾಯ ಒದಗಿಸುವುದು ರಚಿತಾ ರಾಮ್ ಅವರ ಪ್ರವೃತ್ತಿ. ಈ ಸಿನಿಮಾದ ಪ್ರಚಾರ ಕಾರ್ಯವನ್ನು ಡಾಲಿ ಧನಂಜಯ್ ಹಾಗೂ ನಟಿ ರಚಿತಾ ರಾಮ್ ಮಾಡುತ್ತಿದ್ದಾರೆ. ಈಗಾಗಲೇ ಹಲವು ಪತ್ರಿಕಾಗೋಷ್ಠಿಯನ್ನು ಕೂಡ ನಡೆಸಿದ್ದಾರೆ. ಸುದ್ಧಿಗೋಷ್ಟಿ ನಂತರ ಸ್ಥಳದಲ್ಲಿ ಒಂದು ಹಾಸ್ಯಮಯ ಘಟನೆ ನಡೆದಿದೆ.
ಇದರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಕ್ಕಿದ್ದೂ ನಕ್ಕಿದ್ದೆ. ಅದ್ಯಾವ ಘಟನೆ ಅಂತೀರಾ? ಮಾನ್ಸೂನ್ ರಾಗ ಸಿನಿಮಾದಲ್ಲಿ ರಚಿತಾ ರಾಮ್ ಒಬ್ಬ ಲೈಂ’ಗಿ’ಕ ಕಾರ್ಯಕರ್ತೆಯ ಪಾತ್ರವನ್ನು ನಿಭಾಯಿಸಿದ್ದಾರೆ. ಇನ್ನು ಧನಂಜಯ್ ಅವರ ಜೊತೆ ತಾನು ನಟಿಸೋದು ಚಾಲೆಂಜಿಂಗ್ ಆಗಿತ್ತು ಎಂದು ಮಾಧ್ಯಮದ ಮುಂದೆ ರಚಿತಾ ರಾಮ್ ಹೇಳಿದ್ದಾರೆ. ಈ ಸಿನಿಮಾ ಹೆಚ್ಚು ಮಳೆಯಲ್ಲಿ ಚಿತ್ರೀಕರಣವಾಗಿದೆ.
ರಾತ್ರಿ ಇಡೀ ಮಳೆಯಲ್ಲಿಯೇ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಇನ್ನು ಈ ಸಿನಿಮಾದಲ್ಲಿ ನಟಿ ಸುಹಾಸಿನಿ, ಶಿವರಾಜ್ ಕುಮಾರ್ ಮೊದಲದ ಮೇರು ನಟ ನಟಿಯರು ಕೂಡ ಕಾಣಿಸಿಕೊಂಡಿದ್ದಾರೆ. ನಟಿ ರಚಿತಾ ರಾಮ್ ಬಹಳ ಬ್ಯುಸಿ ಇರುವ ನಟಿ ಕನ್ನಡದಲ್ಲಿ ಹಲವು ಸಿನಿಮಾಗಳನ್ನ ಕೈಗೆತ್ತಿಕೊಂಡಿರುವ ರಚಿತಾ ರಾಮ್ ಇದೀಗ ತೆಲುಗುನಲ್ಲಿ ಕೂಡ ನಟನೆಯನ್ನು ಆರಂಭಿಸಿದ್ದಾರೆ. ಏನು ಮಾನ್ಸೂನ್ ಅವರಾಗ ಚಿತ್ರದಲ್ಲಿಯೂ ರಚಿತಾ ರಾಮ್ ಅವರ ಅದ್ಭುತ ಅಭಿನಯವನ್ನು ನೋಡಬಹುದು.
ಪಕ್ಕಾ ಫ್ಯಾಮಿಲಿ ಪ್ಯಾಕ್ ಆಗಿರುವ ಮಾನ್ಸೂನ್ ರಾಗ ಸಿನಿಮಾ ವನ್ನ ಎಲ್ಲರೂ ತಪ್ಪದೆ ನೋಡಿ ಅಂತ ಚಿತ್ರತಂಡ ಕರೆ ನೀಡಿದೆ. ಇನ್ನು ಪತ್ರಿಕಾಗೋಷ್ಠಿಯನ್ನು ಮುಗಿಸಿ ಎದ್ದೇಳುವಾಗ ನಟ ಡಾಲಿ ಧನಂಜಯ್ ತಮ್ಮ ಪಂಚೆಯನ್ನು ಸರಿ ಮಾಡಿಕೊಂಡರು. ಇದನ್ನು ನೋಡಿ ರಚಿತಾ ರಾಮ್ ನಕ್ಕಿದ್ದು ನಕ್ಕಿದ್ದೆ. ಇಲ್ಲಿ ಇವರಿಬ್ಬರ ಮಾತುಕತೆಯು ಕೂಡ ಅಷ್ಟೇ ಮಜವಾಗಿತ್ತು ಅದನ್ನು ಕೇಳಲು ಈ ವಿಡಿಯೋ ನೋಡಿ.