ಸಿನಿಮಾ ನಟಿಯರು ತಮ್ಮ ಯೌವ್ವನದ ಸಮಯದಲ್ಲಿ ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಎಷ್ಟೇ ಮಿಂಚಿದರೂ ಅವರ ವಯಸ್ಸು ಹೆಚ್ಚಾಗುತ್ತಿದ್ದ ಹಾಗೆ ಸಿನಿಮಾದಲ್ಲಿ ಆಫರ್ ಕಡಿಮೆಯಾಗುತ್ತಾ ಹೋಗುತ್ತದೆ. ನಾಯಕ ನಟಿಯಾಗಿ ನಟಿಸಿದ ಹಲವು ನಟಿಯರು ಇಂದು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಭಾಗ್ಯ ಎಲ್ಲರ ಪಾಲಿಗೂ ಇರುವುದಿಲ್ಲ ಬಿಡಿ. ಕೆಲವರು ತಮ್ಮ ಅವಧಿ ಮುಗಿದ ನಂತರ ಸಿನಿಮಾ ರಂಗದಿಂದ ದೂರವೇ ಉಳಿಯುತ್ತಾರೆ.
ಇನ್ನು ಸಾಕಷ್ಟು ನಟಿಯರು ಮದುವೆಯಾದ ನಂತರ ಸಿನಿಮಾ ರಂಗ ತೊರೆದಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ಈಗಲೂ ನಟನೆಯ ವೃತ್ತಿಯನ್ನು ಮುಂದುವರೆಸಿಕೊಂಡು ಬಂದು, ಹೆಚ್ಚಿನ ಸಂಭಾವನೆಯನ್ನು ಪಡೆಯುವ ನಟಿ ಅಂದ್ರೆ ಅದು ಬಹುಭಾಷಾ ನಟಿ ರಮ್ಯಾ ಕೃಷ್ಣನ್. ಹೌದು, ಎಲ್ಲರಂತೆ ರಮ್ಯಾ ಕೃಷ್ಣನ್ ಕೂಡ ತಮಗೆ ವಯಸ್ಸಾಯ್ತು ಅನ್ನುವ ಕಾರಣಕ್ಕೆ ಮೂಲೆ ಸೇರಲಿಲ್ಲ.
ಅಥವಾ ಕೇವಲ ಅಲ್ಲೋ ಇಲ್ಳೋ ಸಣ್ಣ ಪುಟ್ತ ಪಾತ್ರಗಳನ್ನಷ್ಟೇ ಮಾಡಿಕೊಂಡು ಸುಮ್ಮನಿಲ್ಲ. ಅವರ ವಯಸ್ಸು 50 ದಾಟಿದರೂ ಅವರು ನೋಡುವುದಕ್ಕೆ ಇನ್ನೂ ಫಿಟ್ ಆಗಿಯೇ ಇದ್ದಾರೆ. 80 ಹಾಗೂ 90ರ ದಶಕದಲ್ಲಿ ಟಾಪ್ ನಟಿ ಎನಿಸಿದ್ದ ರಮ್ಯಾ ಕೃಷ್ಣನ್ ಈಗಲೂ ತಮ್ಮ ಚಾರ್ಮ್ ಹಾಗೆಯೇ ಉಳಿಸಿಕೊಂಡಿದ್ದಾರೆ. ರಮ್ಯಕೃಷ್ಣನ್ ಅವರು ಸೂಪರ್ ಹಿಟ್ ಬಾಹುಬಲಿ ಸಿನಿಮಾದಲ್ಲಿ ನಿಭಾಯಿಸಿದ ಶಿವಗಾಮಿ ಎನ್ನುವ ಪಾತ್ರ ಅವರಿಗೆ ಹೊಸ ಬ್ರೇಕ್ ನೀಡಿದಂತಹ ಸಿನಿಮಾ.
ಅದಾದ ಬಳಿಕ ನಟಿ ರಮ್ಯ ಕೃಷ್ಣನ್ ಅವರ ಬೇಡಿಕೆಯೂ ಕೂಡ ಹೆಚ್ಚಾಗಿದೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಗುರುತಿಸಿಕೊಂಡಿರುವ ಏಕೈಕ ಪಂಚಭಾಷಾ ನಟಿ ರಮ್ಯಾ ಕೃಷ್ಣನ್. ನಟಿ ರಮ್ಯ ಕೃಷ್ಣನ್ 1970ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ರಮ್ಯ ಕೃಷ್ಣನ್ ಅವರು ತಮ್ಮ ನಟನೆಯನ್ನು ಆರಂಭಿಸಿದ್ದೆ ತಮಿಳು ಚಿತ್ರದ ಮೂಲಕ. ಆದರೆ ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹೀಗೆ ಪಂಚ ಭಾಷಾ ನಟಿಯಾಗಿ ಎಲ್ಲಾ ಭಾಷೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಎಲ್ಲಾ ಸಿನಿಮಾ ರಂಗದ, ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ರಮ್ಯಾ ಕೃಷ್ಣನ್ ಅವರದ್ದು. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ಬಾಲಯ್ಯ, ಮೋಹನ್ ಲಾಲ್, ರಜನಿಕಾಂತ್ ಕಮಲಹಾಸನ್ ಹೀಗೆ ಎಲ್ಲಾ ಮೇರು ನಟರ ಜೊತೆ ರಮ್ಯಾ ಕೃಷ್ಣನ್ ಅತ್ಯದ್ಭುತವಾಗಿ ನಟಿಸಿದ್ದಾರೆ.
ರಮ್ಯ ಕೃಷ್ಣನ್ ಅಂದ್ರೆ ಕನ್ನಡದಲ್ಲಿ ಹೆಚ್ಚಾಗಿ ನೆನಪಾಗೋದೇ ರವಿಚಂದ್ರನ್ ಅವರ ಸಿನಿಮಾಗಳು. ತಮ್ಮ ಯೌವ್ವನದಲ್ಲಿ ರವಿಚಂದ್ರನ್ ಅವರ ಜೊತೆಗೆ ಸಾಕಷ್ಟು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ ರಮ್ಯಾ. ರಮ್ಯಾ ಅವರ ಈಗಿನ ಸಂಭಾವನೆ ಕೇಳಿದ್ರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗಬಹುದು. ರಮ್ಯಕೃಷ್ಣ ಅವರು ಇದೀಗ ಒಂದು ದಿನ ಶೂಟಿಂಗ್ ಗೆ 10 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.
ಅಂದರೆ ಒಂದು ಸಿನಿಮಾಕ್ಕೆ ಕನಿಷ್ಠ ಒಂದು ಕೋಟಿ ರೂಪಾಯಿ ಸಂಭಾವನೆ ಫಿಕ್ಸ್. ’ಎಜ್ ಇಸ್ ಜಸ್ಟ್ ಅ ನಂಬರ್’ ಅನ್ನೋದು ನಟಿ ರಮ್ಯಾ ಕೃಷ್ಣನ್ ಅವರ ಲೈಫ್ ನಲ್ಲಿ ನಿಜವಾಗಿದೆ. ಈಗಲೂ ನಿರ್ಮಾಪಕರು ರಮ್ಯಾ ಕೃಷ್ಣನ್ ಅವರನ್ನು ತಮ್ಮ ಸಿನಿಮಾದಲ್ಲಿ ನಟಿಸಲು ಆಹ್ವಾನಿಸುತ್ತಾರೆ. ಅಲ್ಲದೆ ರಮ್ಯಾ ಕೃಷ್ಣನ್ ಅವರ ಕೇಳಿದ ಸಂಭಾವನೆಯನ್ನು ಸ್ವಲ್ಪ ಹಿಂಜರಿಕೆ ಇಲ್ಲದೆ ನೀಡುತ್ತಾರೆ. ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿರುವ ನಟಿ ರಮ್ಯಾ ಕೃಷ್ಣನ್ ಒಬ್ಬ ಅತ್ಯುತ್ತಮ ಅಭಿನೇತ್ರಿ ಎನ್ನುವುದರಲ್ಲಿ ಎರಡು ಮಾತಿಲ್ಲ.