ಕನ್ನಡ ಕಿರುತೆರೆಯ ಲೋಕದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್. ಬಿಗ್ ಬಾಸ್ ಶೋಗೆ ಬೈದುಕೊಳ್ಳುವವರು ಸಾಕಷ್ಟು ಜನರು ಇರಬಹುದು ಆದರೆ ಅದರ ಫ್ಯಾನ್ಸಿಗೆನೂ ಕಮ್ಮಿ ಇಲ್ಲ. ಈಗಾಗಲೇ ಬಿಗ್ ಬಾಸ್ ಓಟಿಟಿ ವರ್ಷನ್ ಒಂದು ತಿಂಗಳ ಕಾಲ ಪ್ರಸಾರವಾಗಿತ್ತು ಆದರೆ ಇದನ್ನು ಎಲ್ಲರಿಗೂ ನೋಡುವುದಕ್ಕೆ ಸಿಕ್ಕಿರಲಿಲ್ಲ ಹಾಗಾಗಿ ಬಿಗ್ ಬಾಸ್ ಸೀಸನ್ 9 ಟಿವಿಯಲ್ಲಿ ಪ್ರಸಾರವಾಗುತ್ತಿದ್ದು ಹೆಚ್ಚು ಕುತೂಹಲ ಮೂಡಿಸಿದೆ.
ಹೌದು, ಬಿಗ್ ಬಾಸ್ ಮನೆಗೆ ಈಗಾಗಲೇ ಸಾಕಷ್ಟು ಜನ ಪ್ರವೇಶ ಪಡೆದಿದ್ದಾರೆ. ಅದರಲ್ಲೂ ಹಳೆಯ ಸ್ಪರ್ಧೆಗಳು ಕೂಡ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಪಡೆದಿರುವುದು ವಿಶೇಷ. ಇನ್ನು ಮೊದಲೇ ಹೇಳಿದ ಹಾಗೆ ಬಿಗ್ ಬಾಸ್ ಓಟಿಟಿ ಕನ್ನಡ ವರ್ಷನ್ ನಲ್ಲಿ ಟಾಪ್ 4 ನಲ್ಲಿದ್ದ ನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ದೊಡ್ಡ ಮನೆಗೆ ಎಂಟ್ರಿ ಪಡೆದಿದ್ದಾರೆ.
ಆರ್ಯವರ್ಧನ್ ಗುರೂಜಿ ಅವರ ಸಂಖ್ಯಾ ಲೆಕ್ಕಾಚಾರ ಬಿಗ್ ಬಾಸ್ ದೊಡ್ಡಮನೆಯಲ್ಲಿಯೂ ಕೂಡ ಮುಂದುವರೆಯಲಿದೆ. ಹಾಗೆಯೇ ರಾಕೇಶ್ ಅಡಿಗ ಅವರ ಹಾಡನ್ನು ಇನ್ನಷ್ಟು ಎಂಜಾಯ್ ಮಾಡಬಹುದು. ಓಪನ್ ಆಗಿ ಮಾತನಾಡುವ ತಮ್ಮ ಆಟಿಟ್ಯೂದ್ ನಿಂದ ಇನ್ನಷ್ಟು ಜನರಿಗೆ ಹತ್ತಿರವಾದ ಸಾನಿಯಾ ಅಯ್ಯರ್ ಕೂಡ ನಿಮ್ಮನ್ನ ಇನ್ನಷ್ಟು ರಂಜಿಸಲಿದ್ದಾರೆ. ರೂಪೇಶ್ ಶೆಟ್ಟಿ ಟಾಸ್ಕ್ ಮಾಡೋದಕ್ಕೆ ಬಿಗ್ ಬಾಸ್ ದೊಡ್ಮನೆ ಪ್ರವೇಶ ಮಾಡಿದ್ದಾರೆ.
ಬಿಗ್ ಬಾಸ್ ಓಟಿಟಿ ವರ್ಷನ್ ನಲ್ಲಿ ಜನರನ್ನ ಸಾಕಷ್ಟು ಎಂಟರ್ಟೈನ್ ಮಾಡಿದ್ದು ಸಾನಿಯಾ ಅಯ್ಯರ್. ನಟನಾ ಬ್ಯಾಗ್ರೌಂಡ್ ಹೊಂದಿರುವ ಸಾನಿಯಾ ಅವರ ತಾಯಿ ದೀಪ ಅಯ್ಯರ್ ಕಿರುತೆರೆಯಲ್ಲಿ ಅಭಿನಯಿಸುತ್ತಿದ್ದಾರೆ ಅದರಂತೆ ಅವರ ಚಿಕ್ಕಮ್ಮ ರೂಪ ಅಯ್ಯರ್ ನಟಿ ಹಾಗೂ ನಿರ್ದೇಶಕಿಯಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪುಟ್ಟಗೌರಿಯಾಗಿ ಕಿರುತೆರೆ ಲೋಕಕ್ಕೆ ಪ್ರವೇಶ ಪಡೆದ ಸಾನಿಯಾ ಅಯ್ಯರ್ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡುವುದಕ್ಕೆ ಮುಂದಾಗಿದ್ದರು.
ಅದಲ್ಲದಕ್ಕೂ ಪುಷ್ಠಿ ನೀಡುವಂತೆ ಬಿಗ್ ಬಾಸ್ ವೇದಿಕೆ ಅವರಿಗಾಗಿ ತೆರೆದುಕೊಂಡಿತು. ಈ ಮೂಲಕವಾದರೂ ಸಾನಿಯಾ ಅವರ ಅದೃಷ್ಟ ಬದಲಾಗುತ್ತಾ ಕಾದು ನೋಡಬೇಕು. ಇನ್ನು ರಾಕೇಶ್ ಅಡಿಗ ಬಹಳ ಜೋಶ್ ಇರುವ ನಟ. ಹೌದು ಕನ್ನಡದಲ್ಲಿ ಜೋಶ್ ಸಿನಿಮಾದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಪಡೆದ ಪ್ರತಿಭಾನ್ವಿತ ಯುವ ನಟ ರಾಕೇಶ್ ಅಡಿಗ ಅತ್ಯುತ್ತಮ ರಾಪರ್ ಗಾಯಕ ಕೂಡ ಹೌದು.
ಆದರೆ ರಾಕೇಶ್ ಅವರ ಅದೃಷ್ಟ ಪರೀಕ್ಷೆ ಮುಂದುವರೆಯುತ್ತಲೇ ಇದೆ ಅವರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿಲ್ಲ. ಅಥವಾ ಅವರ ಸಿನಿಮಾಗಳು ಕೂಡ ಗೆಲ್ಲುತ್ತಿಲ್ಲ. ಆದ್ರೆ ರಾಕೇಶ್ ಮಾತ್ರ ಸೋಲನ್ನ ಒಪ್ಪಿಕೊಂಡಿಲ್ಲ ಈಗಲೂ ತಾನು ಏನನ್ನಾದರೂ ಸಾಧಿಸಿ ಸಾಧಿಸುತ್ತೇನೆ ಎನ್ನುವ ಛಲ ಇಟ್ಟುಕೊಂಡಿದ್ದಾರೆ. ಇಂತಹ ಛಲಗಾರ ಹಾಗೂ ಕೂಲ್ ಆಗಿರುವ ರಾಕೇಶ್ ಅಡಿಗ ಅವರಿಗೆ ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಯಾಗಿ ಅವಕಾಶ ಸಿಕ್ತು.
ಇದು ಅವರ ಪಾಲಿಗೆ ಒಲಿದು ಬಂದ ಅದೃಷ್ಟವೇ ಸರಿ ಯಾಕಂದ್ರೆ ಓಟಿಪಿ ವರ್ಷನ್ ನಿಂದ ತಮ್ಮ ಮನೆಗಲ್ಲ, ಬದಲಿಗೆ ಬಿಗ್ ಬಾಸ್ ದೊಡ್ಮನೆ ಪ್ರವೇಶ ಪಡೆದಿದ್ದಾರೆ. ಹೌದು ಇನ್ನಷ್ಟು ಎಂಟರ್ಟೈನ್ ಮಾಡುವ ಉದ್ದೇಶವನ್ನ ಇಟ್ಟುಕೊಂಡ ರಾಕೇಶ್ ತಾನು ಬಿಗ್ ಬಾಸ್ ಸೀಸನ್ 9ರ ಟಾಪರ್ ಆಗ್ಬೇಕು ಎನ್ನುವ ಕನಸು ಹೊತ್ತಿದ್ದಾರೆ. ಮಸ್ತ್ ಆಗಿ ಎಂಟ್ರಿ ಕೊಟ್ಟ ಜೋಶ್ ಹುಡುಗನ ಕರಾಮತ್ತು ಹೇಗಿರುತ್ತೆ ಅನ್ನೋದನ್ನ ಬಿಗ್ ಬಾಸ್ ಮನೆಯಲ್ಲಿ ನೀವು ನೋಡಬಹುದು.