PhotoGrid Site 1668052604544

ಈ ತಳಿಯ ಬದನೆಕಾಯಿಯನ್ನು ಮಹಿಳೆಯರು ಹೆಚ್ಚಾಗಿ ಯಾಕೆ ಸೇವಿಸುತ್ತಾರೆ ಗೊತ್ತಾ? ಇದರಿಂದ ದೇಹಕ್ಕೆ ಅದೆಷ್ಟು ಲಾಭವಿದೆ ಅಂತಾ ಗೊತ್ತಾದ್ರೆ ಈಗಲೇ ಮಾರ್ಕೆಟ್ ಗೆ ಓಡಿ ಹೋಗ್ತೀರಾ ನೋಡಿ!!

ಸುದ್ದಿ

ಸ್ನೇಹಿತರೆ, ನಮ್ಮ ಆರೋಗ್ಯದ ವಿಷಯದಲ್ಲಿ ನಾವು ದಿನನಿತ್ಯ ಬಳಸುವ ಆಹಾರಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ನಾವು ಯಾವ ರೀತಿ ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತೇವೆ ಎನ್ನುವುದರ ಮೇಲೆ ನಾವು ಎಷ್ಟು ಚೆನ್ನಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತೇವೆ ಎನ್ನುವುದು ಅವಲಂಬಿತವಾಗಿದೆ. ಇಂದು ಅದೆಷ್ಟು ಜನ ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಕೂಡ ಅದನ್ನೇ ಸೇವನೆ ಮಾಡುತ್ತಾರೆ.

ಅಥವಾ ರೋಡ್ ಸೈಡ್ ನಲ್ಲಿ ಸಿಗುವ ಚಾರ್ಟ್ಸ್ ಗಳು ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ ಎಂದು ಅರಿವಿದ್ದರೂ ಕೂಡ ಜನ ಹೆಚ್ಚಾಗಿ ಅದಕ್ಕೆ ಮಾರು ಹೋಗುತ್ತಿದ್ದಾರೆ. ಇದರಿಂದ ಈ ಆರೋಗ್ಯಕ್ಕೂ ಕೂಡ ಸಾಕಷ್ಟು ಹಾನಿಯಾಗುತ್ತೆ. ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಜೀವನದಲ್ಲಿ ಏನೇ ಇದ್ದರೂ ಆರೋಗ್ಯ ಸರಿಯಾಗಿ ಇಲ್ಲ ಅಂದ್ರೆ ಎಲ್ಲವೂ ವ್ಯರ್ಥ.

ಹಾಗಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ ನಾವು ದಿನನಿತ್ಯವೂ ಅಡುಗೆ ಪದಾರ್ಥಗಳಲ್ಲಿ ಬಳಸುವ ಹಲವು ಹಣ್ಣು ತರಕಾರಿ ಮೊದಲಾದವುಗಳು ಹೆಚ್ಚು ಆರೋಗ್ಯಕರ ಗುಣಗಳನ್ನು ಹೊಂದಿದೆ ಉದಾಹರಣೆಗೆ ಹೇಳುವುದಾದರೆ ಬದನೆಕಾಯಿ. ಬದನೆಕಾಯಿ ನೇವಸೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಬದನೆಕಾಯಿಯಲ್ಲಿಯೂ ಸಾಕಷ್ಟು ವಿಭಿನ್ನತೆಯಿದ್ದು ಮಾರುಕಟ್ಟೆಯಲ್ಲಿ ಇವು ಲಭ್ಯ. ಹಾಗಾದರೆ ಬದನೆಕಾಯಿಯ ಪ್ರಯೋಜನಗಳೇನು? ತಿಳಿದುಕೊಳ್ಳೋಣ ಬನ್ನಿ. ಈ ಬದನೆಕಾಯಿ ತರಕಾರಿಯಲ್ಲಿ ಸಾಕಷ್ಟು ಕಬ್ಬಿನಾಂಶವಿದೆ. ಅಷ್ಟೇ ಅಲ್ಲ, ಕಾರ್ಬೋಹೈಡ್ರೇಟ್ಸ್ ಪ್ರಮಾಣ ಕಡಿಮೆ ಇದೆ. ಜೊತೆಗೆ ಇನ್ನಷ್ಟು ಖನಿಜಾಂಶಗಳು ಬದನೆಕಾಯಿ ಸೇವನೆಯಿಂದ ದೇಹಕ್ಕೆ ಸೇರಿಕೊಳ್ಳುತ್ತವೆ.

ಹಾಗಾಗಿ ನಮ್ಮ ನಿತ್ಯದ ಆಹಾರ ಪದಾರ್ಥಗಳಲ್ಲಿ ಬದನೆಕಾಯಿಯನ್ನು ಕೂಡ ಸೇರಿಸುವುದು ಒಳ್ಳೆಯದು. ದೇಹದಲ್ಲಿ ರಕ್ತ ಪರಿಚಲನೆಗೆ ಸಹಾಯ ಮಾಡುವ ಗುಣ ಹೊಂದಿರುವ ಬದನೆಕಾಯಿ ರಕ್ತ ಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇನ್ನು ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಯಲು ನೀವು ಬದನೆಕಾಯಿಯನ್ನು ಬಳಸುವುದು ಬಹಳ ಒಳ್ಳೆಯದು.

ಇನ್ನು ತೂಕ ಇಳಿಸುವ ಕೆಲಸವನ್ನು ಕೂಡ ಮಾಡುತ್ತೆ ಬದನೆಕಾಯಿ. ಹಾಗಾಗಿ ತೂಕ ಇಳಿಸುವ ಸಲುವಾಗಿ ಡಯಟ್ ಪ್ಲಾನ್ ಮಾಡಿರುವವರು ನಿಮ್ಮ ಡಯಟ್ ನಲ್ಲಿ ಬದನೆಕಾಯಿಯನ್ನು ಕೂಡ ಸೇರಿಸಿಕೊಳ್ಳಿ. ಅಷ್ಟೇ ಅಲ್ಲ ಸ್ನೇಹಿತರೆ ಮಲಬದ್ಧತೆ ಹಾಗೂ ಅಜೀರ್ಣದಂತಹ ಸಮಸ್ಯೆಯನ್ನು ಹೋಗಲಾಡಿಸುವಲ್ಲಿಯೂ ಕೂಡ ಬದನೆಕಾಯಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ಇದರಲ್ಲಿ ಇರುವ ಸಾಕಷ್ಟು ಖನಿಜಾಂಶಗಳು ಹಲವು ರೋಗಗಳಿಗೆ ರಾಮಬಾಣವಾಗಿದೆ. ಬದನೆಕಾಯಿಯಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾಗಿ ಮನೆಯಲ್ಲಿ ಅಡುಗೆ ಮಾಡುವವರು ತಪ್ಪದೆ ಬದನೆಕಾಯಿಯನ್ನು ಕೂಡ ನಿಮ್ಮ ಅಡುಗೆ ಪದಾರ್ಥದಲ್ಲಿ ಸೇರಿಸಿಕೊಳ್ಳಿ.

ವೈದ್ಯರು ಕೂಡ ಬದನೆಕಾಯಿ ಸೇವನೆಯನ್ನು ಶಿಫಾರಸು ಮಾಡುತ್ತಾರೆ. ಆದರೆ ದೇಹದಲ್ಲಿ ಅಲರ್ಜಿ ಇರುವವರು ಬದನೆಕಾಯಿ ಸೇವನೆ ಮಾಡುವುದು ಅಷ್ಟು ಒಳ್ಳೆಯದಲ್ಲ. ಅಥವಾ ಬಳಸುವುದಕ್ಕೂ ಮುನ್ನ ವೈದ್ಯರ ಸಲಹೆ ಕೇಳಿ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಮೆಂಟ್ ಮಾಡಿ ಹಂಚಿಕೊಳ್ಳಿ.

Leave a Reply

Your email address will not be published. Required fields are marked *