ಇದೀಗ ಹೆಚ್ಚಿನ ಕನ್ನಡ ವಾಹಿನಿಗಳಲ್ಲಿ ಬರೀ ರಿಯಾಲಿಟಿ ಶೋ ಗಳದ್ದೇ ಕಾರುಬಾರು. ಜನರಿಗೆ ಭರಪೂರ ಮನೋರಂಜನೆ ನೀಡುವಲ್ಲಿ ಕನ್ನಡ ವಾಹಿನಿಗಳು ಉತ್ತಮ ಕಾರ್ಯಕ್ರಮಗಳನ್ನು ಕೊಡುತ್ತಲೇ ಇದೆ. ಟಿವಿ ವಾಹಿನಿಗಳಲ್ಲಿ ಹಾಡು, ಡ್ಯಾನ್ಸ್, ಕಾಮೆಡಿ, ಗೇಮ್ ಇಂತಹ ರಿಯಾಲಿಟಿ ಶೋ ಗಳ ಮಧ್ಯೆ ಇದೀಗ ಜೋಡಿಗಳ ಆಟ ಜೋರಾಗಿದೆ. ಹೌದು, ಮೊತ್ತ ಮೊದಲು ಕಲರ್ಸ್ ಕನ್ನಡದಲ್ಲಿ ರಾಜಾ ರಾಣಿ ಅನ್ನುವ ಗಂಡ ಹೆಂಡತಿಯರ ಕಾರ್ಯಕ್ರಮ ಆರಂಭವಾಗಿತ್ತು.
ಆ ನಂತರ ಜೀ ಕನ್ನಡ ವಾಹಿನಿಯಲ್ಲಿ ಈ ಬಾರಿ ಜೋಡಿ ನಂ 1 ರಿಯಾಲಿಟಿ ಶೋ ಆರಂಭವಾಗಿದೆ.ಸೆಲೆಬ್ರಿಟಿ ಜೋಡಿಗಳು ಈ ಶೋನಲ್ಲಿ ಅದ್ಭುತವಾಗಿ ಆಟ ಆಡುತ್ತಿದ್ದಾರೆ. ಇದೇ ರೀತಿ ಇದೀಗ ಸ್ಟಾರ್ ಸುವರ್ಣದಲ್ಲಿ ಕೂಡ ಒಂದು ಜೋಡಿ ಶೋ ಆರಂಭ ಆಗಲಿದೆ.ಅದುವೇ “ಇಸ್ಮಾರ್ಟ್ ಜೋಡಿ”. ಇದೇ ಶನಿವಾರ ಹಾಗೂ ಭಾನುವಾರದಿಂದ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಸ್ಟಾರ್ ಸುವರ್ಣದಲ್ಲಿ ರಾತ್ರಿ 9 ಗಂಟೆಗೆ ಈ ಶೋ ಶುರುವಾಗಲಿದೆ.
ಈ ಶೋ ಬಗ್ಗೆ ಅನೇಕ ನಟಿಯರು ಪ್ರೋಮೋ ಶೂಟ್ ಮಾಡಿ ಪಬ್ಲಿಸಿಟಿ ಮಾಡುತ್ತಿದ್ದಾರೆ. ಇದೆ ರೀತಿ ನಟಿ ದೀಪಿಕಾ ದಾಸ್ ಕೂಡ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದ ಸಿಗ್ನೇಚರ್ ಡ್ಯಾನ್ಸ್ ಮಾಡಿದ್ದು ಅದನ್ನು ಸ್ಟಾರ್ ಸುವರ್ಣ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಜೀ ಕನ್ನಡದ ನಾಗಿಣಿ ಧಾರವಾಹಿ ಮೂಲಕ ಜನಮನ್ನಣೆ ಗಳಿಸಿದ ದೀಪಿಕಾ ದಾಸ್ ಬಿಗ್ ಬಾಸ್ ಸ್ಪರ್ಧಿ ಕೂಡ ಹೌದು.
ಇದೀಗ ಕೆಂಬಣ್ಣದ ಬೋಲ್ಡ್ ಡ್ರೆಸ್ ತೊಟ್ಟ ದೀಪಿಕಾ ದಾಸ್ ಈ ಸಿಗ್ನೇಚರ್ ಸ್ಟೆಪ್ ಹಾಕಿ ಮಿಂಚಿದ್ದಾರೆ. ಇನ್ನು ಈ ಇಸ್ಮಾರ್ಟ್ ಜೋಡಿ ಶೋ ಬಗ್ಗೆ ಹೇಳಬೇಕೆಂದರೆ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾರೆ. ಮೊದಲ ಬಾರಿಗೆ ಗಣೇಶ್ ಅವರು ಸ್ಟಾರ್ ಸುವರ್ಣ ವಾಹಿನಿಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಇಸ್ಮಾರ್ಟ್ ಜೋಡಿ ಯ ಪ್ರೋಮೋಗೆ ಗಣೇಶ್ ಅವರು ಸೂಪರ್ ಸ್ಟೆಪ್ ಹಾಕಿದ್ದಾರೆ.
ಅದೇ ಸ್ಟೆಪ್ ಅನ್ನು ದೀಪಿಕಾ ದಾಸ್ ಸೇರಿದಂತೆ ಅನೇಕ ನಟಿಯರು ಹಾಕಿದ್ದಾರೆ. ಇದರ ಪ್ರೋಮೋಗಳನ್ನು ಸ್ಟಾರ್ ಸುವರ್ಣ ಪ್ರಸಾರ ಮಾಡಿದ್ದು, ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ.ಇನ್ನು ಈ ಶೋ ನಲ್ಲಿ ಯಾರ್ಯಾರು ಇರಲಿದ್ದಾರೆ ಎಂದು ನೋಡೋದಾದರೆ, ಸೆಲೆಬ್ರಿಟಿ ಜೋಡಿಗಳು ವೇದಿಕೆಯ ಮೇಲೆ ನಕ್ಕು ನಲಿಯಲು ಸಜ್ಜಾಗಿದ್ದಾರೆ. ಸ್ಟಾರ್ ಸುವರ್ಣ ಪ್ರಸಾರ ಮಾಡಿರುವ ಪ್ರೋಮೋಗಳ ಪ್ರಕಾರ.
ಈ ಜೋಡಿ ರಿಯಾಲಿಟಿ ಶೋ ನಲ್ಲಿ ನಟಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ದಿಶಾ ಹಾಗೂ ಪತಿ ಶಶಾಂಕ್, ಅದೇ ರೀತಿ ಅರ್ಧಾಂಗಿ ಧಾರಾವಾಹಿಯ ನಟಿ ಅನಘಾ ಮತ್ತು ಅವರ ಪತಿ ಸಾಗರ್, ನಟ ವಿನಯ್ ಮತ್ತು ಪತ್ನಿ ಅಕ್ಷತಾ, ಜೊತೆಗೆ ಹಿರಿಯ ನಟ ಜೈ ಜಗದೀಶ್ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಸಿಂಗ್ ಈ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ. ಒಟ್ಟು ಹತ್ತು ಜೋಡಿಗಳು ಈ ಶೋನಲ್ಲಿ ಭಾಗಿಯಾಗಲಿದ್ದಾರೆ. ಈ ಶೋ ನೋಡಲು ಸ್ಟಾರ್ ಸುವರ್ಣ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.
View this post on Instagram