ಹೆಣ್ಣು ಮಕ್ಕಳು ಅಂದ್ರೆ ಭಾರತೀಯ ಸಂಸ್ಕೃತಿಯಲ್ಲಿ ಬಹಳ ಗೌರವ ನೀಡಲಾಗುತ್ತೆ. ಕೆಲವರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಬಹಳ ಪ್ರಾಧಾನ್ಯತೆ ನೀಡುತ್ತಾರೆ. ಮನೆಯಲ್ಲಿ ಒಂದು ಹೆಣ್ಣು ಜನಿಸಿದರೆ ಆ ಮನೆಯಲ್ಲಿ ಭಾಗ್ಯಲಕ್ಷ್ಮಿ ಜನಿಸಿದ್ದಾಳೆ ಎಂದೇ ಅರ್ಥ. ಹೆಣ್ಣು ಮಕ್ಕಳನ್ನ ಜರಿಯುವ ಹೆಣ್ಣು ಸಂತಾನವನ್ನು ದರಿದ್ರ ಎಂದು ಭಾವಿಸುವ ಜನರ ನಡುವೆ ಹೆಣ್ಣು ಮಕ್ಕಳೇ ತಮ್ಮ ಪ್ರಪಂಚ ಎಂದು ಭಾವಿಸುವ ಕುಟುಂಬಗಳು ಅದೆಷ್ಟೋ ಇವೆ.
ಇಂತಹ ಕುಟುಂಬಗಳಲ್ಲಿ ಅತ್ಯಂತ ಸಮಸ್ಯೆಗಳೇ ಇದ್ದರೂ ಸುಲಭವಾಗಿ ನಿವಾರಣೆಯಾಗುತ್ತವೆ ಜೊತೆಗೆ ಅದೃಷ್ಟ ಲಕ್ಷ್ಮಿ ಇವರ ಜೊತೆಗಿರುತ್ತಾಳೆ. ಹೆಣ್ಣು ಮಕ್ಕಳಲ್ಲಿ ಇಂತಹ ಕೆಲವು ಗುಣಗಳಿದ್ದರೆ ಅವರು ಆ ಮನೆಗೆ ಅದೃಷ್ಟ ಲಕ್ಷ್ಮಿಯರು ಎನಿಸಿಕೊಳ್ಳುತ್ತಾರೆ. ಗುಣಗಳಿದ್ದರೆ ಮನೆಗೆ ಒಳಿತಾಗುತ್ತದೆ ಗೊತ್ತಾ? ಮೊದಲನೆಯದಾಗಿ ಹೆಣ್ಣುಮಕ್ಕಳ ನೋಡಲು ಲಕ್ಷಣವಾಗಿ ಇರಬೇಕು. ಅಗಲವಾದ ಹಣೆ, ದಪ್ಪವಾದ ಹುಬ್ಬು, ಉದ್ದವಾದ ಮೂಗು ಇವೆಲ್ಲವೂ ಒಬ್ಬ ಹೆಣ್ಣಿನಲ್ಲಿ ಇರಬಹುದಾದ ಸಾಮಾನ್ಯ ಮುಖ ಲಕ್ಷಣ.
ಜೊತೆಗೆ ನಗುನಗುತ್ತಾ ಹೆಣ್ಣು ಮಕ್ಕಳು ಮನೆಯ ತುಂಬಾ ಓಡಾಡಿಕೊಂಡಿದ್ದರೆ ಆ ಮನೆಯಲ್ಲಿ ಲಕ್ಷ್ಮಿ ಓಡಾಡಿದಂತೆಯೇ ಇರುತ್ತೆ. ಇನ್ನು ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ತಾಯಿ ಮನೆಯಲ್ಲಿ ಸಂಸ್ಕಾರ ಕಲಿಸಿರುತ್ತಾರೆ. ಅವರು ಮದುವೆಯಾಗಿ ಹೋದ ನಂತರವೂ ಆ ಮನೆಯಲ್ಲಿಯೂ ಕೂಡ ಸಂಸ್ಕಾರಯುತವಾಗಿ ವರ್ತಿಸುತ್ತಾರೆ. ಇದರಿಂದ ಹೆಣ್ಣು ಮಕ್ಕಳು ಹುಟ್ಟಿದ ಮನೆಗೂ ಹೋಗುವ ಮನೆಗೆ ಬೆಳಕು ತರುತ್ತಾರೆ.
ಹೆಣ್ಣು ಮಕ್ಕಳು ಸೂರ್ಯೋದಯವಾದ ನಂತರ ಮಲುಗಿರಬಾರದು. ಸೂರ್ಯ ಹುಟ್ಟುವುದಕ್ಕೂ ಮೊದಲೇ ಎದ್ದು ಮನೆಯಲ್ಲಿ ರಂಗೋಲಿ ಇಟ್ಟು ತುಳಸಿ ಪೂಜೆ ಮಾಡಿದರೆ ಆ ಮನೆಗೆ ಲಕ್ಷ್ಮೀದೇವಿ ತಾನಾಗಿಯೇ ಒಲಿದು ಬರುತ್ತಾಳೆ. ಅಷ್ಟೇ ಅಲ್ಲ ಸ್ನೇಹಿತರೆ ಸೂರ್ಯಾಸ್ತದ ಬಳಿಕ ಅಂದರೆ ಮುಸ್ಸಂಜೆಯ ಹೊತ್ತು ಕೂಡ ಹೆಣ್ಣು ಮಕ್ಕಳು ಮನೆಯಲ್ಲಿ ಕಾಲು ಚಾಚಿ ಮಲಗುವುದು ಖಂಡಿತವಾಗಿಯೂ ಅದೃಷ್ಟದ ಸಂಕೇತವಲ್ಲ.
ಇನ್ನು ಹೆಣ್ಣು ಮಕ್ಕಳು ಮಲಗುವಾಗ ಕೂದಲನ್ನು ಬಿಟ್ಟು ಮಲಗಬಾರದು ಕೂದಲನ್ನು ಕಟ್ಟಿಕೊಂಡೆ ಮಲಗಬೇಕು. ಸೂರ್ಯೋದಯವಾದ ನಂತರ ಹೆಣ್ಣು ಮಕ್ಕಳು ಕೂದಲನ್ನ ಬಿಚ್ಚಿಕೊಂಡು ಮನೆಯಲ್ಲಿ ಓಡಾಡುವುದು ಶ್ರೇಯಸ್ಕರವಲ್ಲ. ದಿನವೂ ಹಣೆಗೆ ಕುಂಕುಮವಿಟ್ಟು, ಬಳೆ ತೊಟ್ಟು, ಕೂದಲಿಗೆ ಹೂವು ಮುಡಿದು ಮನೆ ತುಂಬಾ ಹೆಣ್ಣು ಮಕ್ಕಳು ಓಡಾಡಿಕೊಂಡಿದ್ದರೆ ಆ ಮನೆಯಲ್ಲಿ ಲಕ್ಷ್ಮಿ ಕೃಪಾಕಟಾಕ್ಷ ಇದ್ದೇ ಇರುತ್ತದೆ.
ಹೆಣ್ಣುಮಕ್ಕಳು ಲಕ್ಷ್ಮಿಯ ಸ್ವರೂಪವೇ ಆಗಿರುತ್ತಾರೆ. ಹಾಗಾಗಿ ಮನೆಯಲ್ಲಿ ಇರುವ ಹೆಣ್ನನ್ನು ಮನೆಯವರೆಲ್ಲರೂ ಗೌರವಿಸುವುದು ಕೂಡ ಅಷ್ಟೇ ಮುಖ್ಯ. ಯಾವ ಮನೆಯಲ್ಲಿ ಹೆಣ್ಣನ್ನು ತಿರಸ್ಕಾರ ಭಾವದಿಂದ ನೋಡುತ್ತಾರೋ ಅಂತವರ ಮನೆಯಲ್ಲಿ ದಾರಿದ್ರ್ಯ ತುಂಬಿ ತುಳುಕಾಡುತ್ತದೆ. ಅಡೇ ಹೆಣ್ನು ಮಕ್ಕಳನ್ನು ಪ್ರೀತಿ ಗೌರವ, ಆದರದಿಂದ ನೋಡಿದರೆ ಸಾಕ್ಷಾತ್ ಲಕ್ಷ್ಮಿ ದೇವಿಯೇ ಆ ಮನೆಯವರ ಜೊತೆ ನೆಲೆಸುತ್ತಾಳೆ. ಇಂದು ಬದಲಾದ ಯುಗದಲ್ಲಿ ಹೆಣ್ನುಮಕ್ಕಳು ಸಂಸ್ಕಾರಕ್ಕಿಂದ ಆಧುನಿಕ ಫ್ಯಾಶನ್ ಗಳಿಗೆ ಒತ್ತು ಕೊದುವುದೇ ಹೆಚ್ಚು. ಹೀಗೆ ಮಾಡುವುದರರಿಂದ ಒಳಿತಾಗುವುದಕ್ಕಿಂತಲೂ ಕೆಡುಕಾಗುವುದೇ ಹೆಚ್ಚು.