ಎಷ್ತೋ ಜನ ಒಂದು ಮದುವೆ ಆದರೆ ಸಾಕು, ಸಾಕಪ್ಪಆ ಜೀವನ ಎನ್ನುತ್ತಾರೆ. ಸಂಸಾರ ಜಂಜಾಟದಲ್ಲಿ ಕೆಲವರು ಮುಳುಗಿ ಎದ್ದು ಯಾಕಾದ್ರೂ ಮದುವೆ ಆದನಪ್ಪ ಅಂತ ಯೋಚನೆ ಮಾಡುತ್ತಾರೆ ಆದರೆ ಇಲ್ಲೊಬ್ಬ ವ್ಯಕ್ತಿ ನೋಡಿ ಫ್ಯಾಮಿಲಿ ಪ್ಲಾನಿಂಗ್ ಎನ್ನುವ ವಿಷಯ ಆತನಿಗೆ ಗೊತ್ತಿಲ್ಲ ಈ ಹೊಸ ಯುಗದಲ್ಲಿಯೂ ಕೂಡ ಇಂಥವರು ಇರ್ತಾರ ಅಂತ ನಿಮಗೆ ಆಶ್ಚರ್ಯ ಆಗಬಹುದು. ದೇಶದ ಜನಸಂಖ್ಯೆ ಹೆಚ್ಚಿಸುವುದೇ ಇವನ ಉದ್ದೇಶವೇನೋ.
ಯಾಕಂದ್ರೆ ಈತ 12 ಜನ ಪತ್ನಿಯರು 102 ಜನ ಮಕ್ಕಳು ಹಾಗೂ 568 ಜನ ಮೊಮ್ಮಕ್ಕಳನ್ನು ಹೊಂದಿದ್ದಾನೆ. ಹಾಗಾದ್ರೆ ಈ ಮಹಾನ್ ಪುರುಷ ಯಾರು ಗೊತ್ತಾ ಎಲ್ಲಿದ್ದಾನೆ ಗೊತ್ತಾ? ಬನ್ನಿ ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿಯನ್ನು ನೋಡೋಣ. ಈತ ಪೂರ್ವ ಉಗಂಡಾದ ಗ್ರಾಮೀಣ ಪ್ರದೇಶ ಬುಟಲೇಜಾ ಜಿಲ್ಲೆಯ ಭುಗಿಸ ಗ್ರಾಮದಲ್ಲಿ ವಾಸಿಸುತ್ತಾನೆ.
ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವ್ಯಕ್ತಿಯ ಹೆಸರು ಸಿಕ್ಕಾಪಟ್ಟೆ ಓಡಾಡುತ್ತಿದೆ ಆತನ ಹೆಸರು ಮೂಸ ಹಸ್ಯ ಕಾಸರ. ಈತ ವೃತ್ತಿಯಲ್ಲಿ ರೈತ 1972ರಲ್ಲಿ ಮೊದಲ ಮದುವೆ ಆಗುತ್ತಾನೆ. ಸಾಂಪ್ರದಾಯಿಕವಾಗಿ ಮೂಸ ಹಾಗೂ ಆತನ ಪತ್ನಿ ವಿವಾಹವಾಗುತ್ತಾರೆ. ಮೊದಲ ಮದುವೆ ಆಗುವಾಗ ಮೂಸನಿಗೆ 17 ವರ್ಷ ವಯಸ್ಸು ಒಂದು ವರ್ಷದ ಬಳಿಕ ಮಗುವನ್ನು ಪಡೆದ ಈ ದಂಪತಿಗಳು ಮಗುವಿಗೆ ಸಾಂಡ್ರಾ ನಬ್ವಿರ್ ಎಂದು ಹೆಸರಿಟ್ಟರು.
ಮೊದಲ ಮಗು ಹುಟ್ಟಿದ ನಂತರ ಆತನ ಸ್ನೇಹಿತರು ಸಂಬಂಧಿಕರು ವಂಶವನ್ನು ಬೆಳೆಸುವುದಕ್ಕಾಗಿ ಇನ್ನೂ ಹೆಚ್ಚಿನ ಮಕ್ಕಳನ್ನು ಪಡೆಯುವಂತೆ ಸಲಹೆ ನೀಡಿದರಂತೆ. ಅದಕ್ಕಾಗಿ ಮೂಸ ಅವರು 12 ಜನರನ್ನ ಮದುವೆ ಆಗುತ್ತಾರೆ. ಇದೀಗ ಮೂಸ ಅವರ ಕಿರಿಯ ಮಗನ ವಯಸ್ಸು ಆರು ವರ್ಷ ಹಾಗೇನೇ ಹಿರಿಯ ಮಗನ ವಯಸ್ಸು ಬರೋಬ್ಬರಿ ಐವತ್ತೊಂದು ವರ್ಷ. ಅಂದಹಾಗೆ ಮೂಸಗೆ ಈಗ ವಯಸ್ಸು ಕೂಡ ಆಯ್ತು ಹಾಗಾಗಿ ತನ ಎಲ್ಲ ಮಕ್ಕಳ ಹೆಸರು ಕೂಡ ಆತನಿಗೆ ನೆನಪಿಲ್ಲವಂತೆ.
ಮೂಸನ ಮಕ್ಕಳು ಕೂಡ ಕೆಲವರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.ಇಂತಿಪ್ಪ ಮೂಸಾ ಎ ಎಫ್ ಪಿಗೆ ಕರೆ ಮಾಡಿ ತನ್ನ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದನ್ನು ತಿಳಿಸಿದ್ದಾರೆ. ಹಾಗೆಯೇ ಸಹಾಯವನ್ನು ಕೂಡ ಕೇಳಿದ್ದಾರೆ. ” ಮೊದಲು ಎಲ್ಲವೂ ಚೆನ್ನಾಗಿತ್ತು ಈಗ ದೊಡ್ಡ ಸಮಸ್ಯೆ ಆರಂಭವಾಗಿದೆ. ಇಷ್ಟು ದೊಡ್ಡ ಕುಟುಂಬವನ್ನು ನಿಭಾಯಿಸಲು ಸಾಧ್ಯವಾಗುತ್ತಿ.ಲ್ಲ ನನ್ನ ಬಳಿ ಇರುವುದು ಕೇವಲ ಎರಡು ಎಕರೆ ವ್ಯವಸಾಯ ಭೂಮಿ ಮಾತ್ರ.
ಮಕ್ಕಳ ಬಟ್ಟೆ, ವಿದ್ಯಾಭ್ಯಾಸ ಎಲ್ಲಾ ಖರ್ಚನ ಭರಿಸುವುದು ಕಷ್ಟವಾಗಿದೆ. ಅದೇ ರೀತಿ ನನ್ನ ಕಷ್ಟವನ್ನು ನೋಡಿ ಬೇಸತ್ತ ಇಬ್ಬರು ಪತ್ನಿಯರು ನನ್ನನ್ನು ಬಿಟ್ಟು ಹೋಗಿದ್ದಾರೆ. ಹಣದ ಕೊರತೆ ಸಾಕಷ್ಟು ಹೆಚ್ಚಾಗಿದೆ ಮಕ್ಕಳಿಗೂ ಕೂಡ ಆಸ್ತಿ ಮಾಡಿಡಲು ಸಾಧ್ಯವಾಗಲಿಲ್ಲ” ಈ ರೀತಿಯಾಗಿ ಮೂಸಾ ತಮ್ಮ ಕಥೆಯನ್ನು ಹೇಳಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.