ಚಂದನವನದ ಎವರ್ ಗ್ರೀನ್ ನಟಿ ರಕ್ಷಿತಾ ಪ್ರೇಮ್. ಇದೀಗ ಸಿನಿಮಾ ನಟನೆಯಿಂದ ದೂರವಾದರೂ ಸಿನಿಮಾ ರಂಗದ ನಂಟನ್ನು ಬಿಟ್ಟಿಲ್ಲ. ಸಿನಿಮಾ ರಂಗದಲ್ಲಿ ಒಂದಲ್ಲ ಒಂದು ಆಕ್ಟಿವಿಟಿಯಲ್ಲಿ ತೊಡಗಿಕೊಂಡಿದ್ದಾರೆ ರಕ್ಷಿತಾ ಪ್ರೇಮ್. ರಕ್ಷಿತಾ ಪ್ರೇಮ್ ಅವರ ಸಿನಿ ಜರ್ನಿ ಬಹಳ ದೊಡ್ಡದಿದೆ ಸಾಕಷ್ಟು ವರ್ಷಗಳ ಕಾಲ ಸಿನಿರಂಗವನ್ನು ಆಳಿದ ನಟಿ ಎಂದರೆ ತಪ್ಪಾಗಲಿಕ್ಕಿಲ್ಲ. ನಟಿ ರಕ್ಷಿತಾ ಪ್ರೇಮ್ ಅವರ ಬಗ್ಗೆ ನಾವು ಈ ಲೇಖನದಲ್ಲಿ ಇನ್ನಷ್ಟು ಮಾಹಿತಿಯನ್ನು ಕೊಡುತ್ತೇವೆ. ತಪ್ಪದೇ ಓದಿ.
ನಟಿ ರಕ್ಷಿತಾ ಅವರ ಮೂಲ ಹೆಸರು ಶ್ವೇತಾ. ಇವರು 2002ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ ಅಪ್ಪು ಸಿನಿಮಾದ ಮೂಲಕ ತಮ್ಮ ಸಿನಿ ಪಯಣವನ್ನು ಆರಂಭಿಸಿದರು ಅಪ್ಪು ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಪುನೀತ್ ಅವರ ತಾಯಿ ಪಾರ್ವತಮ್ಮ ರಾಜಕುಮಾರ್ ರಕ್ಷಿತಾ ಅವರಿಗೆ ಶ್ವೇತಾ ಬದಲು ರಕ್ಷಿತಾ ಎಂದು ಇಟ್ಟುಕೋ ಎಂದು ಸಲಹೆ ನೀಡಿದರಂತೆ.
ಅಪ್ಪು ಸಿನಿಮಾದಲ್ಲಿ ರಕ್ಷಿತಾ ಎನ್ನುವ ಪಾತ್ರವನ್ನು ನಿಭಾಯಿಸಿದ ಶ್ವೇತ ಅಲ್ಲಿಂದ ಮುಂದೆ ರಕ್ಷಿತಾಳಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡರು. ನಟಿ ರಕ್ಷಿತಾ ಬೆಂಗಳೂರಿನವರು. ಇವರು ಮಾರ್ಚ್ 31 1984 ರಲ್ಲಿ ಜನಿಸಿದರು. ಇವರ ತಂದೆ ಅತ್ಯುತ್ತಮ ಸಿನಿಮಾ ಟೋಗ್ರಾಫರ್ ಆಗಿರುವ ಬಿ ಸಿ ಗೌರಿಶಂಕರ್. ಮತ್ತು ತಾಯಿ ಮಮತಾ ರಾವ್. ಇವರು ಕೂಡ ಸಿನಿಮಾ ರಂಗಕ್ಕೆ ಪರಿಚಿತರೆ.
ಸಣ್ಣ ವಯಸ್ಸಿನಲ್ಲಿಯೇ ಅಭಿನಯವನ್ನು ಆರಂಭಿಸಿದ ರಕ್ಷಿತ ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಬೇರೆ ಬೇರೆ ಪಾತ್ರಗಳನ್ನು ನಿಭಾಯಿಸಿದ್ದಾರೆ. ಒಂದು ಕಾಲದಲ್ಲಿ ರಮ್ಯಾ ರಕ್ಷಿತಾ ಮೊದಲದವರು ಒಟ್ಟಾಗಿ ಸಿನಿಮಾರಂಗದಲ್ಲಿ ಕಾಣಿಸಿಕೊಂಡವರು ಆ ಸಮಯದಲ್ಲಿ ಟಾಪ್ ಹೀರೋಯಿನ್ ಆಗಿದ್ದ ನಟಿಯರು ಇವರು. ರಕ್ಷಿತಾ ಅವರು ಕನ್ನಡದಲ್ಲಿ ಪುನೀತ್ ರಾಜಕುಮಾರ್, ದರ್ಶನ್, ಸುದೀಪ್, ಉಪೇಂದ್ರ, ಶ್ರೀ ಮುರುಳಿ, ಶಿವರಾಜ್ ಕುಮಾರ್ ಹೀಗೆ ಎಲ್ಲಾ ಘಟಾನುಘಟಿ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರಗಳಲ್ಲಿಯೂ ಕೂಡ ನಟಿಸಿದ ಖ್ಯಾತಿ ರಕ್ಷಿತಾ ಅವರದ್ದು. ಪರಭಾಷಾ ನಟರಾದ ಚಿರಂಜೀವಿ, ನಾಗಾರ್ಜುನ, ಮಹೇಶ್ ಬಾಬು, ರವಿತೇಜ ಮೊದಲಾದ ಖ್ಯಾತ ನಟರ ಜೊತೆಗೆ ರಕ್ಷಿತಾ ಅಭಿನಯಿಸಿದ್ದಾರೆ. ಆದರೆ ಕನ್ನಡದಲ್ಲಿ ಜನ ಗುರುತಿಸುವುದು ಮಾತ್ರ ದರ್ಶನ್ ಹಾಗೂ ರಕ್ಷಿತಾ ಅವರ ಜೋಡಿಯನ್ನು. ರಕ್ಷಿತಾ ಅವರು ನಿರ್ದೇಶಕ ಪ್ರೇಮ್ ಅವರ ಜೊತೆಗೆ 2007ರಲ್ಲಿ ವಿವಾಹವಾದರು.
ಇವರಿಗೆ ಸೂರ್ಯ ಎನ್ನುವ ಮುದ್ದಾದ ಮಗನಿದ್ದಾನೆ. ಮದುವೆಯಾದ ನಂತರ ನಟನೆಯನ್ನು ತೊರೆದು ರಕ್ಷಿತಾ ತಮ್ಮ ಹೋಂ ಬ್ಯಾನರ್ ಅಡಿಯಲ್ಲಿ ಸಾಕಷ್ಟು ಸಿನಿಮಾ ನಿರ್ಮಾಣವನ್ನು ಮಾಡಿದ್ದಾರೆ. ಪ್ರೇಮ್ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಶಿವರಾಜ್ ಕುಮಾರ್ ಅವರ 100ನೇ ಚಿತ್ರ ಜೋಗಯ್ಯ ಸಿನಿಮಾ ವನ್ನು ನಿರ್ಮಾಣ ಮಾಡಿದ ಖ್ಯಾತಿ ಇವರದ್ದು. ಕಿರುತೆರೆಯಲ್ಲಿ ಸ್ವಯಂವರ ಕಾರ್ಯಕ್ರಮದ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಕಾಮಿಡಿ ಕಿಲಾಡಿಗಳು ಶೋನ ಮುಖ್ಯ ತೀರ್ಪುಗಾರರಾಗಿದ್ದಾರೆ ನಟಿ ರಕ್ಷಿತಾ. ಇನ್ನು ರಾಜಕೀಯದಲ್ಲಿಯೂ ಕೂಡ ರಕ್ಷಿತಾ ತಮ್ಮನ ತಾವು ತೊಡಗಿಸಿಕೊಂಡಿದ್ದಾರೆ 2014ರಿಂದ ಬಿಜೆಪಿ ಪಕ್ಷವನ್ನು ಸೇರಿ ಸಾಕಷ್ಟು ಕೆಲಸಗಳನ್ನು ಕೂಡ ಮಾಡಿದ್ದಾರೆ. ಅಂದಹಾಗೆ ರಕ್ಷಿತಾ ಮುದ್ದಾದ ನಟಿ ಈಗಲೂ ಯುವತಿಯಂತೆ ಕಾಣುವ ನಟಿ ರಕ್ಷಿತಾ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?
ಹೌದು ನಟಿ ರಕ್ಷಿತಾ, ಒಬ್ಬ ಸೊಗಸಾದ ನಟಿ ಈಗಲೂ ಚಿಕ್ಕ ವಯಸ್ಸಿನಂತೆ ಕಾಣುವ ರಕ್ಷಿತ ಅವರಿಗೆ ಈಗ ಸುಮಾರು 38 ವರ್ಷ ವಯಸ್ಸು. ಆದರೆ ಈಗಲೂ ಮೊದಲಿನಂತೆಯೇ ತಮ್ಮ ಚಾರ್ಮ್ ಉಳಿಸಿಕೊಂಡಿರುವ ರಕ್ಷಿತಾ ಸಿನಿರಂಗದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡುವ ಆಸೆಯನ್ನು ಇಟ್ಟುಕೊಂಡಿದ್ದಾರೆ.