ಈಗಲೂ ಹರೆಯದ ಯುವತಿಯ ಹಾಗೆ ಕಂಗೊಳಿಸುವ ಭೂಲೋಕ ಅಪ್ಸರೆ ನಟಿ ಪ್ರಿಯಾಮಣಿ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ಗೊತ್ತಾದ್ರೆ ನಿಮ್ಮ ಖುಷಿ ದುಪ್ಪಟ್ಟಾಗೋದು ಖಂಡಿತ ನೋಡಿ!!

ಸುದ್ದಿ

‘ಹೊಸಗಾನ ಭಜನಾ ಹಳೆ ಪ್ರೇಮ ಪುರಾಣ’ ಕನ್ನಡದ ಫೇಮಸ್ ಹಾಡು ಇದು. ಬಹುಶಃ ಇದನ್ನ ಯಾರು ಮರೆಯೋದಕ್ಕೆ ಸಾಧ್ಯವೇ ಇಲ್ಲ. ನಮ್ಮ ನಿಮ್ಮೆಲ್ಲರ ಮೆಚ್ಚಿನ ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್ ಹಾಗೂ ನಟಿ ಪ್ರಿಯಾಮಣಿ ನಟಿಸಿದ ರಾಮ್ ಸಿನಿಮಾದ ಹಾಡು ಇದು. ಈ ಹಾಡು ಎಷ್ಟು ಫೇಮಸ್ ಆಯ್ತು ಅದೇ ರೀತಿ ನಟಿ ಪ್ರಿಯಾಮಣಿ ಇದೇ ಸಿನಿಮಾದ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರರಾದರು.

ಇಂದಿಗೂ ಬಹು ಬೇಡಿಕೆಯ ನಟಿಯಾಗಿರುವ ಪ್ರಿಯಾಮಣಿ ಅವರ ಬಗ್ಗೆ ನಿಮಗೆ ಇನ್ನೊಂದಿಷ್ಟು ಮಾಹಿತಿಗಳನ್ನ ನಾವು ತಿಳಿಸಿಕೊಡುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸ್ನೇಹಿತರೆ ಕನ್ನಡದಲ್ಲಿ ಅದೆಷ್ಟೋ ನಟಿಯರು ಬಂದು ಹೋಗಿದ್ದಾರೆ ಆದರೆ ಕೆಲವರು ಮಾತ್ರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ಅಂತಹ ನಟಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವವರು ನಟಿ ಪ್ರಿಯಾಮಣಿ.

ಪ್ರಿಯಾಮಣಿ ಅವರು 1984 ಜೂನ್ 4ರಂದು ಬೆಂಗಳೂರಿನಲ್ಲಿ ಜನಿಸಿದರು ಇವರ ತಂದೆ ವಾಸುದೇವ ಮಣಿ ಮತ್ತು ತಾಯಿ ಲತಾಮಣಿ ವಾಸುದೇವ ಮಣಿ ಅವರು ಅಗ್ರಿಕಲ್ಚರ್ ಉದ್ಯಮಿಯಾಗಿದ್ದಾರೆ ಇನ್ನು ಲತಾ ಮಣಿ ಬಗ್ಗೆ ನಿಮಗೂ ಗೊತ್ತಿರಬಹುದು ಅವರು ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ. ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಭಾರತವನ್ನು ಪ್ರತಿನಿಧಿಸಿದ ಆಟಗಾರ್ತಿ ಲತಾಮಣಿ.

ಪ್ರಿಯಾಮಣಿ ಕೂಡ ಕ್ರೀಡೆಯಲ್ಲಿ ಹೊಂದಿದವರು ಆದರೆ ಅವರು ವೃತ್ತಿಯನ್ನು ಆಯ್ದುಕೊಂಡಿದ್ದು ಮಾತ್ರ ನಟಿಯಾಗಿ. ಬಹುಮುಖ ಪ್ರತಿಭೆ ಆಗಿರುವ ನಟಿ ಪ್ರಿಯಾಮಣಿ ಕನ್ನಡದವರೇ ಆದರೂ ತಮಿಳು ತೆಲುಗು ಹಿಂದಿ ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿದ ಅತ್ಯದ್ಭುತ ಅಭಿನೇತ್ರಿ. 2003ರಲ್ಲಿ ತೆರೆಕಂಡ ಇವರೇ ಆಟಗಾಡು ಎನ್ನುವ ತಮಿಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದರು.

ಇವರ ಅಭೂತಪೂರ್ವ ಅಭಿನಯಕ್ಕೆ ಮನಸೋಲದವರೇ ಇಲ್ಲ. ಇವರಿಗೆ ವಿವಿಧ ಭಾಷೆಗಳು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಇವರ ನೈಜ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳು ಕೂಡ ಸಂದಿದೆ. ಫಿಲಂ ಫೇರ್ ಅವಾರ್ಡ್ ಇರಬಹುದು ರಾಷ್ಟ್ರೀಯ ಚಿತ್ರಕಲಾ ಪ್ರಶಸ್ತಿಗಳು ಇರಬಹುದು ಒಟ್ಟಾರೆಯಾಗಿ ಪ್ರಿಯಾಮಣಿ ಸಾಕಷ್ಟು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಪ್ರಿಯಾಮಣಿ ಅವರು ಕನ್ನಡದಲ್ಲಿ ರಾಮ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟರು. ಕನ್ನಡದಲ್ಲಿ ಅಭಿನಯಿಸಿದ ಮೊದಲ ಸಿನಿಮಾದಿಂದಲೇ ಪ್ರಿಯಾಮಣಿಯವರ ವರ್ಚಸ್ಸು ಹೆಚ್ಚಾಯ್ತು. ಹಾಗಾಗಿ ಅವರ ಬೇಡಿಕೆಯು ಕೂಡ ಹೆಚ್ಚಾಯಿತು. ಪ್ರಿಯಾಮಣಿ ಇದುವರೆಗೆ ಸಾಕಷ್ಟು ವಿಭಿನ್ನವಾದ ಹಾಗೂ ಚಾಲೆಂಜಿಂಗ್ ಆದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅಣ್ಣಾಬಾಂಡ್, ದನ ಕಾಯೋನು, ದ್ವಜ ದ್ವಿಪಾತ್ರದ ಅಭಿನಯದಲ್ಲಿ ಚಾರುಲತಾ ಸಿನಿಮಾ ಸೇರಿದಂತೆ ಪ್ರಿಯಾಮಣಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ.

ಇಂದು ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಇನ್ನು ಕನ್ನಡದಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನ ತೀರ್ಪುಗಾರರಾಗಿಯೂ ಕೂಡ ಪ್ರಿಯಾಮಣಿ ಕಾರ್ಯನಿರ್ವಹಿಸಿದ್ದಾರೆ. ಪ್ರಿಯಾಮಣಿ ಅವರು ಆಗಸ್ಟ್ 23 2017ರಲ್ಲಿ ಮುಸ್ತಫ ರಾಜ್ ಎಂಬ ಉದ್ಯಮಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮಾನ್ಯವಾಗಿ ನಟಿಯರು ಮದುವೆಯಾದ ನಂತರ ಸಿನಿಮಾದಲ್ಲಿ ಅಭಿನಯಿಸುವುದನ್ನು ಬಿಡುತ್ತಾರೆ.

ಆದರೆ ಪ್ರಿಯಾಮಣಿ ವಿಷಯದಲ್ಲಿ ಇದು ನಡೆದಿಲ್ಲ ಅವರು ಮದುವೆಯಾದ ನಂತರವೂ ಕೂಡ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರಿಯಾಮಣಿ ಈಗಲೂ ಮನಮೋಹಕ ನಟಿ. ಇವರ ವೈಯಾರಕ್ಕೆ ಮನಸೋಲದವರೇ ಇಲ್ಲ ನೋಡುವುದಕ್ಕೆ ಕೇವಲ 24 ವರ್ಷದವರಂತೆ ಕಂಡರೂ ಕೂಡ ಪ್ರಿಯಾಮಣಿಯ ವಯಸ್ಸು ಎಷ್ಟು ಗೊತ್ತಾ? ಹೌದು ಪ್ರಿಯಾಮಣಿ ನೋಡುವುದಕ್ಕೆ ಬಹಳ ಮುದ್ದಾಗಿದ್ದು ಇದೀಗ 34 ವರ್ಷದ ವಸಂತದಲ್ಲಿದ್ದಾರೆ. ಮಹಿಳಾ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಪ್ರಿಯಾಮಣಿಗೆ ಕನ್ನಡ ಮಾತ್ರವಲ್ಲದೆ ಬೇರೆ ಎಲ್ಲಾ ಭಾಷೆಗಳಿಂದಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ.

Leave a Reply

Your email address will not be published. Required fields are marked *