ಕನ್ನಡ ಸಿನಿಮಾ ಇಂಡಸ್ಟ್ರಿ (Sandalwood) ಯಲ್ಲಿ ಈಗಲೂ ಸಕ್ರಿಯವಾಗಿರುವ ನಟಿ ಭಾವನಾ ರಾಮಣ್ಣ (Bhavana Ramanna) ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ಭಾವನಾ ರಾಮಣ್ಣ ನಟಿಸಿದ್ದಾರೆ. ಭಾವನಾ ಅವರು ಅತ್ಯುತ್ತಮ ಭರತನಾಟ್ಯಗಾರ್ತಿ (Bharatanatyam) ಅನ್ನೋದು ಗೊತ್ತಿಲ್ಲ. ಹೌದು ಸುಮಾರು 10 ವರ್ಷಗಳ ಕಾಲ ಭಾವನಾ ರಾಮಣ್ಣ ಭರತನಾಟ್ಯ ಅಭ್ಯಾಸ ಮಾಡಿ ಭರತನಾಟ್ಯ ಪ್ರವೀಣ ಎನಿಸಿಕೊಂಡಿದ್ದಾರೆ ಈಗಾಗಲೇ ಸಾಕಷ್ಟು ವೇದಿಕೆಯ ಮೇಲೆ ನೃತ್ಯ ಪ್ರದರ್ಶನ ಮಾಡಿದ್ದಾರೆ.
ಭಾವನಾ ಅವರು ಇಂತಿ ನಿನ್ನ ಪ್ರೀತಿಯ ಎನ್ನುವ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಜೊತೆಗೆ ಇಂಟಿಮೇಟ್ ಸೀನ್ (intimate Sean) ನಲ್ಲಿ ಅಭಿನಯಿಸಿ ಹೆಸರು ಗಳಿಸಿದರು. ಅಲ್ಲಿಂದ ಭಾವನಾ ಅವರಿಗೆ ಇನ್ನಷ್ಟು ಅವಕಾಶಗಳು ಹುಡುಕಿಕೊಂಡು ಬಂದವು. ಈಗಲೂ ಭಾವನ ಪೋಷಕ ನಟಿಯಾಗಿ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಇತ್ತೀಚಿಗೆ ಡಾಲಿ ಧನಂಜಯ್ ಅಭಿನಯದ ಒನ್ಸ್ ಅಪೊನ್ ಅ ಟೈಮ್ ಇನ್ ಜಮಾಲಿ ಗುಡ್ಡ ಎನ್ನುವ ಟ್ರೈಲರ್ ಸಿನಿಮಾದಲ್ಲಿ ಭಾವನ ಉತ್ತಮ ಪಾತ್ರ ಒಂದನ್ನು ನಿಭಾಯಿಸಿದ್ದಾರೆ. ಇನ್ನು ಭಾವನಾ ಅವರು ವಯಸ್ಸು 40 ದಾಟಿದರೂ ಇನ್ನೂ ಮದುವೆ ಆಗ್ಲಿಲ್ಲ ಯಾಕೆ ಅಂತ ಹಲವರ ಪ್ರಶ್ನೆ. ಈಗಾಗಲೇ ಸಂದರ್ಶನದಲ್ಲಿಯೂ ಕೂಡ ಈ ಪ್ರಶ್ನೆಯನ್ನು ಭವನ ಅವರಿಗೆ ಕೇಳಲಾಗಿತ್ತು ಅದಕ್ಕೆ ಭಾವನಾ ರಾಮಣ್ಣ ನೀಡಿದ ಉತ್ತರ ಏನು ಗೊತ್ತಾ?
ನಾನು ಮದುವೆ (marriage) ಆಗದೆ ಇರೋದಕ್ಕೆ ಇಂಥದ್ದೇ ಅನ್ನುವ ಕಾರಣ ಇಲ್ಲ ಆದರೆ ಸಣ್ಣ ಪುಟ್ಟ ಕಾರಣಗಳನ್ನ ಹೇಳುವುದಾದರೆ ನನಗೆ ಕೋಪ ಜಾಸ್ತಿ ತಾಳ್ಮೆ ಕಡಿಮೆ ಹಾಗಾಗಿ ನನ್ನ ಜೊತೆ ಜೀವನ ಮಾಡುವ ವ್ಯಕ್ತಿ ಅಷ್ಟು ಹೊಂದಿಕೊಂಡು ಹೋಗಲು ಶಕ್ಯನಾಗಿರಬೇಕು. ನಮ್ಮ ಮನೋಭಾವಕ್ಕೆ ಹೊಂದಾಣಿಕೆ ಆಗದಂತಹ ವ್ಯಕ್ತಿ ಸಿಕ್ಕರೆ ಬದುಕು ನರಕ ಸದೃಶ ಆಗಿರುತ್ತೆ.
ಮದುವೆಯಾಗಿ ಸಾಕಷ್ಟು ಜನ ಜೀವನ ಹಾಳು ಮಾಡಿಕೊಂಡಿದ್ದನ್ನು ನೋಡಿದ್ದೇನೆ, ಪತಿಯನ್ನು ಕಳೆದುಕೊಂಡವರನ್ನು ನೋಡಿದ್ದೇನೆ ಹಾಗೆ ನೋಡಿದರೆ ನಾನು ಸೇಫ್ ಆಗಿ ಇದ್ದೇನೆ. ಹಾಗಾಗಿ ಮದುವೆ ಆಗದೆ ನನಗೆ ಕೆಟ್ಟದ್ದಾಗಿದೆ ಎಂದು ಅನಿಸುತ್ತಿಲ್ಲ. ಸದ್ಯಕ್ಕಂತೂ ನಾನು ಸಂತೋಷವಾಗಿ ಇದ್ದೇನೆ ಎಂದು ಭಾವನ ಹೇಳಿದ್ದಾರೆ ಭಾವನಾ ಅವರ ಮಾತನ್ನು ಕೇಳಿದರೆ ಅವರಿಗೆ ಈಗ ವಿವಾಹದಲ್ಲಿ ಅಷ್ಟು ಆಸಕ್ತಿ ಇಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಯಾಕಂದ್ರೆ ಅವರು ವೃತ್ತಿ ಜೀವನದಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ.
ಭಾವನ ಅವರ ಹೆಸರು ನಂದಿನಿ ರಾಮಣ್ಣ ನಿರ್ದೇಶಕ ಕೂಡ್ಲ ರಮೇಶ (Kudla Ramesh) ಅವರು, ನಂದಿನಿ ಅವರನ್ನು ಭಾವನಾ ಎಂದು ಹೆಸರು ಇಟ್ಟುಕೊಳ್ಳುವಂತೆ ಹೇಳಿದರಂತೆ. ಆ ಬಳಿಕ ನಂದಿನಿ ರಾಮಣ್ಣ ಭಾವನಾ ರಾಮಣ್ಣ ಆದ್ರೂ. ಭಾವನ ಮೊದಲು ಬಣ್ಣ ಹಚ್ಚಿದ್ದು ತುಳು ಸಿನಿಮಾ ಒಂದರಲ್ಲಿ. 1996 ರಿಂದ ತಮ್ಮ ವೃತ್ತಿ ಜೀವನ ಆರಂಭಿಸಿದರು 1997ರಲ್ಲಿ ಈ ನೀ ಮುಡಿದ ಮಲ್ಲಿಗೆ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು ಅದಾದ ಬಳಿಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಭಾವನಾ ಹಿಂತಿರುಗಿ ನೋಡಿದ್ದೇ ಇಲ್ಲ.
ಒಂದಾದ ಮೇಲೆ ಒಂದರಂತೆ ಸಾಲು ಸಾಲು ಸಿನಿಮಾಗಳಲ್ಲಿ ಭಾವನ ಅಭಿನಯಿಸಿದ್ದಾರೆ. ಭಾವನಾ ಅವರು ನಟಿಸಿದ ಕೆಲವು ಸಿನಿಮಾಗಳನ್ನ ಹೆಸರಿಸುವುದಾದರೆ, ಚಂದ್ರಮುಖಿ ಪ್ರಾಣಸಖಿ, ದೇವೇರಿ, ದೀಪಾವಳಿ, ಎಲ್ಲರ ಮನೆ ದೋಸೆನು, ಕುರಿಗಳು ಸಾರ್ ಕುರಿಗಳು, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ, ಕ್ರೇಜಿ ಸ್ಟಾರ್, ಭಾಗೀರಥಿ ಮೊದಲಾದವು.