ಸಿನಿಮಾ ಅನ್ನೋದು ಒಂದು ಕ್ರೇಜ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಕೆಲವರ ಕ್ರೇಜ್ ಅಂತೂ ಅತಿರೇಕಕ್ಕೇ ಹೋಗುತ್ತದೆ. ಅಭಿಮಾನಿಗಳಿಗೂ ಅಷ್ಟೇ, ತಮ್ಮ ನೆಚ್ಚಿನ ನಟ ನಟಿಯರು ಅಂದರೆ ಎಲ್ಲಿಲ್ಲದ ಕ್ರೇಜ್ ತಮ್ಮ ಇಷ್ಟದ ನಟ ಅಥವಾ ನಟಿ ತೆರೆಯ ಮೇಲೆ ಬಂದರೆ ಸಾಕು, ಶಿಳ್ಳೆಗಳ ಸುರಿಮಳೆ. ಇನ್ನು ರಿಯಲ್ ಆಗಿ ನೋಡಿದ್ರಂತೂ ಮುಗಿತು, ಅವರ ಜೊತೆ ಡ್ಯಾನ್ಸ್ ಮಾಡೋದಕ್ಕೆ, ಸೆಲ್ಫಿ ತೆಗೆಸಿಕೊಳ್ಳೋದಕ್ಕೆ ಮಾತನಾಡುವುದಕ್ಕೆ ಏನೆಲ್ಲಾ ಸರ್ಕಸ್ ಮಾಡ್ತಾರೆ. ಇನ್ನು ಹಲವು ಅಭಿಮಾನಿಗಳ ಅಭಿಮಾನ ತಾರಕಕೇರಿರುತ್ತೆ.
ತಮ್ಮ ನೆಚ್ಚಿನ ನಟ ನಟಿಯರ ಗಮನ ಸೆಳೆಯಲು ಏನೇನು ಮಾಡುತ್ತಾರೆ. ಇದು ಸಾಮಾನ್ಯ ಜನರ ವಿಷಯವಾದರೆ ಕೆಲವು ಸೆಲೆಬ್ರಿಟಿಗಳು ಕೂಡ ಇನ್ನೊಬ್ಬ ಸೆಲಿಬ್ರೆಟಿಯ ಮೇಲೆ ಅತಿಯಾದ ಕ್ರೇಜ್ ಇಟ್ಟು ಕೊಂಡಿರುತ್ತಾರೆ. ಮಾಡೆಲ್ ಹಾಗೂ ನಟಿಯಾಗಿರುವ ಅಶು ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ಫೇಮಸ್. ಅವರು ಪೋಸ್ಟ್ ಮಾಡುವ ತರಾವರಿ ಹಾಟ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆ ಗಡಿಸುತ್ತವೆ.
ಆಗಾಗ ಹುಡುಗರ ಕಣ್ಣುಗಳಿಗೆ ಸವಾಲು ಹಾಕುವ ಅಶು ರೆಡ್ಡಿ, ಸೋಶಿಯಲ್ ಮೀಡಿಯಾದ ಮೂಲಕವೇ ಸಾಕಷ್ಟುಗಳನ್ನು ಹೊಂದಿದ್ದಾರೆ. ಅಶುರೆಡ್ಡಿ ಅವರ ಒಂದೊಂದು ಫೋಟೋಗಳನ್ನು ನೋಡಿ ಇಡೀ ಸಾಮಾಜಿಕ ಜಾಲತಾಣವೇ ದಂಗಾಗಿದೆ. ಹಾಟ್ ಫೋಟೋಶೂಟ್ಗಳನ್ನು ಆಗಾಗ ಮಾಡಿಸುತ್ತಾ, ಸೆಕ್ಸಿ ಲುಕ್ ನಲ್ಲಿ ಮಿಂಚುವ ಅಶು ರೆಡ್ಡಿಯನ್ನು ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ.
ಇನ್ನು ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯಲ್ಲಿ ಡಬ್ ಸ್ಮಾಷ್ ಗಳನ್ನು ನೃತ್ಯಗಳನ್ನು ಮಾಡುತ್ತಾ ಜನರ ಗಮನ ಸೆಳೆದಿದ್ದಾರೆ ಆದರೆ ಅವರು ಹಾಕುವ ಫೋಟೋಗಳು ಸಾಕಷ್ಟು ಟ್ರೋಲ್ ಗಳಿಗೆ ಕೂಡ ಗುರಿಯಾಗಿವೆ. ಇನ್ನು ಅಶು ರೆಡ್ಡಿ ಪವನ್ ಕಲ್ಯಾಣ್ ಅವರ ಕಟ್ಟಾ ಅಭಿಮಾನಿ ಎನ್ನುವುದು ಎಲ್ಲರಿಗೂ ಗೊತ್ತು. ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸುತ್ತ ಇಂತಹ ಹಲವು ಪ್ರೇಮ್ ಕಹಾನಿಗಳು ಸುತ್ತುತ್ತಲೇ ಇರುತ್ತವೆ.
ಯಾಕಂದ್ರೆ ಪವನ್ ಕಲ್ಯಾಣ್ ಅವರ ಅಭಿಮಾನಿ ಬಳಗ ಬಹಳ ದೊಡ್ಡದು ಅದರಲ್ಲೂ ಪವನ್ ಕಲ್ಯಾಣ್ ಗೆ ಮಹಿಳಾ ಅಭಿಮಾನಿಗಳು ತುಸು ಜಾಸ್ತಿ ಎಂದರೆ ತಪ್ಪಾಗಲಿಕ್ಕಿಲ್ಲ. ಅಂತಹ ಹುಚ್ಚು ಅಭಿಮಾನಿಗಳಲ್ಲಿ ಅಶು ರೆಡ್ಡಿ ಕೂಡ ಒಬ್ಬರು. ಈಗಾಗಲೇ ಪವನ್ ಕಲ್ಯಾಣ್ ಅವರನ್ನು ಸಾಕಷ್ಟು ಬಾರಿ ಭೇಟಿಯಾಗಿರುವ ಅಶು ರೆಡ್ಡಿ, ಈ ಸಲ ಹೊಸದೊಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.
ಹೌದು ಅಶುರೆಡ್ಡಿ ತನ್ನ ಮೈಮೇಲೆ ಪವನ್ ಕಲ್ಯಾಣ್ ಎಂದು ಟ್ಯಾಟೂವನ್ನು ಹಾಕಿಕೊಂಡಿದ್ದಾರೆ. ಪವನ್ ಕಲ್ಯಾಣ್ ಎಂದು ಟ್ಯಾಟು ಹಾಕಿಸಿಕೊಳ್ಳುವವರೆಗೂ ನನಗೆ ಟ್ಯಾಟು ಇಷ್ಟವಾಗುತ್ತಿರಲಿಲ್ಲ ಅಂತ ಪೋಸ್ಟ್ ಹಾಕಿಕೊಂಡಿರುವ ಆಶು ರೆಡ್ಡಿ, ಆ ಟ್ಯಾಟು ಅನ್ನ ತೋರಿಸುವಂತಹ ಬೇರೆ ಬೇರೆ ಭಂಗಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಅಶು ರೆಡ್ಡಿ ತಮ್ಮ ಎದೆಯ ಭಾಗದಲ್ಲಿ ಪವನ್ ಕಲ್ಯಾಣ್ ಎಂದು ಇಂಗ್ಲಿಷ್ನಲ್ಲಿ ಬರೆದುಕೊಂಡಿದ್ದಾರೆ. ಇದು ಪವನ್ ಕಲ್ಯಾಣ್ ಅವರವರೆಗೂ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಈ ವಿಷಯಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳು ಅಂತೂ ಖುಷಿಯಾಗಿದ್ದಾರೆ.
ಅಂದಹಾಗೆ ಸೋಶಿಯಲ್ ನೆಟ್ ವರ್ಕ್ ಚೆಲುವೆ ಅಶು ರೆಡ್ಡಿ, ಎಅರಡು ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಈ ಹಿಂದೆ ರಾಹುಲ್ ಸಿಪ್ಲೀಗಂಜ್ ಜೊತೆ ಅಶು ರೆಡ್ಡಿ ಹೆಸರು ಕೇಳಿ ಬಂದಿತ್ತು. ನಂತರ ಹಾಸ್ಯ ನಟ ಎಕ್ಸ್ ಪ್ರೆಸ್ ಹರಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ. ಆದರೆ ಆಶು ರೆಡ್ಡಿ ಅವರಿಗೆ ಪವನ್ ಕಲ್ಯಾಣ್ ಅಂದ್ರೆ ಅಷ್ಟು ಅಭಿಮಾನ, ಪ್ರೀತಿ ಯಾಕೋ ಗೊತ್ತಿಲ್ಲ ಆದರೆ ಅವರ ವಿಷಯ ಬಂದ್ರೆ ಅಂತೂ ಅಶು ರೆಡ್ಡಿ ಅಂತೂ ಥ್ರಿಲ್ ಆಗುತ್ತಾರೆ.