PhotoGrid Site 1659355800934

ಇಲ್ಲಿಯವರೆಗೆ ಯಾವ ನಟಿಯರು ಕೂಡ ಪಡೆಯದ ಆ ಒಂದು ವಿಶೇಷವಾದ ಪ್ರಶಸ್ತಿಯನ್ನು ಪಡೆದ ನಟಿ ಮೇಘನಾ ರಾಜ್! ಪ್ರಶಸ್ತಿಯ ಹೆಸರು ಕೇಳಿದ್ರೆ ನಿಮ್ಮ ಉಸಿರು ನಿಂತು ಬಿಡುತ್ತೆ ನೋಡಿ!!

ಸುದ್ದಿ

ಕನ್ನಡ ಸಿನಿಮಾ ರಂಗ ಇದೀಗ ಹೆಮ್ಮೆ ಪಡುವಂತಹ ಒಂದು ಸಿಹಿ‌‌ಸುದ್ದಿ ಬಂದಿದೆ. ಹೌದು, ನಟಿ ಮೇಘನಾ ರಾಜ್ ಅವರು ಕನ್ನಡ ಸಿನಿಮಾ ರಂಗದ ಗರಿಮೆ ಹೆಚ್ಚಿಸಿದ್ದಾರೆ. ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆಯನ್ನು ನಟಿ ಮೇಘನಾ ರಾಜ್ ಮಾಡಿದ್ದಾರೆ. ಹೌದು, ಮೇಘನಾ ರಾಜ್ ಅವರು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡವರು. ಇವರ ಸಿನಿಮಾ ಜರ್ನಿ ಆರಂಭ ಆಗಿದ್ದು ತೆಲುಗು ಸಿನಿಮಾ ರಂಗದಿಂದ.

ಕನ್ನಡದಲ್ಲಿ ಯಶ್ ಜೊತೆ ರಾಜಾ ಹುಲಿ ಸಿನಿಮಾದಲ್ಲಿ ಮಿಂಚಿದವರು. ಇದೀಗ ನಟಿ ಮೇಘನಾ ರಾಜ್ ಅವರಿಗೆ ಪ್ರತಿಷ್ಠಿತ ಅವಾರ್ಡ್ ಒಂದಕ್ಕೆ ಭಾಜನರಾಗಿದ್ದಾರೆ. ಹೌದು, ಅವರು FOG HERO ಅವಾರ್ಡ್ ಗೆ ಆಯ್ಕೆ ಆಗಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ “ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ” ಆಯೋಜಿಸುವ “ಫೆಸ್ಟಿವಲ್ ಆಫ್ ಗ್ಲೋಬ್” ಅಂದರೆ FOG ಈ ಸಮಾರಂಭ ಕಳೆದ ನಲವತ್ತು ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ.

ಆದರೆ ಕಳೆದ ಎರಡು ವರ್ಷಗಳಿಂದ ಕರೋ-ನಾ ಸಾಂಕ್ರಾಮಿಕ ರೋ-ಗ ಇದ್ದ ಕಾರಣ ಈ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಈ ಬಾರಿ ಮತ್ತೆ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ.‌ಇದೊಂದು ರೀತಿಯ ಹಬ್ಬ ಅಂದರೂ ತಪ್ಪಾಗಲ್ಲ. ಇದೇ ಆಗಸ್ಟ್‌ 19, 20 ಹಾಗೂ 21 ರಂದು ಈ ಸಮಾರಂಭ ನಡೆಯಲಿದೆ. ಪ್ರತಿವರ್ಷ ಕೂಡ ಭಾರತದ ಸ್ವಾತಂತ್ರ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಹೀಗಾಗಿಯೇ ಆಗಸ್ಟ್ 15ರ ನಂತರ ಅಥವಾ ಮೊದಲಿನ ದಿನಗಳಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇನ್ನು, ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ಅಲ್ಲಿ ನೆಲೆಸಿರುವ ಭಾರತೀಯರು,ಅದೇ ರೀತಿ ಸ್ಥಳೀಯರು ಸೇರಿದಂತೆ ಲಕ್ಷಕ್ಕೂ ಮಂದಿ ಸೇರುತ್ತಾರೆ. ಈ ಬಾರಿ ಕೂಡ ಅದೇ ರೀತಿ ಕನ ಸೇರುವ ಸಾಧ್ಯತೆ ಇದೆ. ಇನ್ನು ಈ ಕಾರ್ಯಕ್ರಮಕ್ಕೆ ಅಲ್ಲಿನ ರಾಜಕೀಯ ಪ್ರಮುಖರು, ಗಣ್ಯರು ಕೂಡ ಆಗಮಿಸುತ್ತಾರೆ.

ವಿಶೇಷ ಅಂದರೆ ಪ್ರತಿವರ್ಷ ಈ ಹಬ್ಬದಲ್ಲಿ ಭಾರತದಲ್ಲಿ ಸಾಧನೆ ಮಾಡಿರುವ ಗಣ್ಯರೊಬ್ಬರನ್ನು ಆಯ್ಕೆ ಮಾಡಿ ಅವರಿಗೆ “FOG HERO” ಅವಾರ್ಡ್” ನೀಡಲಾಗುತ್ತದೆ. ಹೆಚ್ಚಾಗಿ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಹಿಂದೆ ಆಶಾ ಪರೇಕ್, ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ, ಧರ್ಮೇಂದ್ರ ಮುಂತಾದ ಸಿನಿಮಾ ರಂಗದ ಗಣ್ಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆದರೆ ಈ ಬಾರಿ ದಕ್ಷಿಣ ಭಾರತದ ಖ್ಯಾತ ನಟಿ ಮೇಘನರಾಜ್ ಅವರು ಈ “F0G HERO” ಅವಾರ್ಡ್​ಗೆ ಭಾಜನರಾಗಿದ್ದಾರೆ ಎಂದು ಸಂಸ್ಥೆಯ ಕ್ರಿಸ್ ಮೂರ್ತಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಖುಷಿ ವ್ಯಕ್ತಪಡಿಸಿದ ನಟಿ ಮೇಘನಾ ರಾಜ್, ಈ ಪ್ರತಿಷ್ಠಿತ ಪ್ರಶಸ್ತಿಗೆ ನಾನು ಭಾಜನಳಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅಂತಹ ಮಹಾನ್ ನಟರಿಗೆ ಸಂದಿರುವ ಪ್ರಶಸ್ತಿಗೆ ಈ ಬಾರಿ ನಾನು ಆಯ್ಕೆಯಾಗಿರುವುದು ನನ್ನ ಪುಣ್ಯ ಎಂದಿದ್ದಾರೆ.

PhotoGrid Site 1659355820444

ಈ ವಿಷಯ ನನಗೆ ನನ್ನ ತಂದೆಯ ಮೂಲಕ ತಿಳಿಯಿತು. ಆಗಸ್ಟ್ 21ರಂದು ನಡೆಯುವ ಅದ್ದೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಕನ್ನಡ ಚಿತ್ರರಂಗ ಈಗ ಇಡೀ ವಿಶ್ವದಾದ್ಯಂತ ಒಬ್ಬ ಕನ್ನಡಿಗಳಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಖುಷಿಯಿದೆ ಎಂದಿದ್ದಾರೆ. ಒಟ್ಟಿನಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿ ಇದೀಗ ಮತ್ತೆ ಹೊಸ ಉತ್ಸಾಹದೊಂದಿಗೆ ಬಣ್ಣ ಹಚ್ಚಿರುವ ಮೇಘನಾ ರಾಜ್ ಇಂತಹ ಪ್ರಶಸ್ತಿ ಸ್ವೀಕರಿಸುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ಹ್ಯಾಟ್ಸಾಫ್ ಮೇಘನಾ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *