ಈ ದೇಹ ಅನ್ನುವುದು ಒಂದು ರೀತಿಯ ಮೆಷಿನ್ ಇದ್ದ ಹಾಗೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಕೆಲವೊಂದು ಪಾರ್ಟ್ ಗಳು ಕೆಲಸ ಮಾಡುವುದಿಲ್ಲ. ನಮಗೆ ಆರೋಗ್ಯದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಹೆಚ್ಚಿನ ಜನರು ಈ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ನೈಸರ್ಗಿಕವಾಗಿ ನಾವು ಆಹಾರ ಸೇವಿಸಿದ ನಂತರದಲ್ಲಿ 24 ಗಂಟೆಯ ಒಳಗಡೆ ಜೀರ್ಣವಾಗಿ ಮಲದ ಮೂಲಕ ಹೋಗಬೇಕು.
ಎರಡು ದಿನದಿಂದ ಹೆಚ್ಚು ದಿನಗಳವರೆಗೆ ಮಲ ವಿಸರ್ಜನೆ ಆಗಿಲ್ಲ ಅಂದರೆ ಅದುವೇ ಮಲಬದ್ಧತೆ ಸಮಸ್ಯೆ. ಹೌದು, ಸರಿಯಾಗಿ ಮೋಷನ್ ಹೋಗದೆ ಇರುವುದು, ಅಥವಾ ಗಟ್ಟಿಯಾಗಿ ಹೋದರೆ ಅದು ಮಲಬದ್ಧತೆ ಸಮಸ್ಯೆ ಎಂದೇ ಅರ್ಥ. ಇನ್ನು,ದೀರ್ಘಕಾಲದ ತನಕ ಮಲಬದ್ಧತೆ ಸಮಸ್ಯೆಯಿದ್ದರೆ ಆಗ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಹೊಟ್ಟೆನೋವು, ಹಸಿವು ವ್ಯತ್ಯಯ, ಪೈಲ್ಸ್ ಇತ್ಯಾದಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ಅದರ ಜೊತೆ ಬೆನ್ನುನೋವು ಕೂಡ ಉಂಟಾಗುತ್ತದೆ. ಇನ್ನು ಈಮಲಬದ್ಧತೆ ಕಾಣಿಸಿಕೊಳ್ಳಲು ಹಲವಾರು ರೀತಿಯ ಕಾರಣಗಳು ಇರಬಹುದು. ಆದರೆ ಪ್ರಮುಖ ಕಾರಣವೆಂದರೆ ಆಹಾರಕ್ರಮ ಮತ್ತು ವ್ಯಾಯಾಮದ ಹವ್ಯಾಸ. ಅನಾರೋಗ್ಯಕರ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ನಾವು ಸೇವಿಸಿದ ಆಹಾರ ಸಣ್ಣ ಮತ್ತು ದೊಡ್ಡ ಕರುಳಿನಲ್ಲಿ ಜೀರ್ಣವಾಗಿ ಹೊರಬರಬೇಕು.
ಕೆಲವರಲ್ಲಿ ಈ ಪ್ರಕ್ರಿಯೆ ಸರಿಯಾಗಿ ಆಗದೆ ದೊಡ್ಡ ಕರುಳಿನಲ್ಲಿ ಚಲನೆಯಲ್ಲಿ ತೊಡಕು ಉಂಟಾಗಿ ಮಲಬದ್ಧತೆ ಸಮಸ್ಯೆ ಕಂಡು ಬರುತ್ತದೆ. ಮಲಬದ್ಧತೆ ಸಮಸ್ಯೆ ಎನ್ನುವುದು ನಮ್ಮ ಆಹಾರದಿಂದಲೇ ಬರುತ್ತದೆ ಮತ್ತು ಅದನ್ನು ಹೋಗಲಾಡಿಸುವ ತಂತ್ರಗಾರಿಕೆ ಕೂಡ ನಮ್ಮ ಆಹಾರ ಪದ್ಧತಿಯಲ್ಲೇ ಅಡಗಿದೆ.ಇವತ್ತು ನಾವು ನಿಮಗೆ ಈ ಮಲಬದ್ಧತೆ ಸಮಸ್ಯೆ ಹೋಗಲಾಡಿಸುವ ಸುಲಭ ಮದ್ದುಗಳನ್ನು ಹೇಳುತ್ತೇವೆ.
ಒಣದ್ರಾಕ್ಷಿ ಇಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸಬಹುದು. ಅದಕ್ಕಾಗಿ ನೀವು ಒಂದು ಹತ್ತ ರಿಂದ ಹದಿನೈದು ಒಣದ್ರಾಕ್ಷಿ ಯನ್ನು ಚೆನ್ನಾಗಿ ತೊಳೆಯಬೇಕು.ಯಾಕಂದರೆ ದ್ರಾಕ್ಷಿ ಬೆಳೆಸುವಾಗ ಅದಕ್ಕೆ ಹೆಚ್ಚಿಮ ಕ್ರಿಮಿನಾಶಕ ಔಷಧಿಗಳನ್ನು ಹಾಕುತ್ತಾರೆ . ಹಾಗಾಗಿ ಚೆನ್ನಾಗಿ ತೊಳೆದು ರಾತ್ರಿ ನೀರಿನಲ್ಲಿ ನೆನೆ ಹಾಕಬೇಕು. ಇದನ್ನು ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅದರ ನೀರಿನ ಜೊತೆ ತಿನ್ನಬೇಕು.
ಇದು ನಿಮ್ಮ ಹೊಟ್ಟೆಯನ್ನು ಕ್ಲೀನ್ ಮಾಡುತ್ತದೆ. ಇದು ಎಜರ್ಜಿ ಫುಡ್ ಕೂಡ ಹೌದು. ಇನ್ನು ತುಪ್ಪವನ್ನು ಸೇವಿಸುವ ಮೂಲಕವೂ ಮಲಬದ್ಧತೆ ಸಮಸ್ಯೆಯಿಂದ ಹೊರ ಬರಬಹುದು. ದಿನನಿತ್ಯ ಒಂದು ಅಥವಾ ಎರಡು ಟೇಬಲ್ ಸ್ಪೂನ್ ತಿನ್ನಬೇಕು. ಇದನ್ನು ನೀವು ಮಾಡುವ ಅಡುಗೆಯಲ್ಲಿ, ಆಥವಾ ಊಟದ ಜೊತೆ ತಿನ್ನಬಹುದು. ಅಥವಾ ರಾತ್ರಿ ಊಟ ಆದ ನಂತರ ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ಟೀ ಸ್ಪೂನ್ ತುಪ್ಪ ಹಾಕಿ ಕುಡಿದು ಮಲಗಿದರೆ ಮಾರನೇ ದಿನ ಸುಲಭವಾಗಿ ಮಲವಿಸರ್ಜನೆ ಆಗುತ್ತದೆ.
ಇನ್ನು ಹರಳೆಣ್ಣೆ ಅಥವಾ ಕಾಸ್ಟ್ರಾಲ್ ಆಯಿಲ್ ಸೇವನೆ ಈ ಮಲಬದ್ಧತೆ ಸಮಸ್ಯೆ ಸೀವಿಯರ್ ಆಗಿರುವವರಿಗೆ ಸಹಾಯ ಮಾಡುತ್ತದೆ. ರಾತ್ರಿ ಊಟವಾದ ಒಂದು ಗಂಟೆ ಬಳಿಕೆ ಒಂದು ಗ್ಲಾಸ್ ಬಿಸಿ ನೀರಿಗೆ ಒಂದು ಸ್ಪೂನ್ ಹರಳೆಣ್ಣೆ ಹಾಕಿ ಕುಡಿದರೆ ಮಾರನೆ ದಿನ ಮಲ ಸುಲಭವಾಗಿ ಹೋಗುತ್ತದೆ. ದೇಹದಲ್ಲಿ ನೀರಿನಂಶ ಹಾಗೂ ಜಿಡ್ಡಿನಂಶ ಕಡಿಮೆ ಆದಾಗ ಮಲಬದ್ಧತೆ ಉಂಟಾಗುತ್ತದೆ.
ಇದರ ಜೊತೆ ನೀವು ಮುಖ್ಯವಾಗಿ ಪ್ರತಿನಿತ್ಯ ಮೂರು ಲೀಟರ್ ನೀರು ಕುಡಿಯಬೇಕು, ಹಾಗೂ ದಿನದಲ್ಲಿ ಯಾವುದಾದರು ಒಂದು ವ್ಯಾಯಾಮ ಮಾಡಬೇಕು. ಜಂಕ್ ಫುಡ್ ಸೇವನೆ ಮಾಡಬಾರದು. ಈ ರೀತಿ ಮಾಡಿದಲ್ಲಿ ಮಲಬದ್ಧತೆ ಸಮಸ್ಯೆಯಿಂದ ಗುಣಮುಖರಾಗಬಹುದು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.