ಸಿನಿಮಾದಲ್ಲಿ ಮಿಂಚಬೇಕು, ಹೆಸರು ಮಾಡಬೇಕು ಅಂತ ಕನಸು ಕಟ್ಟಿಕೊಂಡು ಬರುವವರು ಸಾಕಷ್ಟು ಜನ ಅದರಲ್ಲಿ ಕೆಲವರು ಸಕ್ಸಸ್ ಕಾಣುತ್ತಾರೆ ಇನ್ನು ಕೆಲವರು ಸೋಲುತ್ತಾರೆ. ಹೀಗೆ ತಾನು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಸ್ಟಾರ್ ನಟ ಎನಿಸಿಕೊಳ್ಳಬೇಕು ಅಂತ ಕನಸು ಹೊತ್ತು, ಮಂಡ್ಯದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ಯುವ ನಟ ಸತೀಶ್ ವಜ್ರ. ತನ್ನ ಕನಸನ್ನು ನೆರವೇರಿಸಿಕೊಳ್ಳುವ ಮೊದಲೇ ಇ’ಹಲೋಕ ತ್ಯಜಿಸಿದ್ದಾರೆ.
ಹೌದು, ಸತೀಶ್ ವಜ್ರ ಅವರ ಹತ್ಯೆಯ ಪ್ರಕರಣ ನಿಮಗೆಲ್ಲರಿಗೂ ಗೊತ್ತಿರಬಹುದು. ತಾನು ಅತ್ಯುತ್ತಮ ನಟ ಎನಿಸಿಕೊಳ್ಳಬೇಕು ಎನ್ನುವ ಹುಚ್ಚು ಅತಿಯಾಗಿತ್ತು ಸತೀಶ್ ವಜ್ರ ಅವರಿಗೆ. ಹಾಗಾಗಿ ತನ್ನ ಊರಾದ ಮಂಡ್ಯದಿಂದ ಬೆಂಗಳೂರಿಗೆ ಬಂದು ನೆಲೆಸಿ ತನ್ನದೇ ಆದ ಸಣ್ಣ ಬಾರ್ಬರ್ ಶಾಪ್ ಇಟ್ಟುಕೊಂಡಿದ್ದರು. ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಸಮಯ ಸಿಕ್ಕಾಗಲೆಲ್ಲಾ ಟಿಕ್ ಟಾಕ್ ವಿಡಿಯೋಗಳನ್ನು ಕೂಡ ಮಾಡಿಕೊಂಡು ಸತೀಶ್ ವಜ್ರ ಫೇಮಸ್ ಆಗಿದ್ರು.
ಉತ್ತಮ ನಟನೆಯ ಪ್ರತಿಭೆ ಇದ್ದ ಸತೀಶ್ ವಜ್ರ ಲಗೋರಿ ಎನ್ನುವ ಶಾರ್ಟ್ ಫಿಲಂ ಒಂದರಲ್ಲಿ ಅಭಿನಯಿಸಿದ್ರು. ಮಾಡಿದ್ದು ಕೇವಲ ಒಂದೇ ಒಂದು ಶಾರ್ಟ್ ಫಿಲಂ ಆದರೂ ಈತ ಅತ್ಯುತ್ತಮ ನಟ ಎನಿಸಿಕೊಳ್ಳುವ ಎಲ್ಲಾ ಸಾಧ್ಯತೆಯೂ ಇತ್ತು ಯಾಕಂದ್ರೆ ಇದೊಂದು ಸಿನಿಮಾದ ಮೂಲಕ ಜನ ಅವರನ್ನು ಗುರುತಿಸಿದ್ರು. ಇನ್ನೇನು ಬೆಳ್ಳಿತೆರೆಯಲ್ಲಿ ಮಿಂಚಬೇಕು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂದುಕೊಂಡಿದ್ದ ಸತೀಶ್ ವಜ್ರ ಅವರ ಕನಸು ಮಾತ್ರ ಹಾಗೆ ಉಳಿಯಿತು. ತಮ್ಮ ಮನೆಯಲ್ಲಿಯೇ ಸತೀಶ್ ವಜ್ರ ಕಳೆದ ಕೆಲವು ತಿಂಗಳ ಹಿಂದೆ ಬ’ರ್ಬರವಾಗಿ ಹ’ತ್ಯೆಗೀಡಾಗಿದ್ದಾರೆ.
ಸತೀಶ್ ವಜ್ರ ಹಾಗೂ ಅವರ ಪತ್ನಿ ಪ್ರೀತಿಸಿ ಮದುವೆಯಾಗಿದ್ದು. ಇಬ್ಬರು ಚೆನ್ನಾಗಿಯೇ ಸಂಸಾರ ನಡೆಸಿಕೊಂಡು ಇದ್ದರು ಇವರಿಗೆ ಒಬ್ಬ ಮುದ್ದಾದ ಮಗನೂ ಇದ್ದಾನೆ. ಆದರೆ ಅನಾರೋಗ್ಯದ ಕಾರಣದಿಂದ ಸತೀಶ್ ವಜ್ರ ಅವರ ಪತ್ನಿ ಆ-ತ್ಮಹ-ತ್ಯೆ ಮಾಡಿಕೊಂಡರು. ಇನ್ನು ತನ್ನ ಅಕ್ಕನ ಸಾವಿಗೆ ಸತೀಶ್ ವಜ್ರ ಕಾರಣ ಅಂತ ಭಾವಿಸಿದ ಆಕೆಯ ಸಹೋದರ ಸುದರ್ಶನ್ ಸ್ನೇಹಿತ ನಾಗೇಂದ್ರ ಜೊತೆ ಸತೀಶ್ ವಜ್ರ ಅವರನ್ನು ಮಾಡಿದ್ದಾರೆ ಅಂತ ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಇನ್ನು ಸತೀಶ್ ವಜ್ರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟ ಎನಿಸಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಅಪ್ಪಟ ಅಭಿಮಾನಿ. ಸತೀಶ್ ವಜ್ರ ಅವರ ಮಗನ ನಾಮಕರಣದ ಸಂದರ್ಭದಲ್ಲಿ ಪ್ರಜ್ವಲ್ ದೇವರಾಜ್ ಅವರ ಮನೆಗೆ ಬಂದು ಆ ಮಗುವಿಗೆ ಹೆಸರನ್ನು ಇಟ್ಟಿದ್ದರು. ಇದು ಸತೀಶ್ ವಜ್ರ ಅವರಿಗೆ ಬಹಳ ಸಂತೋಷದ ವಿಷಯವಾಗಿತ್ತು.
ಪ್ರಜ್ವಲ್ ದೇವರಾಜ್ ಅವರ ಜೊತೆಗಿನ ಫೋಟೋಗಳನ್ನು ಮನೆಯಲ್ಲಿ ಇಟ್ಟು ಸಂಭ್ರಮಿಸಿದ್ರು ಸತೀಶ್ ವಜ್ರ. ಸಂದರ್ಶನ ಒಂದರಲ್ಲಿ ಪ್ರಜ್ವಲ್ ದೇವರಾಜ್ ಅವರು ಕೂಡ ತನ್ನ ಅಭಿಮಾನಿ ಮಗನಿಗೆ ತಾನೇ ನಾಮಕರಣ ಮಾಡಿದ ವಿಷಯವನ್ನು ಕೂಡ ಹಂಚಿಕೊಂಡಿದ್ದರು. ಆದರೆ ದುರದೃಷ್ಟವಶಾತ್ ಇಂದು ಸತೀಶ್ ವಜ್ರ ನಮ್ಮೊಂದಿಗಿಲ್ಲ. ಆದರೆ ತನ್ನ ಅಭಿಮಾನಿಯನ್ನು ಮರೆತಿಲ್ಲ ಪ್ರಜ್ವಲ್ ದೇವರಾಜ್.
ಹೌದು, ಪ್ರಜ್ವಲ್ ದೇವರಾಜ್ ಅವರು ಇತ್ತೀಚಿಗೆ ಹ’ತ್ಯೆ ಒಳಗಾದ ಸತೀಶ್ ವಜ್ರ ಅವರ ಮನೆಗೆ ಭೇಟಿ ನೀಡಿ ಸತೀಶ್ ಅವರ ತಾಯಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಒಂದಿಷ್ಟು ಹಣ ಸಹಾಯ ಕೂಡ ಮಾಡಿದ್ದಾರೆ. ನಿಜಕ್ಕೂ ತನ್ನ ಒಬ್ಬ ಅಭಿಮಾನಿಯ ಸಂಕಷ್ಟಕ್ಕೆ ನೆರವಾಗುವ ಪ್ರಜ್ವಲ್ ದೇವರಾಜ್ ಅವರಂಥ ನಟರು ನಿಜ ಜೀವನದಲ್ಲಿಯೂ ಹಿರೋ.