ಕೇಲವು ನಟಿಯರು ಒಂದೇ ಚಿತ್ರದ ಮೂಲಕ ತಮ್ಮ ಖ್ಯಾತಿಯನ್ನು ಗಳಿಸಿಕೊಂಡರೆ ಇನ್ನು ಕೆಲವು ನಟಿಯರು ಅದೆಷ್ಟೇ ಸಿನಿಮಾ ಮಾಡಿದರೂ ಗುರುತಿಸಿಕೊಳ್ಳಲು ಪರದಾಡುತ್ತಾರೆ. ಈ ವಿಷಯ ನೋಡಿದ್ರೆ ನಟಿ ನಭಾ ನಟೇಶ್ ಲಕ್ಕಿ ಅಂತಾನೆ ಹೇಳಬಹುದು. ಅಭಿನಯಿಸಿದ ಮೊದಲ ಸಿನಿಮಾದಲ್ಲಿ ಸೂಪರ್ ಡೂಪರ್ ಹಿಟ್ ಆಗಿ ಅತಿ ಹೆಚ್ಚು ಫ್ಯಾನ್ಸ್ ಗಳಿಸಿಕೊಂಡ ನಟಿ ನಭಾ ನಟೇಶ್.
ಕನ್ನಡತಿಯಾಗಿರುವ ನಭಾ ನಟೇಶ್ ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹ್ಯಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಮೂವಿ ವಜ್ರಕಾಯ. ಈ ಸಿನಿಮಾದಲ್ಲಿ ಬಜಾರಿ ಪಾತ್ರದಲ್ಲಿ ನಭ ನಟಿ ಅತ್ಯದ್ಭುತವಾಗಿ ಅಭಿನಯಿಸಿದ್ರು. ಇವರ ನಟನೆಗೆ ಫಿದಾ ಆದ ಫ್ಯಾನ್ಸ್ ನಬಾವರ ಇನ್ನಷ್ಟು ಸಿನಿಮಾಗಳು ಬರುವುದಕ್ಕಾಗಿ ಕಾಯುತ್ತಿದ್ದರು.
ಕನ್ನಡದಲ್ಲಿ ಫೇಮಸ್ ಆದ ನಭ ನಟೇಶ್ ಅವರಿಗೆ ವಜ್ರಕಾಯ ಸಿನಿಮಾದ ನಂತರ ತೆಲುಗುವಿನಲ್ಲಿ ಹೆಚ್ಚು ಆಫರ್ ಗಳು ಬಂದವು. ನನ್ನು ದೂಚುಕುಂದುವಟೆ ಎನ್ನುವ ತೆಲುಗು ಸಿನಿಮಾದಲ್ಲಿ ನಭಾ ನಟೇಶ್ ಮೊದಲ ಬಾರಿಗೆ ಅಭಿನಯಿಸುತ್ತಾರೆ. ಆದರೆ ನಟಿ ನಭ ನಟೇಶ್ ಮಾತ್ರ ತೆಲುಗು ಸಿನಿಮಾ ಫ್ಯಾನ್ಸ್ ಮನಸ್ಸಿನಲ್ಲಿ ಜಾಗ ಪಡೆಯುತ್ತಾರೆ.
ನಂತರ ಪೂರಿ ಜಗನ್ನಾಥ ನಿರ್ದೇಶನದಲ್ಲಿ ಮೂಡಿ ಬಂದ ಇಸ್ಮಾರ್ಟ್ ಶಂಕರ್ ಎನ್ನುವ ಚಿತ್ರದ ಮೂಲಕ ನಭ ನಟೇಶ್ ಮತ್ತೆ ತಮ್ಮ ಚಾರ್ಮ್ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ಸಕ್ಕತ್ ಗ್ಲಾಮರ್ ಆಗಿ ಕಾಣಿಸಿಕೊಂಡ ನಭಾ ನಟೇಶ್ ತೆಲುಗು ಸಿನಿಪ್ರಿಯರ ಫೇವರೆಟ್ ನಟಿ ಎನಿಸಿಕೊಂಡರು. ಅದರಲ್ಲೂ ತೆಲಂಗಾಣ ಯುವತಿಯಂತೆ ತಾವೇ ಸ್ವತಃ ಸಿನಿಮಾಕ್ಕೆ ಡಬ್ ಮಾಡಿದ್ದು ಈ ಸ್ಮಾರ್ಟ್ ಶಂಕರ್ ಚಿತ್ರದಲ್ಲಿ ನಭ ಅವರ ಗೆಲುವಿಗೆ ಮತ್ತೊಂದು ಕಾರಣವಾಯಿತು.
ಈ ಚಿತ್ರದ ಬಳಿಕ ನಟಿ ನಭ ನಟಿಸಿದ್ದು ಅಲ್ಲುಡು ಅದುರ್ಸ್ ಚಿತ್ರದಲ್ಲಿ ಸೋತರೂ, ಸೋಲೋ ಬ್ರತುಕೆ ಸೋ ಬೆಟರ್ ಸಿನಿಮಾ ಗೆಲ್ಲುವುದರ ಮೂಲಕ ನಭ ನಟೇಶ್ ಅವರಿಗೆ ಇನ್ನಷ್ಟು ಆಫರ್ ಗಳು ಹುಡುಕಿಕೊಂಡು ಬಂದವು. ನಟಿ ನಭಾ ನಟೇಶ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ. ಅವರಿಗೆ ಸುಮಾರು ನಾಲ್ಕು ಮಿಲಿಯನ್ ನಷ್ಟು ಫ್ಯಾನ್ ಫಾಲೋವರ್ಸ್ ಇದ್ದಾರೆ.
ತಮ್ಮ ಅಂದ ಚಂದದ ಫೋಟೋ ಶೂಟ್ ಗಳ ಮೂಲಕ ಜನರ ಗಮನ ಸೆಳೆಯುವ ನಟಿ ನಭಾ ನಟೇಶ್ ಅವರ ದೀಪಾವಳಿ ಹಬ್ಬದ ಪ್ರಯುಕ್ತ ಮಾಡಿಸಿದ ಫೋಟೋಶೂಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಸಿರು ಬಣ್ಣದ ಗಾಗ್ರ ಧರಿಸಿ ನಭಾ ನಟೇಶ್ ಫೋಟೋ ಶೂಟ್ ಮಾಡಿಸಿದ್ದಾರೆ. ಟ್ರೆಡಿಶನಲ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ನಭಾ ನಟೇಶ್. ನಭಾ ಅವರ ಇನ್ನಷ್ಟು ಫೋಟೋಗಳನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೀವು ನೋಡಬಹುದು. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ.