ಸ್ಟಾರ್ ನಟಿಯರು ಅಂದ್ರೆ ನಾವು ಅವರ ಲೈಫ್ ಕೂಡ ಅಷ್ಟೇ ಸೂಪರ್ ಆಗಿರುತ್ತೆ, ಅವರಿಗೆ ಯಾವುದೇ ಸಮಸ್ಯೆಯೂ ಇರುವುದಿಲ್ಲ, ಸಕ್ಕತ್ ಎಂಜಾಯ್ ಮಾಡ್ತಾರೆ ಅಂತೆಲ್ಲ ಊಹಿಸಿಕೊಳ್ಳುತ್ತೇವೆ. ಅವರ ಫೋಟೋಗಳನ್ನು ನೋಡಿ ಅಬ್ಭ! ಎಷ್ಟು ಆರಾಮಾಗಿ ಇರುತ್ತಾರೆ ಅಲ್ವಾ ಅಂತೆಲ್ಲ ಫೀಲ್ ಮಾಡುತ್ತೇವೆ. ಆದರೆ ನಿಜವಾಗಿ ಅವರು ಜೀವನದಲ್ಲಿ ನಡೆಯುತ್ತಿರುವ ವಿಷಯವೇ ಬೇರೆ. ಅವರ ವೃತ್ತಿ ಜೀವನಕ್ಕೂ ವೈಯಕ್ತಿಕ ಜೀವನಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತೆ. ಒಬ್ಬ ನಟಿ ತಾನು ಸ್ಟಾರ್ ನಟಿ ಎನಿಸಿಕೊಳ್ಳುವುದಕ್ಕೆ ಸಾಕಷ್ಟು ಶ್ರಮವಹಿಸುತ್ತಾಳೆ. ಅಷ್ಟೇ ಅಲ್ಲ ಸಾಕಷ್ಟು ಅವಮಾನಗಳನ್ನು ಕೂಡ ಎದುರಿಸಬೇಕಾಗುತ್ತದೆ.
ಕಾ’ಸ್ಟಿಂಗ್ ಕೌ’ಚ್ ಎನ್ನುವ ವಿಚಾರದ ಬಗ್ಗೆ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ತಾವು ಸಿನಿಮಾ ರಂಗಕ್ಕೆ ಕಾಲಿಡುವಾಗ ಎಷ್ಟೇಲ್ಲಾ ಕಷ್ಟಪಟ್ಟಿದ್ದೇವೆ ಅನ್ನೋದನ್ನ ಓಪನ್ ಆಗಿ ಹೇಳಿಕೊಂಡಿದ್ದಾರೆ. ಅಂತವರಲ್ಲಿ ನಟಿ ಅಮಲಾ ಪೌಲ್ ಕೂಡ ಒಬ್ಬರು. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತಿಗಳಿಸಿರುವ ಅಮಲಾ ಪೌಲ್ ಕನ್ನಡದಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಅವರು ತಮ್ಮ ಜೀವನದಲ್ಲಿ ನಡೆದ ಸಾಕಷ್ಟು ಕಹಿ ಘಟನೆಗಳನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಮಲಾ ಪೌಲ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 12 ವರ್ಷಗಳ ಕಳೆದಿವೆ. ಈಗಲೂ ಅಮಲಾ ಪೌಲ್ ಬಹು ಬೇಡಿಕೆಯ ನಟಿ ಎನಿಸಿಕೊಂಡಿರುವ ಅಭಿನೇತ್ರಿ. ನಟಿ ಅಮಲಾ ಪೌಲ್ ಅವರ ವೈಯಕ್ತಿಕ ಜೀವನ ಅಷ್ಟು ಸುಂದರವಾಗಿಲ್ಲ. ಪ್ರೀತಿಸಿ ಮದುವೆಯಾದ ನಿರ್ದೇಶಕನಿಂದ ಬಹಳ ಬೇಗ ವಿ-ಚ್ಛೇ-ದನ ಪಡೆದು ದೂರಾದರು. ಈ ಸಮಯದಲ್ಲಿ ಸಿನಿಮಾದಿಂದ ದೂರ ಇದ್ದ ಅಮಲಾ ಬಳಿಕ ಸಿನಿಮಾರಂಗಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.
ಈ ಸಮಯದಲ್ಲಿ ಹಲವಾರು ವಿಷಯಗಳನ್ನ ಹಂಚಿಕೊಂಡಿದ್ದಾರೆ ಅಮಲಾ ಪೌಲ್. ನಟಿ ಅಮಲಾ ಪೌಲ್ ವೃತ್ತಿ ಜೀವನಕ್ಕೆ ಕಾಲಿಡುವಾಗ ಸಾಕಷ್ಟು ಏರಿಳಿತಗಳನ್ನು ಅನುಭವಿಸಿದ್ದಾರೆ ತನಗಿಂತ ಹಿರಿಯ ನಾಯಕರ ಜೊತೆ ಹೆಚ್ಚಾಗಿ ನಟಿಸಿದ್ದಾರೆ ಆ ಸಮಯದಲ್ಲಿ ಅವರಿಗೆ ತುಂಬಾ ಒತ್ತಡ ಉಂಟಾಗಿತ್ತಂತೆ. ಅಲ್ಲದೆ ಸಿನಿಮಾ ನಟಿಯಾಗಿ ಅವರುಗಳಿಂದ ಸಾಕಷ್ಟು ಕಲಿತಿದ್ದೇನೆ ಎಂದು ಕೂಡ ಹೇಳಿದ್ದಾರೆ.
‘ನನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನ ಎದುರಿಸಿದ್ದೇನೆ ಯಶಸ್ಸಿಗಾಗಿ ಶ್ರಮಿಸುತ್ತಿದ್ದೆ ನನಗೆ ಅದು ಬೇಡವಾಗಿತ್ತೇನೋ ಎಂದು ನನಗೆ ಅನಿಸಿದೆ. ಅಲ್ಲದೆ ನನ್ನ ಬದುಕಿನ ಬಗೆಯು ಹಲವು ಸಾರಿ ಬೇಸರಗೊಂಡಿದ್ದೇನೆ. ಹಾಗಾಗಿ ಸಿನಿಮಾಕ್ಕೆ ಗುಡ್ ಬೈ ಹೇಳಬೇಕು ಎಂದುಕೊಂಡಿದ್ದು ಇದೆ ಇಂತಹ ಸಮಯದಲ್ಲಿಯೇ ನನ್ನ ತಂದೆಯು ತೀ-ರಿಕೊಂಡರು ಅದಾದ ಬಳಿಕ ನನ್ನ ಬಗ್ಗೆ ಅನೇಕ ಮಾತುಗಳು ಕೇಳಿ ಬಂದವು.
ನನ್ನ ವಿರುದ್ಧ ಹಲವು ಘಟನೆಗಳು ನಡೆದವು. ಆ ಸಂದರ್ಭದಲ್ಲಿ ಸಾಕಷ್ಟು ಭಯ ಖಿನ್ನತೆಯನ್ನು ಅನುಭವಿಸಿದ್ದೇನೆ ನಂತರ ಹೇಗೆ ಚೇತರಿಸಿಕೊಂಡು ನನ್ನ ಹೋರಾಟದಲ್ಲಿ ನಾನು ಗೆದ್ದಿದ್ದೇನೆ’ ಅಂತ ಅಮಲಾ ಪೌಲ ತಮ್ಮ ಸಿನಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಖಂಡಿತ ಇದು ಈ ಒಬ್ಬ ನಟಿಯ ಕಥೆಯಲ್ಲ ಸಿನಿಮಾದಲ್ಲಿ ತಾನು ಗುರುತಿಸಿಕೊಳ್ಳಬೇಕು ಎಂದು ಬಯಸಿದ ಹಲವು ನಟಿಯರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ ಆದರೆ ಅವೆಲ್ಲವನ್ನ ಎದುರಿಸಿ ಗೆದ್ದು ಬಂದವರು ಮಾತ್ರ ಸಿನಿಮಾರಂಗದಲ್ಲಿ ಇಂದಿಗೂ ನೆಲೆ ನಿಂತಿದ್ದಾರೆ.