PhotoGrid Site 1671267353731

ಆ ಕಡೆ ಶಾರುಖ್ ಖಾನ್ ದೀಪಿಕಾನ ಎತ್ತಿದ್ರೆ, ಈ ಕಡೆ ಬಿಗ್ಬಾಸ್ ಮನೆಯಲ್ಲಿ ದೀಪಿಕಾನ ಎತ್ತಿದ ಆರ್ಯಾವರ್ಧನ್ ಗುರೂಜಿ! ಗುರೂಜಿ ಹವಾ ಬಲೂಜೋರು ನೋಡಿ!!

ಸುದ್ದಿ

ಬಿಗ್ ಬಾಸ್ ಸೀಸನ್ 9 ಇತ್ತೀಚಿಗೆ ಹೊಸ ಟಾಸ್ಕ್ ಗಳ ಮೂಲಕ ಇನ್ನಷ್ಟು ಕಳೆಕಟ್ಟಿದೆ. ಬಿಗ್ ಬಾಸ್ ಸ್ಪರ್ಧಿಗಳು ಪ್ರತಿಯೊಬ್ಬರೂ ಹೆಚ್ಚು ಟಾಸ್ಕ್ ಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಬಾರಿ ಪಾಯಿಂಟ್ಸ್ ಗಳಿಸುವ ಟಾಸ್ಕ್ ಗಳನ್ನು ನೀಡಲಾಗಿದ್ದು, ಗೆದ್ದ ಪಾಯಿಂಟ್ ಗಳನ್ನು ಉಳಿಸಿಕೊಳ್ಳಲೂ ಕೂಡ ಸ್ಪರ್ಧಿಗಳು ಪರದಾಡುತ್ತಿದ್ದಾರೆ.

ಹೌದು, ಬಿಗ್ ಬಾಸ್ ಮನೆಯಲ್ಲಿ ಇತ್ತಿಚಿಗಿನ ಟಾಸ್ಕ್ ಗಳು ಮನೋರಂಜನೆಯನ್ನೂ ನೀಡುತ್ತವೆ, ಜೊತೆಗೆ ಸ್ಪರ್ಧಿಗಳಿಗೆ ಚಾಲೆಂಜಿಂಗ್ ಆಗಿಯೂ ಕೂಡ ಇದೆ. ಅಲ್ಲದೇ ನಾಮಿನೇಟ್ ಆಗದೇ ಉಳಿದುಕೊಳ್ಳುವುದಕ್ಕೆ ಕ್ಯಾಪ್ಟನ್ ಆಗಲೂ ಕೂಡ ಸ್ಪರ್ಧಿಗಳು ಹವಣಿಸುತ್ತಿದ್ದಾರೆ. ಈ ಬಾರಿ ರೂಪೇಶ್ ಶೆಟ್ಟಿ ತಮ್ಮ ಆಸೆಯಂತೆ ಕ್ಯಾಪ್ಟನ್ ಆಗಿಯೂ ಕೂಡ ಆಯ್ಕೆಗೊಂಡಿದ್ದಾರೆ.

ಇನ್ನು ಟಾಸ್ಕ್ ವಿಚಾರ ನೋಡುವುದಾದರೆ, ಎಲ್ಲಾ ಸ್ಪರ್ಧಿಗಳು ಚೆನ್ನಾಗಿಯೇ ಆಡುತ್ತಿದ್ದಾರೆ. ವಾರಾಂತ್ಯದಲ್ಲಿ ಎಷ್ಟು ಪಾಯಿಂಟ್ಸ್ ಇಟ್ಟುಕೊಳ್ಳುತ್ತಾರೆ ನೋಡಬೇಕು. ಇನ್ನು ನಿನ್ನೆ ಮ್ಯೂಸಿಕ್ ನ್ನು ಗುರುತಿಸಿ ಹಾಡು ಯಾವುದು ಎಂದು ಹೇಳುವ ಟಾಸ್ಕ್ ಇತ್ತು. ಅದರಲ್ಲಿ ಎಲ್ಲಾ ಸ್ಪರ್ಧಿಗಳೂ ಕೂಡ ಖುಷಿಯಿಂದ ಭಾಗವಹಿಸಿದ್ದರು. ಈ ನಡುವೆ ನೀನೆಂದರೆ ನನ್ನೊಳಗೆ ಹಾಡಿಗೆ ದೀಪಿಕಾ ದಾಸ್ ಹಾಗೂ ಆರ್ಯವರ್ಧನ್ ಗುರೂಜಿ ನೃತ್ಯ ಜನರ ಗಮನ ಸೆಳೆದಿತ್ತು.

ಹೌದು, ದೀಪಿಕಾ ದಾಸ್ ಮನೆಯಿಂದ ಎರಡು ವಾರಗಳ ಹಿಂದೆಯೇ ಔಟ್ ಆಗಿದ್ದವರು. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದರು. ದೀಪಿಕಾ ದಾಸ್ ಟಾಸ್ಕ್ ವಿಚಾರಕ್ಕೆ ಬಂದರೆ ಯಾರನ್ನಾದರೂ ಮೀರಿಸುತ್ತಾರೆ. ಆದರೆ, ಮನೆಯ ಎಲ್ಲಾ ಸದಸ್ಯರ ಜೊತೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಈ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಬಳಿಕ ದೀಪಿಕಾಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ.

ಎಲ್ಲರ ಜೊತೆ ಬಹಳ ಲವಲವಿಕೆಯಿಂದ ಬೆರೆಯುತ್ತಾರೆ. ಬೇರೆ ಯಾರೇ ಹಾದು ಹೇಳಿದ್ರೂ ಅವರ ಹಾಡಿಗೆ ನೃತ್ಯ ಮಾಡುತ್ತಾ ಟಾಸ್ಕ್ ಎಂಜಾಯ್ ಮಾಡಿದ್ದಾರೆ. ಕಳೆದ ವಾರ ಎಲಿಮಿನೇಟ್ ಆದ ಪ್ರಶಾಂತ್ ಸಂಬರ್ಗಿ ಜೊತೆ ದೀಪಿಕಾ ದಾಸ್ ಬಹಳ ಚೆನ್ನಾಗಿ ಮಾತನಾಡುತ್ತಿದ್ದರು.. ಇಬ್ಬರ ನಡುವೆ ಬಾಂಡಿಂಗ್ ಚೆನ್ನಾಗಿತ್ತು. ಪ್ರಶಾಂತ್ ಮನೆಯಿಂದ ಔಟ್ ಆದಾಗ ಎಲ್ಲರಿಗಿಂತ ಹೆಚ್ಚು ದುಃಖ ಪಟ್ಟಿದ್ದೇ ದೀಪಿಕಾ ದಾಸ್.

ಹಾಡನ್ನು ಗುರುತಿಸಿ ಹೇಳುವ ಟಾಸ್ಕ್ ನಲಿಯೂ ದೀಪಿಕಾ ಎಲ್ಲರ ಜೊತೆ ತಾವೂ ಕೂಡ ನೃತ್ಯ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಈ ಸಮಯದಲ್ಲಿ ಆರ್ಯವರ್ಧನ್ ಗುರೂಜಿ ದೀಪಿಕಾ ದಾಸ್ ಅವರನ್ನು ಎತ್ತಿಕೊಂಡು ನೃತ್ಯ ಮಾಡಿದ್ದಾರೆ. ದೀಪಿಕಾ ದಾಸ್ ಕೂಡ ಎಲ್ಲರ ಜೊತೆ ತಾವೂ ಕೂಡ ನೃತ್ಯ ಮಾಡುತ್ತಾ ಎಂಜಾಯ್ ಮಾಡಿದ್ದಾರೆ. ಒಟ್ತಿನಲ್ಲಿ ಈ ವಾರದ ಟಾಸ್ಕ್ ನಲ್ಲಿ ಸ್ಪರ್ಧಿಗಳು ಎಂಜಾಯ್ ಮಾಡುತ್ತಲೇ ಮಾಡಿದ್ದಾರೆ. ಜೊತೆಗೆ ಅಪ್ಪಾ ಲವ್ ಯು ಪ್ಪಾ ಹಾಡಿಗೆ ಭಾವುಕರಾಗಿ ಹೆಜ್ಜೆ ಹಾಕಿದ್ದು ಸೋಶಿಯಲ್ ಮಿಡಿಯಾದಲ್ಲಿಯೂ ವೈರಲ್ ಆಗಿದೆ.

Leave a Reply

Your email address will not be published. Required fields are marked *