ನಟಿ ಅನುಷ್ಕಾ ಶೆಟ್ಟಿ ಅಂದ್ರೆ ಮೊದಲು ನೆನಪಿಗೆ ಬರುವುದೇ ಬಾಹುಬಲಿ, ಅರುಂಧತಿ ಸಿನಿಮಾಗಳು. ರಾಣಿಯರ ಪಾತ್ರದಲ್ಲಿ ಮಿಂಚುವ ಅನುಷ್ಕಾ ಶೆಟ್ಟಿ ನಿಭಾಯಿಸುವ ಕೆಲವು ಪಾತ್ರಗಳಂತೂ ಅವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ಆ ಪಾತ್ರ ಅಷ್ಟು ಚೆನ್ನಾಗಿ ಮೂಡಿಬರಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಪಕ್ವ ಅಭಿನಯ ತೋರಿಸುತ್ತಾರೆ. ನೋಡೋದಕ್ಕೆ ಅತ್ಯಂತ ಸ್ಫುರದ್ರೂಪಿ ಆಗಿರುವ ನಟಿ ಅನುಷ್ಕಾ ಶೆಟ್ಟಿ.
ಇಂದು ಟಾಲಿವುಡ್ ನಲ್ಲಿ ಸ್ವೀಟಿ ಅಂತ ಕರೆಸಿಕೊಳ್ಳುವ ಅನುಷ್ಕಾ ಕಳೆದ 17 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಇನ್ನು ಈ ಸ್ವೀಟ್ 40, ಇನ್ನು ಯಾಕೆ ಮದುವೆ ಆಗಿಲ್ಲ ಅನ್ನುವ ವಿಷಯಕ್ಕೆ ಸಂಬಂಧಪಟ್ಟಹಾಗೆ ಸಾಕಷ್ಟು ಟ್ರೋಲ್ ಗಳು ಹರಿದಾಡುತ್ತವೆ. ಅನುಷ್ಕಾ ಶೆಟ್ಟಿ ಟಾಲಿವುಡ್ ನಲ್ಲಿ ಸೂಪರ್ ಚಿತ್ರದ ಮೂಲಕ ಬೆಳ್ಳಿತರೆ ಪ್ರವೇಶ ಮಾಡಿದ್ರು ಟಾಲಿವುಡ್ ನಲ್ಲಿ ಸಂಚಲನ ಮೂಡಿಸಿದ ನಟಿ ಇವರು.
ಸದ್ಯ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅನುಷ್ಕಾ ಶೆಟ್ಟಿ ಅದಕ್ಕೆ ಕೆಲವರು ಅವರು ಹೆಚ್ಚು ದಪ್ಪವಾಗಿದ್ದೆ ಕಾರಣ ಅಂತ ಮಾತನಾಡಿಕೊಳ್ಳುತ್ತಿದ್ದಾರೆ ಹಾಗಾಗಿ ಅನುಷ್ಕಾ ಅವರು ತಮ್ಮ ಬಾಡಿ ವೆಟ್ ಕಡಿಮೆ ಮಾಡಿಕೊಳ್ಳುವುದಕ್ಕೆ ಫಾರಿನ್ ಗೆ ಹೋಗಿದ್ದಾರೆ ಅಂತ ವದಂತಿಗಳು ಹಬ್ಬಿದ್ದವು. ಅನುಷ್ಕಾ ಶೆಟ್ಟಿ ಮೂಲತಃ ಕರ್ನಾಟಕದವರು. ಮಂಗಳೂರಿನಲ್ಲಿ ಜನಿಸಿರುವ ಕರಾವಳಿ ಬೆಡಗಿ ಸೆಟಲ್ ಆಗಿದ್ದು ಮಾತ್ರ ಹೈದ್ರಾಬಾದ್ ನಲ್ಲಿ.
ಅನುಷ್ಕಾ ಶೆಟ್ಟಿ ಅವರಿಗೆ ಇದೀಗ 40 ವರ್ಷ. ಹಾಗಾಗಿ ಅವರು ಯಾಕೆ ಇನ್ನು ಮದುವೆಯಾಗಿಲ್ಲ ಅನ್ನುವ ಕಾರಣಕ್ಕೆ ಚರ್ಚೆ ಹೆಚ್ಚಾಗಿದೆ. ಅವರ ಮದುವೆಯ ಕುರಿತು ಸಾಕಷ್ಟು ಗಾಸಿಪ್ ಗಳು ಕೂಡ ಕೇಳಿ ಬರುತ್ತಿದೆ ಹಾಗೆ ಒಬ್ಬ ಸ್ಟಾರ್ ನಟನ ಜೊತೆ ಅವರ ಹೆಸರನ್ನು ತಳುಕು ಹಾಕಲಾಗಿದೆ. ಹೌದು, ಬಾಹುಬಲಿಯಲ್ಲಿ ಜೊತೆಯಾದ ಅನುಷ್ಕಾ ಹಾಗೂ ಪ್ರಭಾಸ್ ನಿಜ ಜೀವನದಲ್ಲಿಯೂ ಜೋಡಿ ಆದ್ರೆ ಚಂದ ಅನ್ನೋದು ಅಭಿಮಾನಿಗಳ ಅಭಿಮತ.
ಅನುಷ್ಕಾ ಶೆಟ್ಟಿ ಅವರ ಮದುವೆಯ ವಿಚಾರವಾಗಿ ಜ್ಯೋತಿಷ್ಯ ಒಬ್ಬರು ಕುತೂಹಲಕಾರಿ ಭವಿಷ್ಯ ನುಡಿದಿದ್ದರು. ಅನುಷ್ಕಾ ಅವರು ಮದುವೆ ಆಗುತ್ತಾರೆ ಆದರೆ ಆ ವ್ಯಕ್ತಿ ಸಿನಿಮಾ ಇಂಡಸ್ಟ್ರಿಗೆ ಸಂಬಂಧ ಪಟ್ಟ ವ್ಯಕ್ತಿ ಆಗಿರುವುದಿಲ್ಲ ಅಂತ ಭವಿಷ್ಯ ಹೇಳಿದ್ದರು. 2023ರ ಮೊದಲ ಭಾಗದಲ್ಲಿಯೇ ಅನುಷ್ಕಾ ಅವರ ಮದುವೆ ಆಗಲಿದೆ ಅನ್ನೋದು ಭವಿಷ್ಯಕಾರರು ನುಡಿದ ಮಾತು.
ಅಲ್ಲದೆ ಬೆಂಗಳೂರಿನ ಕೈಗಾರಿಕೋದ್ಯಮಿ ಒಬ್ಬರನ್ನು ಅನುಷ್ಕಾ ವರೊಸಲಿದ್ದಾರೆ ಅನ್ನೋದನ್ನ ಕೂಡ ಹೇಳಿದ್ದಾರೆ. ಈ ಮಾತನಾಡಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ ಅನುಷ್ಕಾ ಶೆಟ್ಟಿ ಯಾರನ್ನು ಮದುವೆ ಆಗಬಹುದು ಅನ್ನೋದು ಜನರಲ್ಲಿ ಈಗ ಹೆಚ್ಚಿದ ಪ್ರಶ್ನೆ. ಇನ್ನು ಇತ್ತೀಚಿಗೆ ಅನುಷ್ಕಾ ಶೆಟ್ಟಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ನಿಶ್ಯಬ್ದಂ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದೇ ಕೊನೆ.
ಅದಾದ ಮೇಲೆ ಅನುಷ್ಕಾ ಶೆಟ್ಟಿ ಸಿನಿಮಾದಿಂದ ಸ್ವಲ್ಪ ದೂರ ಉಳಿದಿದ್ದಾರೆ ಆದರೆ ಇತ್ತೀಚಿಗೆ ಯುವಿ ಅವರ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ರು. ನವೀನ್ ಪೋಲಿ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಅನುಷ್ಕಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ವರದಿಯು ಇದೆ. ಆದರೆ ಅನುಷ್ಕಾ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಸ್ಪಷ್ಟತೆ ಇಲ್ಲ. ಏತನ್ ಮಧ್ಯೆ ಅನುಷ್ಕಾ ಅವರ ಮದುವೆ ವಿಚಾರವನ್ನು ಸಿನಿಪ್ರಿಯರು, ಅಭಿಮಾನಿಗಳು ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ.