ಬಾಲಿವುಡ್ ಸಿನಿಮಾ ರಂಗದ ಬಹುತೇಕ ನಟ ನಟಯರು ಕೋಟಿಗೆ ಬಾಳುವವರೇ ಇರುವುದು. ಅವರು ಸದಾ ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ. ದಿನಕ್ಕೆ ಅವರು ಲಕ್ಷ ರೂಪಾಯಿ ಖರ್ಚು ಮಾಡಿದರೂ ಅದರಲ್ಲಿ ಅಚ್ಚರಿ ಇಲ್ಲ.ಯಾಕಂದರೆ ಅವರ ಲೈಫ್ ಸ್ಟೈಲ್ ಹಾಗಿರುತ್ತದೆ. ಇದೇ ರೀತಿ ಹಿರಿಯ ನಟ ಬೋನಿ ಕಪೂರ್ ಹಾಗೂ ದಿವಂಗತ ನಟಿ ಶ್ರೀ ದೇವಿ ಅವರು ಕೂಡ ಕೋಟಿ ಕೋಟಿ ಅಸ್ತಿ ಹೊಂದಿದ್ದಾರೆ. ಆ ಸ್ಟಾರ್ ದಂಪತಿಗಳ ಹಿರಿಯ ಮಗಳು ಜಾಹ್ನವಿ ಕಪೂರ್.
ಇವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಇವರು 2018 ರಲ್ಲಿ ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಕಪೂರ್ ಕುಟಂಬದ ಪೀಳಿಗೆಯಾಗಿ ಬಾಲಿವುಡ್ ಸಿನಿಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ ನಟಿ ಜಾಹ್ನವಿ ಕಪೂರ್. ಸಿನಿಮಾ ಲೋಕ ಮತ್ತು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿರಿಸಿರುವ ಜಾಹ್ನವಿ ಕಪೂರ್ ಅವರ ಬಗ್ಗೆ ಇದೀಗ ಭಾರೀ ಚರ್ಚೆ ಯಲ್ಲಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಅವರ ಕುರಿತಾದ ಸುದ್ದಿಗಳೇ ಹರಿದಾಡುತ್ತಿದೆ. ಹಾಗಂತ ಅದು ಅವರ ಸಿನಿಮಾದ ಕುರಿತಾಗಿ ಅಲ್ಲ, ಬದಲಾಗಿ ಅವರ ಆಸ್ತಿ ಮಾರಾಟದ ವಿಷಯದಲ್ಲಿ. ಹೌದು, ತಾನು ದುಡಿದ ಹಣ ಹಾಗೂ ಅಪ್ಪನ ಸಹಾಯದಿಂದ ಜುಹೂನಲ್ಲಿ ಇರುವ ಪ್ರತಿಷ್ಠಿತ ಅಪಾರ್ಟ್ಮೆಂಟ್ ನಲ್ಲಿ 14, 15 ಮತ್ತು 16ನೇ ಮಹಡಿಯಲ್ಲಿ ಮೂರು ಫ್ಲ್ಯಾಟ್ ಗಳನ್ನು ಅವರು ಖರೀದಿಸಿದ್ದರು.
ಅದರೆ ಇದೀಗ ಜಾಹ್ನವಿ ಕಪೂರ್ ಆ ಫ್ಲ್ಯಾಟ್ ಗಳನ್ನು ಬಾಲಿವುಡ್ ನಟ ರಾಜ್ ಕುಮಾರ್ ರಾವ್ ಅವರಿಗೆ ಮಾರಾಟ ಮಾಡಿದ್ದಾರೆ ಅನ್ನಲಾಗಿದೆ, ಜುಲೈ 21ರಂದು ಮೂರು ಫ್ಲ್ಯಾಟ್ ಗಳನ್ನು ತಮ್ಮ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾರಂತೆ ನಟ. ಬರೋಬ್ಬರಿ 2.19 ಕೋಟಿ ರೂಪಾಯಿ ಅನ್ನು ಅವರು ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರಂತೆ. ಜೂಹೂನಲ್ಲಿ ಮನೆ ಹೊಂದಬೇಕು ಎನ್ನುವುದು ರಾಜ್ ಕುಮಾರ್ ರಾವ್ ಅವರ ಕನಸಾಗಿತ್ತಂತೆ. ಅದನ್ನು ಈಗ ನೆರವೇರಿಸಿಕೊಂಡಿದ್ದಾರೆ.
ಜಾಹ್ನವಿ ಕಪೂರ್ ಅವರು 39 ಕೋಟಿ ರೂಪಾಯಿಗಳಿಗೆ ಮೂರು ಫ್ಲ್ಯಾಟ್ ಗಳನ್ನು ಖರೀದಿ ಮಾಡಿದ್ದರಂತೆ. ಆದರೆ ಇದೀಗ ನಟ ರಾಜ್ ಕುಮಾರ್ ಅವರಿಗೆ 44 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಅನ್ನಲಾಗಿದೆ. ಅಂದರೆ 5 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ. ಇನ್ನು ಇವರು ಈ ರೀತಿ ಫ್ಲ್ಯಾಟ್ ಮಾರಾಟ ಮಾಡಲು ಕಾರಣ ಕೂಡ ಇದೆ. ನಟ ರಾಜ್ ಕುಮಾರ್ ಅವರಿಗೆ ಜುಹೂವಿನಲ್ಲಿ ಮನೆ ಮಾಡಬೇಕು ಅನ್ನುವ ಆಸೆ ಇತ್ತಂತೆ.
ಜಾಹ್ನವಿ ಕಪೂರ್ ಅವರ ಜುಹು ವಿನಲ್ಲಿ ಆಸ್ತಿ ಹೊಂದಿರುವ ಬಗ್ಗೆ ತಿಳಿದಿದ್ದ ರಾಜ್ ಕುಮಾರ್ ಅವರು ಈ ಬಗ್ಗೆ ಪ್ರಸ್ತಾಪ ಮಾಡಿ ಮಾತನಾಡಿದ್ದರು. ಈ ಕಾರಣಕ್ಕೆ ಜಾಹ್ನವಿ ಕಪೂರ್ ತನ್ನ ಕನಸಿನ ಆಸ್ತಿಯನ್ನೇ ಮಾರಾಟ ಮಾಡಿದ್ದಾರೆ. ಇನ್ನು ಜಾಹ್ನವಿ ಅವರು ಧಡಕ್ ಸಿನಿಮಾ ನಂತರ ಕೆಲ ವರ್ಷ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆ ನಂತರ 2020ರಲ್ಲಿ ತೆರೆಕಂಡ ‘ಘೋಸ್ಟ್ ಸ್ಟೋರೀಸ್’ನಲ್ಲಿ ಜಾಹ್ನವಿ ಕಪೂರ್ ನಟಿಸಿದ್ದರು.
ಅದೇ ರೀತಿ ಮತ್ತೆ ಅದೇ ವರ್ಷ ಓಟಿಟಿಯಲ್ಲಿ ತೆರೆಕಂಡ ‘ಗುಂಜನ್ ಸಕ್ಸೇನಾ’ ಸಿನಿಮಾ ಜಾಹ್ನವಿಗೆ ಅಪಾರ ಖ್ಯಾತಿ ತಂದುಕೊಟ್ಟಿತು, 2021ರಲ್ಲಿ ತೆರೆಕಂಡ ಹಾರರ್ ಕಾಮಿಡಿ ಚಿತ್ರ ‘ರೂಹಿ’ಯಲ್ಲೂ ಜಾಹ್ನವಿ ಕಪೂರ್ ಗಮನ ಸೆಳೆದಿದ್ದರು. ಇದೀಗ ‘ದೋಸ್ತಾನಾ 2’, ‘ಮಿಲಿ’, ‘ಗುಡ್ ಲಕ್ ಜೆರ್ರಿ’ಯಲ್ಲಿ ನಟಿಸುತ್ತಿದ್ದಾರೆ. ಈ ಮಾಹಿತಿ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.