ಸಾಮಾನ್ಯವಾಗಿ ಹೆಚ್ಚಿನ ಮಂದಿಗೆ ಏನಾದರೂ ಒಂದು ಕ್ರೇಜ್ ಇರುತ್ತದೆ. ಕೆಲವರಿಗೆ ಬಾಯಿ, ಹೊಕ್ಕಳು, ಕಣ್ಣ ಬದಿ ಹೀಗೆ ದೇಹದ ನಾನಾ ಕಡೆ ಟಕ್ಸ್ ಗಳನ್ನು ಹಾಕಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಕ್ರೇಜ್ ಕೂಡ ಅನೇಕರಿಗೆ ಇರುತ್ತದೆ. ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಮಾಡರ್ನ್ ಟ್ರೆಂಡ್. ಕೆಲವರು ಸಿಂಪಲ್ ಆಗಿ ಚಿಕ್ಕದಾದ ಟ್ಯಾಟೂವನ್ನು ಕೈ ಮೇಲೆ ಅಥವಾ ಕಾಲಮೇಲೆ ಹಾಕಿ ಕೊಳ್ಳುತ್ತಾರೆ.
ಕೆಲವರು ಕುತ್ತಿಗೆ ಭಾಗದಲ್ಲಿ, ಕಿವಿಯ ಹಿಂಭಾಗದಲ್ಲಿ ಹಾಕಿಕೊಳ್ಳುತ್ತಾರೆ. ಇನ್ನು ಈ ಟ್ಯಾಟೂ ಅನ್ನುವುದು ಒಂದು ಸ್ಟೈಲ್ ಕೂಡ ಹೌದು. ಹೆಣ್ಣು ಮಕ್ಕಳು ಚಿಟ್ಟೆ, ನವಿಲುಗರಿ, ಹೂ, ಇಂತಹ ಟ್ಯಾಟೂ ಹಾಕಿದರೆ ಹುಡುಗರು ಹುಲಿ, ಶಿವ , ತ್ರಿಶೂಲ ಹೀಗೆ ಇಂತಹ ಟ್ಯಾಟೂಗಳನ್ನು ಹಾಕುತ್ತಾರೆ. ಕೆಲವರಿಗೆ ಈ ಟ್ಯಾಟೂ ಅನ್ನುವುದು ಸ್ಟೈಲ್ ಹಾಗೂ ಕ್ರೇಜ್ ಆಗಿದ್ದರೆ, ಇನ್ನು ಕೆಲವರಿಗೆ ಇದು ಅಭಿಮಾನ ತೋರಿಸುವ ಪರಿ. ಹೌದು, ತಮಗೆ ಪ್ರಿಯವಾದವರ ಹೆಸರನ್ನು ಮೈ ಮೇಲೆ ಹಾಕಿಕೊಂಡು ಅಭಿಮಾನ ತೋರಿಸುತ್ತಾರೆ.
ಕೆಲವರು ತನ್ನ ತಂದೆಯ ಅಥವಾ ತಾಯಿಯ, ಅದೇ ಅಣ್ಣ ತಂಗಿಯ, ಗಂಡನ ಪತ್ನಿಯ ಹೆಸರುಗಳನ್ನು ಅಥವಾ ಫೋಟೋಗಳನ್ನು ಹಚ್ಚೆ ಹಾಕಿಸಿಕೊಂಡು ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ಸಿನಿಮಾ ಸ್ಟಾರ್ ಗಳ, ಸ್ಪೋರ್ಟ್ಸ್ ಸ್ಟಾರ್ ಗಳ ಹೆಸರು ಹಾಗೂ ಫೋಟೋಗಳನ್ನು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇದೀಗ ಇದೇ ಟ್ಯಾಟೂ ವಿಷಯದಲ್ಲಿ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಸಮಂತಾ ರುತ್ ಪ್ರಭು ಸುದ್ದಿಯಲ್ಲಿದ್ದಾರೆ.
ಹೌದು, ಸಮಂತಾ ರುತ್ ಪ್ರಭು ಅವರು ತನ್ನ ಗಂಡ ನಾಗಚೈತನ್ಯ ಅವರಿಂದ ದೂರ ಆದ ನಂತರದಿಂದ ಸಕತ್ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ.ಸಿನಿಮಾಗಳಲ್ಲಿ ಕೂಡ ಬೋಲ್ಡ್ ಅವತಾರಗಳನ್ನು ತಾಳಿದ್ದಾರೆ. ಫೋಟೋ ಶೂಟ್ ನಲ್ಲಿ ಕೂಡ ಸಕತ್ ಹಾ-ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಬಿಕಿನಿ ಹಾಕಿ ಬ್ಯಾಕ್ ಫೋಸ್ ಕೊಟ್ಟು ಫೋಟೋ ತೆಗೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಅದರಲ್ಲಿ ಅವರ ಕುತ್ತಿಗೆಯ ಕೆಳ ಭಾಗದಲ್ಲಿ ವೈ ಎಂ ಸಿ ಎಂಬ ಟ್ಯಾಟೂ ಇದೆ. ಅನೇಕರಿಗೆ ಇದು ಯಾವ ಟ್ಯಾಟು ಎಂದು ಕನ್ಫ್ಯೂಸ್ ಆಗಿದೆ. ಇದು ಅವರ ನಟನೆಯ ಚೊಚ್ಚಲ ಚಿತ್ರ ಯೇ ಮಾಯಾ ಚೆಸಾವೆಮಯ ಶಾರ್ಟ್ ಫಾರ್ಮ್. ಇದರಲ್ಲಿ ಮಾಜಿ ಪತಿ ನಾಗ ಚೈತನ್ಯ ಅವರ ಜೊತೆ ಸಮಂತಾ ನಟಿಸಿದ್ದರು. ಅದೇ ರೀತಿ ತನ್ನ ಪಕ್ಕೆಲುಬಿನ ಹತ್ತಿರ ಚಾಯ್ ಎಂಬ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದು ಸಮಂತಾ ಅವರು ನಾಗ ಚೈತನ್ಯ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದ ಅಡ್ಡ ಹೆಸರು.
ಇದೀಗ ಈ ಟ್ಯಾಟು ಸುದ್ದಿ ಆಗಲು ಕಾರಣ ನಾಗ ಚೈತನ್ಯ ಹಾಗೂ ಸಮಂತಾ ರುತ್ ಪ್ರಭು ದೂರ ಆದರೂ ಇನ್ನೂ ಆ ಟ್ಯಾಟೂ ಇರುವುದು. ಇವರಿಬ್ಬರ ಪ್ರೀತಿ ಹುಟ್ಟಿದ ಸಂದರ್ಭದಲ್ಲಿ ಹಾಕಿಸಿಕೊಂಡ ಟ್ಯಾಟೂವನ್ನು ಈಗಲೂ ಅವರು ಮೈ ಮೇಲೆ ಇಟ್ಟುಕೊಳ್ಳಲು ಏನು ಕಾರಣ, ಅವರಿಗೆ ಈಗಲೂ ನಾಗಚೈತನ್ಯ ಅವರ ಮೇಲೆ ಪ್ರೀತಿ ಇದೆಯಾ ಅನ್ನುವ ಪ್ರಶ್ನೆ ಯನ್ನು ಕೇಳುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.