ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇಂದಿಗೂ ತಮ್ಮ ಮಾರ್ಕೆಟ್ ಬೀಳಿಸಿಕೊಳ್ಳದೆ ಉತ್ತಮ ನಟಿಯಾಗಿ ಬಹು ಬೇಡಿಕೆಯ ನಟಿಯಾಗಿ ಇಂದಿಗೂ ರಚಿತ ರಾಮ್ ಮುಂಚೂಣಿಯಲ್ಲಿದ್ದಾರೆ. ನಟಿ ರಚಿತಾ ರಾಮ್ ಜನರ ಅಚ್ಚು ಮೆಚ್ಚಿನ ನಟಿ ಗುಳಿಕೆನ್ನೆಯ ಈ ಚೆಲುವೆ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂದಾದರೆ ಅವರ ಸಿನಿಮಾವನ್ನು ಅವರ ಅಭಿಮಾನಿಗಳು ಮುಗಿಬಿದ್ದು ನೋಡುತ್ತಾರೆ.
ಇತ್ತೀಚೆಗೆ ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಸಿನಿಮಾ ತೆರೆಕಂಡು ಜನರ ಮೆಚ್ಚುಗೆ ಗಳಿಸಿಕೊಂಡಿದೆ. ಹೌದು ನಟಿ ರಚಿತಾ ರಾಮ್ ಇತ್ತೀಚಿಗೆ ತೆಲುಗು ಸಿನಿಮಾ ಇಂಡಸ್ಟ್ರಿಗೂ ಕೂಡ ಪಾದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಅಂತೂ ಈಗಾಗಲೇ ನಟನೆಯ ಮೂಲಕ ಛಾಪು ಮೂಡಿಸಿರುವ ರಚಿತಾ ರಾಮ್ ಕನ್ನಡದಲ್ಲಿ ದರ್ಶನ್ ಅಭಿನಯದ ಬುಲ್ ಬುಲ್ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು.
ಕಿರುತೆರೆಯಿಂದ ಬೆಳ್ಳಿತೆರೆಯ ಬಣ್ಣದ ಲೋಕವನ್ನು ಪ್ರವೇಶಿಸಿದವರು ನಟಿ ರಚಿತ ರಾಮ್. ರಚಿತಾ ರಾಮ್ ಅಂದ್ರೆ ಜನರಿಗೆ ಎಷ್ಟು ಇಷ್ಟವೋ ಅದೇ ರೀತಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿಗಳು ಕೂಡ ಅವರ ಅಭಿಮಾನಿಗಳೆ. ರಚಿತಾ ರಾಮ್ ಇನ್ನೂ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ ಅಂದರೆ ಅದಕ್ಕೆ ಇದೊಂದೇ ಮುಖ್ಯ ಕಾರಣ ಅಂತ ಇತ್ತೀಚಿಗೆ ದುನಿಯಾ ವಿಜಯ್ ಅವರು ಹೇಳಿದ್ದಾರೆ.
ಅದು ಯಾವ ಕಾರಣ ಗೊತ್ತಾ. ರಚಿತಾ ರಾಮ್ ಹಾಗೂ ಡಾಲಿ ಧನಂಜಯ್ ಅಭಿನಯದ ಮಾನ್ಸೂನ್ ರಾಗ ಸಿನಿಮಾ ಇತ್ತೀಚಿಗೆ ತೆರೆಕಂಡು ಉತ್ತಮ ಪ್ರತಿಕ್ರಿಯೆ ಗಳಿಸಿಕೊಂಡಿತ್ತು. ಈ ಸಿನಿಮಾದ ಪ್ರೀತಿ ಇವೆಂಟ್ ಅನ್ನು ಬಹಳ ಅದ್ದೂರಿಯಾಗಿ ನೆರವೇರಿಸಲಾಗಿತ್ತು. ಈ ಸಂದರ್ಭದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಗಣ್ಯರು ಭಾಗವಹಿಸಿದ್ದರು.
ಈ ಸಮಯದಲ್ಲಿ ಉಪಸ್ಥಿತರಿದ್ದ ನಟ ದುನಿಯಾ ವಿಜಯ್ ರಚಿತಾ ರಾಮ್ ಅವರ ಕುರಿತು ಉತ್ತಮ ಮಾತುಗಳನ್ನು ಆಡಿದ್ದಾರೆ. ‘ರಚಿತಾ ರಾಮ್ ಅವರ ಮನಸ್ಸಿನಲ್ಲಿ ಇರುವ ಮೋಸವಿಲ್ಲದ ವ್ಯಕ್ತಿತ್ವ ಹಾಗೂ ಸದಾ ಪಳಪಳ ಹೊಳೆಯುವ ಅವರ ಕಣ್ಣುಗಳೇ ಅವರ ಯಶಸ್ಸಿಗೆ ಕಾರಣ ಇಂದು ಅವರು ಸಿನಿಮಾ ರಂಗದಲ್ಲಿ ಇಷ್ಟು ವರ್ಷದ ಬಳಿಕವು ಆಕ್ಟಿವ್ ಆಗಿ ಇರುವುದಕ್ಕೆ ಇದೇ ಕಾರಣ ಎಂದಿದ್ದಾರೆ.
ಅದೇ ರೀತಿ ಡಾಲಿ ಧನಂಜಯ್ ಅವರು ಕೂಡ ಡಿಂಪಲ್ ಕ್ವೀನ್ ರಚಿತಾ ರಾಮ್ ಬಗ್ಗೆ ಮಾತನಾಡಿದ್ದು, ಕತ್ರಿಗುಪ್ಪೆಯಲ್ಲಿ ರಚಿತಾ ಅವರ ಮನೆ ಇದ್ದಾಗ ಅವರ ಮನೆಯ ಮುಂದೆ ಬೀಟ್ ಹೊಡೆತ ಇದ್ದೆ ಈಗ ಅವರ ಸಿನಿಮಾಕೆ ನಾನೇ ನಾಯಕನಾಗಿದ್ದೇನೆ ಎಂದು ನಿಜಕ್ಕೂ ಹೆಮ್ಮೆಯಾಗುತ್ತೆ ಅವರ ಜೊತೆಗೆ ಅಭಿನಯಿಸುವುದು ಬಹಳ ಖುಷಿ ಕೊಡುತ್ತದೆ ಎಂದು ಡಾಲಿ ಧನಂಜಯ್ ಕೂಡ ರಚಿತಾ ರಾಮ್ ಅವರ ಬಗ್ಗೆ ಉತ್ತಮ ಮಾತುಗಳನ್ನು ಆಡುತ್ತಾರೆ. ಸರಳತೆ ಹಾಗೂ ಸದಾ ನಗುವ ರಚಿತಾ ರಾಮ್ ಕನ್ನಡ ಸಿನಿಪ್ರಿಯರ ಅಚ್ಚು ಮೆಚ್ಚಿನ ನಟಿ ಎನಿಸಿದ್ದಾರೆ.