ಇದೀಗ ಸೌತ್ ಸಿನಿಮಾಗಳು ಸಿಕ್ಕಾಪಟ್ಟೆ ಹೆಸರು ಗಳಿಸಿಕೊಳ್ಳುತ್ತಿವೆ. ಮಾತ್ರವಲ್ಲ ಬಾಕ್ಸ್ ಆಫೀಸಿ ಕೊಳ್ಳೆ ಹೊಡೆಯುವುದರಲ್ಲಿಯೂ ಕೂಡ ಸಿನಿಮಾಗಳು ಮುಂದೆ ಇವೆ. ತೆಲುಗು ಹಾಗೂ ತಮಿಳಿನಲ್ಲಿ ಅತಿ ಹೆಚ್ಚು ಬಜೆಟ್ ಸಿನಿಮಾಗಳು ನಿರ್ಮಾಣವಾಗುತ್ತಿದೆ ಅದರಲ್ಲೂ ತೆಲುಗು ಸಿನಿಮಾ ಇಂಡಸ್ಟ್ರಿ ಭಾರಿ ಬಜೆಟ್ ಸಿನಿಮಾಗಳನ್ನ ನಿರ್ಮಿಸುವುದರಲ್ಲಿ ಎತ್ತಿದ ಕೈ. ಹಾಗಾಗಿ ಇದೀಗ ಜನರನ್ನ ರಂಜಿಸಲು ಅದ್ಧೂರಿಯಾಗಿ ನಿರ್ಮಾಣವಾಗಿದೆ ’ಆದಿಪುರುಷ್’.
ಮುಂದಿನ ಜನವರಿ 12ರಷ್ಟಲ್ಲಿ ಬಿಡುಗಡೆಯಾಗಲಿರುವ ಆದಿಪುರುಷ್ ಸಿನಿಮಾದ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಈ ಚಿತ್ರದಲ್ಲಿ ಬಹು ಮುಖ್ಯವಾಗಿ ಅತ್ಯದ್ಭುತ ಹೊಸ ತಂತ್ರಜ್ಞಾನವನ್ನು ನೀವು ನೋಡಬಹುದು. ಓಂ ರಾವತ್ ಅವರ ಎರಡನೆಯ ಸಿನಿಮಾ ಇದು. ತಾನಾಜಿ ಎನ್ನುವ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿದ ಖ್ಯಾತಿ ರಾವುತ್ ಅವರದು. ಆದಿಪುರುಷ್ ಸಿನಿಮಾವನ್ನ ಕೈಗೆತ್ತಿಕೊಂಡಿರುವ ಓಂ ರಾವುತ್ ಇದರಲ್ಲಿ ಸಾಕಷ್ಟು ಹೆಚ್ಚಿನ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ.
ಹೌದು, ಆದಿಪುರುಷ್ ಸಿನಿಮಾ ಬಹಳ ವಿಶೇಷವಾಗಿದೆ ಇದು ಶ್ರೀರಾಮನ ಕಾಲಕ್ಕೆ ನಮ್ಮನ್ನ ಮತ್ತೆ ಕೊಂಡೊಯ್ಯುತ್ತೆ ಆದಿಪುರುಷ್ ಸಿನಿಮಾದಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ರಾವಣನಾಗಿ ಸೈಫ್ ಅಲಿ ಖಾನ್ ಬಣ್ಣ ಹಚ್ಚಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸಲೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಹಾಗೂ ಹನುಮಂತನಾಗಿ ದೇವದತ್ತ ನಾಗೆ ಅವರು ಈ ಸಿನಿಮಾಕ್ಕೆ ಇನ್ನಷ್ಟು ಮೆರಗು ನೀಡಿದ್ದಾರೆ.
ಇನ್ನು ಈ ಹಿಂದೆ ರಜನಿಕಾಂತ್ ಅವರ ಕೋಚಾಡಿಯನ್ ಸಿನಿಮಾದಲ್ಲಿ ಮೋಶನ್ ಕ್ಯಾಪ್ಚರ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿತ್ತು. ಅದೇ ರೀತಿ ಇದೀಗ ಆದಿಪುರುಷ್ ಸಿನಿಮಾದಲ್ಲಿಯೂ ಕೂಡ ಮೋಶನ್ ಕ್ಯಾಪ್ಚರ್ ತಂತ್ರಜ್ಞಾನದಲ್ಲಿ ಚಿತ್ರೀಕರಣ ಮಾಡಲಾಗಿದೆ ಅದರಲ್ಲಿಯೂ ವಿಎಫ್ಎಕ್ಸ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದಿ ಪರುಷ್ ಸಿನಿಮಾ ಭಾರಿ ಬಜೆಟ್ ಇಟ್ಟುಕೊಂಡು ಮಾಡಿರುವಂತಹ ಸಿನಿಮಾ ಸುಮಾರು 450-500 ಕೋಟಿ ಬಜೆಟ್ ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.
ಅದರಲ್ಲಿಯೂ ಸುಮಾರು 250 ಕೋಟಿ ರೂಪಾಯಿಗಳಷ್ಟನ್ನು ಮೀಸಲಿಟ್ಟಿದ್ದಾರೆ ನಿರ್ಮಾಪಕರು. ಭಾರಿ ಬಜೆಟ್ ನ ಜೊತೆಗೆ ಈ ಸಿನಿಮಾದಲ್ಲಿ ಹಾಕಿದ ಬಜೆಟ್ ಎಲ್ಲವನ್ನು ಹಿಂತುರುಗಿ ಪಡೆದುಕೊಳ್ಳಲು ಸಾಧ್ಯವಾಗುವಂತಹ ಪ್ರಭಾಸ್ ಅವರನ್ನ ನಾಯಕ ನಟರಾಗಿ ಆಯ್ದುಕೊಳ್ಳಲಾಗಿದೆ. ಹೌದು ಬಾಕ್ಸ್ ಆಫೀಸ್ ನ ಮೂಲಗಳ ಪ್ರಕಾರ ಪ್ರಭಾಸ್ ಮೇಲೆ ಹೂಡಿಕೆ ಮಾಡಿದ್ರೆ ಅದು ಸುಲಭವಾಗಿ ವಾಪಸ್ ಬರುತ್ತೆ.
ಹಾಗಾಗಿ ಆದಿಪುರುಷ್ ಸಿನಿಮಾವು ಕೂಡ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ದಕ್ಷಿಣ ಭಾರತದ ಸಿಮಿಪ್ರಿಯರು ಮಾತ್ರವಲ್ಲ ಬಾಲಿವುಡ್ ನ ಸಿನಿಪ್ರಿಯರು ಕೂಡ ಈ ಸಿನಿಮಾದ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇನ್ನು ಪ್ರಭಾಸ್ ಅತ್ಯುತ್ತಮ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಹುಬಲಿ ಗೆದ್ದ ಹಿನ್ನೆಲೆಯಲ್ಲಿ ಪ್ರಭಾಸ್ ಬೇಡಿಕೆಯು ಕೂಡ ಹೆಚ್ಚಾಗಿದೆ ಅವರ ಮೇಲೆ ಭಾರಿ ಬಜೆಟ್ ಸಿನಿಮಾ ನಿರ್ಮಾಣವಾಗುತ್ತೆ.
ಆದರೂ ಸಾಹೋ ಮತ್ತು ರಾಧೆ ಶ್ಯಾಮ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಹೆಚ್ಚಿನ ಕಲೆಕ್ಷನ್ ಮಾಡಲಿಲ್ಲ. ಹಾಗಾಗಿ ಆದಿಪುರುಷ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇನ್ನು ಈ ಸಿನಿಮಾದ ನಿರ್ದೇಶಕ ಓಂ ರಹುತ್ ಅವರು ಮನುಷ್ಯನ ಕಣ್ಣುಗಳೇ ಅವನಲ್ಲಿರುವ ಕಲೆಯನ್ನು ಹೊರ ಹಾಕುತ್ತವೆ, ನನಗೆ ಅಂತಹ ಮಿಂಚು ಕಂಡಿದ್ದು ಪ್ರಭಾಸ್ ಅವರ ಕಣ್ಣುಗಳಲ್ಲಿ ನಾನು ಈ ಹಿಂದೆಯೇ ಹೇಳಿದಂತೆ ಆದಿಪುರು ಸಿನಿಮಾ ವನ್ನು ಪ್ರಭಾಸ್ ಒಪ್ಪಿಕೊಳ್ಳದೆ ಇದ್ರೆ ಅವರ ಜಾಗಕ್ಕೆ ಬೇರೆ ಯಾವುದೇ ಆಯ್ಕೆಯು ನನಗೆ ಇರಲಿಲ್ಲ ಅಂತ ಹೇಳಿಕೊಂಡಿದ್ದಾರೆ. ಆದಿಪುರುಷ್ ಸಿನಿಮಾದ ಟೀಸರ್ ಈಗಾಗಲೇ ಅಯೋಧ್ಯೆಯಲ್ಲಿ ಬಿಡುಗಡೆ ಮಾಡಲಾಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.