PhotoGrid Site 1658554622148

ಆತ ನನ್ನ ಗಂಡ ಅಲ್ಲ ಮಾಜಿ ಪತಿ ಎಂದು ಹಿಂದಿ ಕಾರ್ಯಕ್ರಮದಲ್ಲಿ ಹೇಳಿದ ನಟಿ ಸಮಂತಾ! ಸಮಂತಾ ಹೊರಹಾಕಿದ ಸುದ್ದಿ ಕೇಳಿ ತಲೆ ಮೇಲೆ ಕೈಯಿಟ್ಟು ಕುಳಿತ ತೆಲುಗು ಜನತೆ!!

ಸುದ್ದಿ

ಅದು ಯಾವ ಹೊಸ ನಟಿಯರು ಬರ್ತಾರೋ ಬಿಡ್ತಾರೋ ಆದರೆ ಮದುವೆ ಆಗಿ ಇದೀಗ ವಿಚ್ಛೇ-ದನ ಆದಮೇಲೂ ಎಲ್ಲರಿಗಿಂತ ಬೇಡಿಕೆ ಹೆಚ್ಚಿಸಿಕೊಂಡ ನಟಿ ಅಂದರೆ ಅದು ಸಮಂತಾ ರುತ್ ಪ್ರಭು. ವಯಸ್ಸು 32 ಆದರೂ ಈಗಲೂ ನಾಯಕಿ ನಟಿಯಾಗಿ ಬೇಡಿಕೆ ಉಳಿಸಿಕೊಂಡಿರುವ ನಟಿ ಸಮಂತಾ. ದಕ್ಷಿಣ ಭಾರತ ಸಿನಿಮಾ ಮಾತ್ರವಲ್ಲದೆ ಬಾಲಿವುಡ್ ಕ್ಷೇತ್ರದಲ್ಲಿ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ನಟಿಯರು ಮದುವೆ ಆದಮೇಲೆ ಸಿನಿಮಾ ಅವಕಾಶ ಕಡಿಮೆ ಆಗುತ್ತಾ ಬರುತ್ತದೆ.

ಆದರೆ ಸಮಂತಾ ರುತ್ ಪ್ರಭು ಅವರ ವಿಷಯದಲ್ಲಿ ಮಾತ್ರ ಅದು ಸುಳ್ಳಾಗಿದೆ. ಇವರು 2017ರಲ್ಲಿ ತೆಲುಗು ನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆದರೆ‌ ಮದುವೆ ಆದ ನಾಲ್ಕೇ ವರ್ಷದಲ್ಲಿ ಇಬ್ಬರೂ ವಿಚ್ಛೇ-ದನ ಪಡೆದು ದೂರ ಆಗಿದ್ದಾರೆ. ಇನ್ನು ಈ ಡಿವೋರ್ಸ್ ಬಗ್ಗೆ ಸಾಕಷ್ಟು ಅಂತೆ ಕಂತೆಗಳು ಹುಟ್ಟಿಕೊಂಡಿದ್ದವು. ಫ್ಯಾಮಿಲಿ‌ ಮ್ಯಾನ್ 2 ಸೀರಿಸ್ ನಲ್ಲಿ ಬೋಲ್ಡ್ ಆಗಿ ನಟಿಸಿದ್ದೇ ಇದಕ್ಕೆ ಕಾರಣ.

ಅಂತೆಲ್ಲಾ ಲೆಕ್ಕವಿಲ್ಲದಷ್ಟು ವದಂತಿಗಳು ಕೇಳಿಬಂದವು. ಆದರೆ ಅದೇನೇ ಆದರೂ ಸಮಂತಾ ಆಗಲಿ ಅಥವಾ ನಾಗಚೈತನ್ಯ ಆಗಲಿ ಈ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳಿಗೆ ಈ ಬಗ್ಗೆ ತೀವ್ರ ಕುತೂಹಲ ಇದ್ದೇ ಇದೆ. ಇದೀಗ ಸಮಂತಾ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಈ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ಜೊತೆ ವೈಯುಕ್ತಿಕ ವಿಷಯಗಳನ್ನು ಕೇಳಲಾಗುತ್ತದೆ.

ಇದೇ ರೀತಿ ಸಮಂತಾ ಬಳಿಯೂ ಕೆಲ ವಿಷಯಗಳನ್ನು ಕರಣ್ ಕೇಳಿದ್ದಾರೆ. ಮೊದಲಿಗೆ ಕರಣ್ ಸಮಂತಾ ಜೊತೆ ಮಾತನಾಡುತ್ತ ‘ನಿಮ್ಮ ಪತಿ..’ ಎಂದು ಪ್ರಾರಂಭ ಮಾಡಿದ್ದರು. ಆಗ ಅವರ ಮಾತನ್ನು ಅರ್ಧದಲ್ಲೇ ತಡೆದ ಸಮಂತಾ, ‘ಮಾಜಿ ಪತಿ..’ ಎಂದು ಹೇಳಿ ಸರಿ ಪಡಿಸಿದರು.‌ಆಗ ಒಂದು ಬಾರಿ ಕರಣ್ ಶಾಕ್ ಆದಂತೆ ಕಂಡು ಬಂದಿದ್ದರು. ಇದೇ ರೀತಿ ಕರಣ್ ಜೋಹರ್ ಅವರು ಸಮಂತಾ ಜೊತೆ ಅವರ ಮದುವೆಯ ಹಾಗೂ ವಿಚ್ಛೇ-ದನ ಕುರಿತಾದ ಪ್ರಶ್ನೆಗಳನ್ನು ಕೇಳಿದ್ದಾರೆ.

ಅದರಲ್ಲಿ ‘ಡಿವೊರ್ಸ್ ನಂತರ ನಿಮ್ಮ ಬದುಕು ಹೇಗಿದೆ’ ಎಂಬ ಪ್ರಶ್ನೆ ಕೂಡ ಇತ್ತು. ಅದಕ್ಕೆ ಸಮಂತಾ, ಪ್ರಾರಂಭದಲ್ಲಿ ಜೀವನ ತುಂಬಾ ಕಷ್ಟಕರವಾಗಿತ್ತು, ಆದರೆ ಈಗ ಉತ್ತಮವಾಗಿದೆ. ಹಿಂದಿಗಿಂತಲೂ ಸ್ಟ್ರಾಂಗ್ ಆಗಿದ್ದೇನೆ’ ಎಂದು ಹೇಳಿದ್ದಾರೆ. ಅದೇ ರೀತಿ ‘ನಿಮ್ಮ ಹೃದಯಕ್ಕೆ ಹೋಗುವ ದಾರಿ ಯಾವುದು’ ಎಂಬ ಕರಣ್ ಜೋಹರ್ ಪ್ರಶ್ನೆಗೆ, ‘ಅದು ಈಗ ಮುಚ್ಚಲ್ಪಟ್ಟಿದೆ. ದಯವಿಟ್ಟು ಯು-ಟರ್ನ್ ತೆಗೆದುಕೊಳ್ಳಿ.’ ಎಂದು ಸಮಂತಾ ನಗುತ್ತಾ ಹೇಳಿದ್ದಾರೆ.

ಸಮಂತಾ ಅವರ ಬಳಿ ಮತ್ತಷ್ಟು ಪರ್ಸನಲ್ ವಿಚಾರಗಳನ್ನು ಕೇಳಿದಾಗ ನೇರವಾಗಿ ತೀರ ವೈಯುಕ್ತಿಕ ವಿಚಾರ ಇಲ್ಲಿ ಬೇಡ ಎಂದು ಹೇಳಿದ್ದಾರೆ. ಇನ್ನು ಸಮಂತಾ ರುತ್ ಪ್ರಭು ಅವರು ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹೌದು, ಸಮಂತಾ ಅವರು ‘ಯಶೋದಾ’, ‘ಶಾಕುಂತಲಂ’ ಅನ್ನುವ ಸಿನಿಮಾಗಳಲ್ಲಿ ನಟಿಸಿದ್ದು, ಅದೇ ರೀತಿ ವಿಜಯ್ ದೇವರಕೊಂಡ ಜೊತೆಗೆ ‘ಖುಷಿ’ ಸಿನಿಮಾದಲ್ಲೂ ನಟಿಸಿದ್ದಾರೆ.

PhotoGrid Site 1658554637214

ಇನ್ನು ಬಾಲಿವುಡ್‌ನಲ್ಲಿ ಕೂಡ ಸಮಂತಾ ನಟಿಸಲಿದ್ದಾರೆ, ಅದರಲ್ಲೂ ಅಕ್ಷಯ್ ಕುಮಾರ್ ಅವರ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಪುರಾವೆ ಅನ್ನುವಂತೆ ಕಾಫಿ ವಿದ್ ಕರಣ್ ಕಾರ್ಯಕ್ರಮಕ್ಕೆ ಸಮಂತಾ ಅವರು ಅಕ್ಷಯ್ ಕುಮಾರ್ ಜೊತೆಯೇ ಬಂದಿದ್ದರು. ಈ ಕುರಿತಾಗಿ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *