ನಟ ದ್ವಾರಕೀಶ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಗಂಧದ ಗುಡಿಯ ನೆಲದಲ್ಲಿ ಒಬ್ಬ ನಿರ್ಮಾಪಕನಾಗಿ ನಿರ್ದೇಶಕನಾಗಿ ಜೊತೆಗೆ ಸಕ್ಸಸ್ ಫುಲ್ ನಟನಾಗಿ ಗುರುತಿಸಿಕೊಂಡವರು ದ್ವಾರಕೀಶ್ ಅವರು ಸಾಕಷ್ಟು ಸಣ್ಣ ವಯಸ್ಸಿನಲ್ಲಿ ಸಕ್ಸಸ್ ಕಂಡ ನಟ ಇವರು ಬಹಳ ವರ್ಷಗಳ ಹಿಂದೆಯೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಐಷಾರಾಮಿ ಜೀವನ ನಡೆಸಿದ ಏಕೈಕ ವ್ಯಕ್ತಿ ಅಂದ್ರೆ ದ್ವಾರಕೀಶ್ ಎನ್ನಬಹುದು.
ವಿಷ್ಣುವರ್ಧನ್ ಅವರ ಸ್ನೇಹದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕನ್ನಡದ ಕುಳ್ಳ ದ್ವಾರಕೀಶ್ ಹಾಗೂ ವಿಷ್ಣು ದಾದಾ ಅವರು ಕುಚುಕು ಸ್ನೇಹಿತರು ಎಂದೇ ಗುರುತಿಸಿಕೊಂಡಿದ್ದರು ವಿಷ್ಣುವರ್ಧನ್ ಹಾಗೂ ದ್ವಾರಕೀಶ ಅವರನ್ನ ಕನ್ನಡಿಗರು ಕೂಡ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ತೆರೆಯ ಮೇಲೆ ಬರ್ತಾರೆ ಅಂದ್ರೆ.
ಪ್ರೇಕ್ಷಕರಿಗೆ ಹಬ್ಬವೋ ಹಬ್ಬ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಸಿನಿಮಾಗಳನ್ನ ಮುಗಿಬಿದ್ದು ಜನ ವೀಕ್ಷಿಸುತ್ತಿದ್ದರು. ಒಂದರ್ಥದಲ್ಲಿ ವಿಷ್ಣುವರ್ಧನ್ ಅವರಿಂದಲೇ ದ್ವಾರಕೀಶ್ ಸಾಕಷ್ಟು ಹಣ, ಹೆಸರು ಗಳಿಸಿದರು ಎಂದರೆ ತಪ್ಪಾಗುವುದಿಲ್ಲ. ಆದರೆ ತನಗೆ ಹೆಸರು ಹಣ ಬರುತ್ತಿದ್ದಂತೆ ಅಹಂಕಾರವು ನನ್ನನ್ನ ಆವರಿಸಿತ್ತು ಅಂತ ದ್ವಾರಕೀಶ್ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
ದ್ವಾರಕೀಶ್ ಅವರ ದರ್ಪ ಎಷ್ಟರ ಮಟ್ಟಿಗೆ ಹೋಗಿತ್ತು ಅಂದ್ರೆ ತನ್ನ ಜೊತೆ ತನ್ನ ಮನೆಯಲ್ಲಿಯೇ ಓಡಾಡಿಕೊಂಡಿದ್ದ ಒಬ್ಬ ಅತ್ಯದ್ಭುತ ನಾಯಕ ನಟನನ್ನು ನಾನು ಗುರುತಿಸಲೇ ಇಲ್ಲ ಅವರಿಗೆ ಸರಿಯಾಗಿ ಪ್ರೀತಿ ಗೌರವ ತೋರಿಸಲಿಲ್ಲ ಎಂದು ದ್ವಾರಕೀಶ್ ಹೇಳಿಕೊಂಡಿದ್ದಾರೆ. ಒಂದು ಕಾಲದಲ್ಲಿ ಗಳಸ್ಯ ಕಂಠಸ್ಯ ಎನ್ನುವಂತೆ ಇದ್ದ ಸ್ನೇಹಿತರು ನಂತರ ಬೇರೆ ಆಗುತ್ತಾರೆ.
ಇವರಿಬ್ಬರ ನಡುವೆ ಯಾರೋ ಮನಸ್ತಾಪ ತಂದು ಸ್ನೇಹಿತರಿಬ್ಬರೂ ದೂರ ಆಗಿದ್ದಾರೆ ಎಂದೇ ಜನ ಭಾವಿಸಿದ್ದರು. ಆದರೆ ತಮ್ಮ ಹಾಗೂ ವಿಷ್ಣುವರ್ಧನ್ ಅವರ ನಡುವಿನ ಸ್ನೇಹದ ಬಗ್ಗೆ ದ್ವಾರಕೀಶ್ ಹೇಳಿಕೊಂಡಿದ್ದೆ ಬೇರೆ. ಒಬ್ಬ ನಾಯಕ ನಟನಿಗೆ ಕೊಡಬೇಕಾದ ಮರ್ಯಾದೆಯನ್ನು ನಾನು ಕೊಟ್ಟಿಲ್ಲ ನನ್ನ ದರ್ಪ ಹಾಗೂ ದುರಹಂಕಾರವೇ ನನ್ನ ಹಾಗೂ ವಿಷ್ಣುವರ್ಧನ್ ಅವರನ್ನು ದೂರ ಮಾಡಿದ್ದು ಎಂದು ಬಹಳ ನೋವಿನಿಂದ ಹೇಳಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಸಾಕಷ್ಟು ಯಶಸ್ಸನ್ನ ಕಂಡಿದ್ದ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದೆ. ವಿಷ್ಣುವರ್ಧನ್ ಅವರು ನಾನು ಸಿನಿಮಾ ನಿರ್ಮಾಣ ಮಾಡ್ತೀನಿ ಅಂದಾಗ ಯಾವುದೇ ಪ್ರಶ್ನೆ ಇಲ್ಲದೆ ಕೂಡಲೇ ಒಪ್ಪಿಗೆ ಸೂಚಿಸುತ್ತಿದ್ದರು. ನನ್ನ ನಿರ್ಮಾಣದ ಇಂದಿನ ರಾಮಾಯಣ ಎನ್ನುವ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಹೀರೋಯಿನ್ ಇಲ್ಲದೆ, ಫೈಟಿಂಗ್ ಇಲ್ಲದೆ ಒಬ್ಬ ಸಾಮಾನ್ಯ ಕಲಾವಿದನಾಗಿ ಅಭಿನಯಿಸಿದ್ರು.
ಅಷ್ಟು ದೊಡ್ಡ ನಟ ಹೀಗೆ ಒಂದು ಸಿನಿಮಾದಲ್ಲಿ ನಟಿಸೋದು ಅಂದ್ರೆ ದೊಡ್ಡ ವಿಷಯ. ಅದು ಅವರು ನನಗೆ ಕೊಟ್ಟ ಗೌರವ. ವಿಷ್ಣುವರ್ಧನ ಕಥೆ ಕೇಳಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದರು ಅಥವಾ ತಿರಸ್ಕರಿಸುತ್ತಿದ್ದರು ಎಂದು ಹೇಳುತ್ತಾರೆ, ಆದರೆ ನನ್ನ ಯಾವ ಸಿನಿಮಾದ ಕಥೆಯನ್ನು ಕೇಳದೆ ಆ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡ ಏಕೈಕ ನಟ ವಿಷ್ಣುವರ್ಧನ್.
ನಾನು ಮಾಡಿರುವ ತಪ್ಪು ಅಂದ್ರೆ ವಿಷ್ಣುವರ್ಧನ್ ಅವರಿಗೆ ಅಗೌರವ ತೋರಿಸಿದ್ದು. ಅವರ ಜೊತೆ ಸರಿಯಾಗಿ ನಡೆದುಕೊಳ್ಳದೆ ಅವರಿಗೆ ಕೊಡಬೇಕಾದ ಗೌರವ ಕೊಡದೆ ನಾನು ಅಂತಹ ಅದ್ಭುತ ವ್ಯಕ್ತಿಯ ಸ್ನೇಹವನ್ನು ಕಳೆದುಕೊಂಡೆ ಎಂದು ಹೇಳುತ್ತಾರೆ. ಸಂಪೂರ್ಣ ಕುಸಿದಿದ್ದ ನನಗೆ ಅವರೊಂದಿಗೆ ಅಭಿನಯಿಸಿದ ಆಪ್ತಮಿತ್ರ ಚಿತ್ರ ಮತ್ತೆ ಗೆಲುವನ್ನು ತಂದು ಕೊಟ್ಟಿದೆ ಎಂದು ವಿಷ್ಣುವರ್ಧನ್ ಅವರ ಬಗ್ಗೆ ದ್ವಾರಕೀಶ್ ಹೇಳಿಕೊಂಡಿದ್ದಾರೆ.