ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಬರೀ ರೀಲ್ಸ್ ಗಳದ್ದೇ ಕಾರುಬಾರು. ಹೌದು, ಅನೇಕ ಪ್ರತಿಭೆಗಳನ್ನು ನಾವು ಸೋಶಿಯಲ್ ಮೀಡಿಯಾಗಳಲ್ಲಿ ಕಾಣುತ್ತೇವೆ. ಈ ಹಿಂದೆ ಅದೆಷ್ಟೋ ಪ್ರತಿಭೆಗಳು ಎಲೆಮರೆಯ ಕಾಯಿಯಂತೆ ಯಾರಿಗೂ ತಿಳಿಯದೆ, ಅವರ ಎಲ್ಲಾ ಟ್ಯಾಲೆಂಟ್ ಗಳು ಕಮರಿ ಹೋಗುತ್ತಿತ್ತು. ಶ್ರೀಮಂತ ವರ್ಗವಾದರೆ ಹೇಗಾದರೂ ಮಾಡಿ ಮುಖ್ಯ ಭೂಮಿಕೆಗೆ ಬಂದು ಜನರಿಗೆ ತಮ್ಮಲ್ಲಿನ ಪ್ರತಿಭೆಗಳನ್ನು ತೋರಿಸುತ್ತಿದ್ದರು. ಬಡ ಬಗ್ಗರಾದರೆ ನಾಲ್ಕು ಗೋಡೆ ಮಧ್ಯೆಯೇ ಇರುತ್ತಿದ್ದರು.
ಆದರೆ ಈಗ ಹಾಗಲ್ಲ, ಸೋಶಿಯಲ್ ಮೀಡಿಯಾದಲ್ಲಿ ರಾಜ್ಯದ, ದೇಶದ ಮೂಲೆ ಮೂಲೆಯ ಪ್ರತಿಭೆಗಳನ್ನು ನಾವು ಕಾಣುತ್ತೇವೆ. ಅಂತಹವರನ್ನು ಗುರುತಿಸಿ ಅವರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಲಾಗುತ್ತದೆ. ಇನ್ನು ಈ ರೀಲ್ಸ್, ಶಾರ್ಟ್ಸ್ ಅನ್ನುವ ಆಪ್ ಗಳಲ್ಲಿ ಕೇವಲ ಡ್ಯಾನ್ಸ್, ಕಾಮೆಡಿ, ಡ್ರಾಮಾ ಇಂತಹ ಹಲವು ರೀತಿಯ ವಿಡಿಯೋಗಳನ್ನು ನಾವು ಕಾಣಬಹುದು. ಆದರೆ ದಾರ ನಡುವೆ ಕೆಲವೊಂದು ಭಿನ್ನ ಭಿನ್ನವಾದ ಟಾಸ್ಕ್ ಗಳು ಕೂಡ ಇರುತ್ತವೆ.
ಅದರಲ್ಲಿ ಮುಖ್ಯವಾಗಿ ಚಾಲೆಂಚ್ ಗಳು. ಕೆಲವು ಎಕ್ಸ್ಪ್ರೆಷನ್ ಚಾಲೆಂಜ್ ಇದ್ದರೆ, ಇನ್ನು ಕೆಲವು ಸ್ಟಪ್ಸ್ ಇರುತ್ತದೆ. ಇನ್ನು ಕೆಲವು ಸೇಮ್ ಕಲರ್ ಬಟ್ಟೆ ಹಾಕುವ ಚಾಲೆಂಜ್ ಇರುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚಾಲೆಂಜ್ ಕ್ರಿಯೇಟ್ ಆಗಿದೆ. ಅದುವೆ ಹಾಫ್ ಸಾರಿ ಚಾಲೆಂಜ್. ಇದಕ್ಕೆ ಅದ್ಭುತ ಕಲೆ ಕೊಟ್ಟವರು ಭೂಮಿಕಾ ಬಸವರಾಜ್. ಹೌದು, ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ಕನ್ನಡದ ಹಾಡೊಂದಕ್ಕೆ ಕಪ್ಪು ಹಾಗೂ ಕೆಂಪು ಬಣ್ಣದ ಕಾಂಬಿನೇಷನ್ ಇರುವ ಹಾಫ್ ಸಾರಿ ಉಟ್ಟು ಸಕತ್ ಡ್ಯಾನ್ಸ್ ಮಾಡಿದ್ದಾರೆ.
ಇದು ಈಗ ವೈರಲ್ ಆಗಿದೆ. ಇವರು ಅನೇಕರ ಫೆವರಿಟ್ ಆಗಿರುವ ರೀಲ್ಸ್ ಸ್ಟಾರ್. ಇವರು ಅದ್ಭುತ ವಾದ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಮೂಲತಃ ಚಿಕ್ಕಮಗಳೂರಿನವರಾದ ಭೂಮಿಕಾ ಬಸವರಾಜ್ ಸಿಕ್ಕಾಪಟ್ಟೆ ಕ್ರಿಯೇಟಿವ್. ಟ್ರೆಂಡ್ ನಲ್ಲಿ ಇರುವ ಹಾಡುಗಳಿಗೆ ಸಖತ್ ಹಾಟ್ ಆಗಿ ಡ್ಯಾನ್ಸ್ ಮಾಡಿ ಅವುಗಳನ್ನು ರೀಲ್ಸ್ ನಲ್ಲಿ ಶೇರ್ ಮಾಡಿ ಅನುಯಾಯಿಗಳನ್ನು ಹೆಚ್ಚಿಸಿಕೊಂಡಿದ್ದಾರೆ.
ಇವರ ಸ್ಪೆಷಾಲಿಟಿ ಏನು ಅಂದ್ರೆ ಇವರು ಹೆಚ್ಚಾಗಿ ಸೀರೆಯುಟ್ಟು ಡ್ಯಾನ್ಸ್ ಮಾಡುತ್ತಾರೆ. ಸಿಂಪಲ್ ಸೀರೆಯಲ್ಲಿ ತುಂಬಾನೇ ಹಾಟ್ ಆಗಿ ಕಾಣಿಸುವ ಭೂಮಿಕಾ ಬಸವರಾಜ್ ಸೊಂಟ ತೋರಿಸುತ್ತಾ ಕುಣಿದರೆ ಇತ್ತ ಗಂಡು ಹೈಕ್ಳ ಹಾರ್ಟ್ ಬೀಟ್ ಕೂಡ ಹೆಚ್ಚಾಗುತ್ತದೆ. ಇದೀಗ ಈ ವಿಡಿಯೋ ಮೂಲಕ ಹುಡುಗರ ನಿದ್ದೆ ಕದ್ದಿದ್ದಾರೆ. ಸೊಂಟ ಕುಣಿಸಿದ್ದಾರೆ. ಹೀಗೆ ಯಾವಾಗಲೂ ಭಿನ್ನ ಭಿನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಭೂಮಿಕಾ ಬಸವರಾಜ್ ಅವರಿಗೆ ಮುಂದಿನ ದಿನಗಳಲ್ಲಿ ಸಿನಿಮಾ ಅಥವಾ ಧಾರವಾಹಿಗಳಲ್ಲಿ ಅವಕಾಶ ಸಿಕ್ಕರೆ ಅದರಲ್ಲಿ ಯಾವುದೇ ಡೌಟ್ ಇಲ್ಲ.
ಯಾಕಂದರೆ ಈ ಹಿಂದೆ ಇದೇ ವಿಡಿಯೋ ಡಬ್ ಸ್ಮ್ಯಾಷ್ ಮಾಡಿದ್ದ ಮೇಘ ಶೆಟ್ಟಿ, ಧನುಶ್ರಿ, ಗೀತಾ ಸೀರಿಯಲ್ ನಟಿ ಭವ್ಯಾ ಗೌಡ, ನಿವೇದಿತಾ ಗೌಡ ಇವರೆಲ್ಲಾ ಧಾರವಾಹಿ ಹಾಗೂ ಬಿಗ್ ಬಾಸ್ ನಂತಹ ಶೋಗಳಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.ಇದೇ ರೀತಿ ನೋಡಲು ಸುಂದರವಾಗಿರುವ ಹಾಗೂ ಟ್ಯಾಲೆಂಟೆಡ್ ಆಗಿರುವ ಭೂಮಿಕಾ ಬಸವರಾಜ್ ಅವರಿಗೂ ಉತ್ತಮ ಅವಕಾಶಗಳು ಕೂಡಿ ಬರಲಿ ಎಂದು ನಾವು ಹಾರೈಸೋಣ. ನಿಮಗೆ ಭೂಮಿಕಾ ಬಸವರಾಜ್ ಅವರ ಚಾಲೆಂಜಿಂಗ್ ಡ್ಯಾನ್ಸ್ ನೋಡಿ ಹೇಗನ್ನಿಸಿತು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.