ಸ್ನೇಹಿತರೆ, ಪ್ರಿಯಾಂಕಾ ಉಪೇಂದ್ರ ಅವರ ಬಗ್ಗೆ ಎಲ್ಲರಿಗೂ ಗೊತ್ತು ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಇಲ್ಲಿಯೇ ಕನ್ನಡ ಕಲಿತು ಕನ್ನಡಿಗರೇ ಆಗಿ ಹೋಗಿರುವ ನಟಿ ಇವರು. ಉಪೇಂದ್ರ ಅವರನ್ನ ಪ್ರೀತಿಸಿ ಮದುವೆಯಾಗಿ ಕರ್ನಾಟಕದಲ್ಲಿಯೇ ಉಳಿದುಕೊಂಡರು. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಂಕ ಉಪೇಂದ್ರ ಇವತ್ತಿಗೂ ಕೂಡ ಬ್ಯುಸಿ ಆಗಿರುವ ನಟಿ.
ಪ್ರಿಯಾಂಕ ಉಪೇಂದ್ರ ಅತ್ಯಂತ ಸುಂದರವಾಗಿರುವ ನಟಿ. ಗ್ಲಾಮರಸ್ ಪಾತ್ರಕ್ಕೂ ಸೈ. ಟ್ರೆಡಿಶನಲ್ ಪಾತ್ರಕ್ಕೂ ಸೈ ಎನ್ನುವಂತಹ ನಟಿ. ಅತ್ಯಂತ ಸಿಂಪಲ್ ಆಗಿರುವ ಪಾತ್ರದಿಂದ ಹಿಡಿದು ಈಗಿನ ಯುವತಿಯರು ನಾಚುವಷ್ಟು ಹಾಟ್ ಲುಕ್ ನಲ್ಲಿಯೂ ಕೂಡ ಪ್ರಿಯಾಂಕ ಉಪೇಂದ್ರ ಬಹಳ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ.
ತಾವು ಯಾವುದೇ ಪಾತ್ರ ಮಾಡಿದರು ಆ ಪಾತ್ರಕ್ಕೆ ತಕ್ಕ ಹಾಗೆ ಇರುತ್ತೇನೆ ಎಂದು ಹೇಳಿಕೊಳ್ಳುವ ಪ್ರಿಯಾಂಕ ಉಪೇಂದ್ರ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಲ್ಲ ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಲ್ಲ ಸಿನಿಮಾ ನೆನಪಿಗೆ ಬಂದರೆ ರವಿಚಂದ್ರನ್ ಹಾಗೂ ಪ್ರಿಯಾಂಕ ಉಪೇಂದ್ರ ಅವರ ಬೆಸ್ಟ್ ಕಾಂಬಿನೇಷನ್ ಕಣ್ಣ ಮುಂದೆ ಬರುತ್ತೆ. ಈ ಸಿನಿಮಾದಲ್ಲಿ ಪ್ರಿಯಾಂಕ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.
ಈ ಸಿನಿಮಾದ ನಿರ್ಮಾಣದ ಸಮಯದಲ್ಲಿಯೇ ಪ್ರಿಯಾಂಕ ಉಪೇಂದ್ರ ಅವರನ್ನು ಮದುವೆಯಾಗಿದ್ದಾರೆ. ಮಲ್ಲ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಓಪನ್ ಆಗಿ, ಬೋಲ್ಡ್ ಆಗಿ ನಟಿಸಿರುವ ಪ್ರಿಯಾಂಕ ಅವರ ಬಗ್ಗೆ ಜನ ನಾನಾ ರೀತಿಯಲ್ಲಿ ಮಾತನಾಡಿದರು. ರವಿಚಂದ್ರನ್ ಅವರು ಪ್ರಿಯಾಂಕ ಅವರನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡಿದ್ದಾರೆ ಎಂದು ಉಪೇಂದ್ರ ಅವರ ಕಿವಿ ಚುಚ್ಚಿದ್ರು.
ಈ ಸಂದರ್ಭದಲ್ಲಿ ಉಪೇಂದ್ರ ಅವರು ಸ್ವಲ್ಪ ವಿಚಲಿತರಾಗಿರುವುದು ಕೂಡ ನಿಜ. ಪ್ರಿಯಾಂಕ ಅವರು ಈ ಸಿನಿಮಾದಲ್ಲಿ ನಟಿಸುವಾಗ ಉಪೇಂದ್ರ ಅವರನ್ನ ಕೇಳಿಯೇ ನಟಿಸಿದ್ದು ಆದರೂ ಸಿನಿಮಾ ರಿಲೀಸ್ ಆದ ಬಳಿಕ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಈ ಸಮಯದಲ್ಲಿ ಜನರು ಆಡಿರುವ ಕೆಲವು ಮಾತುಗಳು ಪ್ರಿಯಾಂಕ ಉಪೇಂದ್ರ ಅವರನ್ನ ಹರ್ಟ್ ಮಾಡಿತ್ತು. ಈ ಬಗ್ಗೆ ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ನಾನು ಮಲ್ಲ ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೆ ಇದರ ಬಗ್ಗೆ ನನಗೆ ಪಶ್ಚಾತಾಪವೇನು ಇಲ್ಲ. ಆದರೆ ಆ ಆರು ತಿಂಗಳು ನಾನು ಸ್ವಲ್ಪ ಡಿಸ್ಟರ್ಬ್ ಆಗಿದ್ದೆ. ಜನ ಆಗ ನನ್ನನ್ನೇ ಟಾರ್ಗೆಟ್ ಮಾಡಿದ್ರು. ನಾನು ಹೆಚ್ 2 ಓ ಸಿನಿಮಾದಲ್ಲಿಯೂ ಕೂಡ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದೆ ಅದರ ಬಗ್ಗೆ ಯಾರು ಮಾತನಾಡಲಿಲ್ಲ. ಆದರೆ ಮಲ್ಲ ಬಗ್ಗೆ ಮಾತನಾಡಿದರು. ನಾನು ಅಬ್ರಾಡ್ ನಲ್ಲಿ ಬೆಳೆದಿದ್ದು ಹಾಗಾಗಿ ನನಗೆ ಇದು ದೊಡ್ಡ ವಿಷಯ ಎನಿಸಲಿಲ್ಲ.
ನಿಜ ಹೇಳಬೇಕು ಅಂದ್ರೆ ನಾನು ಆ ಸಿನಿಮಾದಲ್ಲಿ ಚೆನ್ನಾಗಿಯೇ ಕಾಣುತ್ತಿದ್ದೆ. ರವಿ ಸರ್ ಜೊತೆ ಸಿನಿಮಾ ಮಾಡೋದಕ್ಕೆ ಖುಷಿ ಇದೆ. ಅವರು ಅತ್ಯುತ್ತಮ ನಿರ್ಮಾಪಕ. ಈಗಲೂ ಅವಕಾಶ ಸಿಕ್ಕರೆ ನಾನು ರವಿ ಸರ್ ಜೊತೆ ಮತ್ತೆ ನಟಿಸುತ್ತೇನೆ. ಮದುವೆಯ ನಂತರವೂ ಕ್ರೇಜಿ ಸ್ಟಾರ್ ಸಿನಿಮಾದಲ್ಲಿಯೂ ರವಿ ಸರ್ ಜೊತೆ ಅಭಿನಯಿಸಿದ್ದೇನೆ. ಇದಕ್ಕೆ ಉಪೇಂದ್ರ ಅವರಿಂದಲೂ ಯಾವುದೇ ವಿರೋಧ ಇಲ್ಲ. ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೂ ಜನ ಆ ಸಮಯದಲ್ಲಿ ನನ್ನನ್ನು ಟಾರ್ಗೆಟ್ ಮಾಡಿದ್ದಕ್ಕೆ ಬೇಸರ ಇದೆ. ಎಂದು ಮಲ್ಲ ನಾಯಕಿ ಪ್ರಿಯಾಂಕ ಉಪೇಂದ್ರ ಹೇಳಿಕೊಂಡಿದ್ದಾರೆ.