ನಾವು ನಮ್ಮ ಸುತ್ತಮುತ್ತ ಸಾಕಷ್ಟು ವಿಸ್ಮಯಗಳನ್ನು ನೋಡಿಕೊಂಡೆ ಬಂದಿದ್ದೇವೆ ಎಷ್ಟು ವಿಷಯಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ ಹೀಗೂ ಆಗುವುದಕ್ಕೆ ಸಾಧ್ಯನಾ ಅಂತ ಉದ್ಘಾರ ಎತ್ತುತ್ತೇವೆ. ನಾಲ್ಕು ಕಾಲಿನ ಬದಲು ಎರಡೇ ಕಾಲು ಇರುವ ಹಸು, ಕೈಕಾಲು ಇಲ್ಲದ ಮಗು, ಹುಟ್ಟುತ್ತಲೇ ಮಾತನಾಡುವ ಮಗು ಹೀಗೆ ಎಷ್ಟೆಷ್ಟು ವಿಚಿತ್ರಗಳನ್ನು ನೋಡುತ್ತೇವೆ, ಆದರೆ ಈಗ ನಾವು ಹೇಳುವ ಘಟನೆಯನ್ನು ನೀವು ಹಿಂದೆಂದೂ ಕೇಳಿರಲಿಕ್ಕಿಲ್ಲ ನೋಡಿರಲು ಸಾಧ್ಯವಿಲ್ಲ.
ಮಗು ಹುಟ್ಟಿದ ಮೇಲೆ ತಂದೆ ಯಾರು ಅಂತ ತಾಯಿಯೇ ಬಹಿರಂಗಪಡಿಸಬೇಕು. ಇಲ್ಲವಾದ್ರೆ ಇದನ್ನ ಊಹಿಸೋದು ಕಷ್ಟ. ಹಾಗಂತ ಯಾರು ಮಗು ಆದ ಮೇಲೆ ಅಪ್ಪ ಅಮ್ಮನ ಪರೀಕ್ಷೆ ಮಾಡಲ್ಲ ಹೋಲಿಕೆಯಲ್ಲಿಯೇ ಅಪ್ಪ ಅಮ್ಮ ಯಾರು ಅನ್ನೋದು ಕೂಡ ಸಹಜವಾಗಿಯೇ ತಿಳಿಯುತ್ತೆ. ಆದರೆ ಇದೆಲ್ಲಾ ಸಹಜತೆಗಳನ್ನು ಮೀರಿದ ಘಟನೆಯೊಂದು ದೂರದ ಬ್ರೆಜಿಲ್ ನಲ್ಲಿ ನಡೆದಿದೆ.
9 ತಿಂಗಳು ಎರಡು ಪುಟ್ಟ ಕಂದಮ್ಮನನ್ನು ಹೊಟ್ಟೆಯಲ್ಲಿ ಹೊತ್ತ 19 ವರ್ಷದ ಯುವತಿ ಇತ್ತೀಚಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಹೀಗೆ ಮುದ್ದಾದ ಎರಡು ಅವಳಿ ಮಕ್ಕಳನ್ನ ನೋಡಿ ಕುಟುಂಬಸ್ಥರು ಹಾಗೂ ಮಕ್ಕಳನ್ನು ಹೆತ್ತ ತಾಯಿ ಬಹಳ ಸಂತೋಷಪಟ್ಟರು. ಆದರೆ ಇಲ್ಲಿ ಊಹಿಸಲೇ ಆದಂತಹ ಒಂದು ವಿಚಿತ್ರ ನಡೆದಿದೆ. ಏನು ಗೊತ್ತಾ? ಹೇಳ್ತಿವಿ ಮುಂದೆ ಓದಿ.
ಇಬ್ಬರೂ ಅವಳಿ ಮಕ್ಕಳ ತಂದೆಯರು ಮಾತ್ರ ಬೇರೆ ಬೇರೆ. ಹೌದು ಒಂದೇ ದಿನ ಇಬ್ಬರು ಪುರುಷರ ಜೊತೆ ಲೈಂ-ಗಿಕ ಕ್ರಿಯೆ ನಡೆಸಿದರೆ ಪರಿಣಾಮ ಇದು ಅಂತ ವೈದ್ಯರು ತಿಳಿಸಿದ್ದಾರೆ. ಆಕೆ ಋತುಚಕ್ರ ಮುಗಿದ ಕೆಲವೇ ದಿನಗಳಲ್ಲಿ ಇಬ್ಬರು ಪುರುಷರ ಜೊತೆಗೆ ಒಂದೇ ದಿನ ದೈ-ಹಿಕ ಸಂ-ಬಂಧ ಬೆಳೆಸಿದ್ದಳು. ಇನ್ನು ಈ ವಿಷಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಘಟನೆಯನ್ನು ವೈದ್ಯಕೀಯ ಭಾಷೆಯಲ್ಲಿ ಹೀಟರೋಪಟರ್ನಲ್ ಸೂಪರ್ ಫೇಕಂಡೇಶನ್ ಎಂದು ಕರೆಯಲಾಗುತ್ತೆ ಇವರಿಗೆ ವಿಶ್ವದಲ್ಲಿ ಕೇವಲ 20 ಮಂದಿ ಈ ರೀತಿ ವಿಸ್ಮಯವನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಮಗು ಹುಟ್ಟಿದಾಗ ಈ ವಿಷಯ ಯಾರಿಗೂ ತಿಳಿದಿರಲಿಲ್ಲ ಆದರೆ ತನ್ನ ಮಕ್ಕಳ ಮೊದಲ ಹುಟ್ಟು ಹಬ್ಬದ ಸಮಯದಲ್ಲಿ ತಾಯಿಗೆ ಈ ಮಕ್ಕಳ ತಂದೆ ಯಾರು ಎಂದು ತಿಳಿದುಕೊಳ್ಳುವ ಹಂಬಲವಾಗಿತ್ತು ಆದ್ದರಿಂದ ಡಿಎನ್ಎ ಪರೀಕ್ಷೆ ಮಾಡಿಸಿದ್ದಾರೆ. ಇದು ವೈದ್ಯರಿಗೆ ಅಚ್ಚರಿಯ ಮೂಡಿಸಿತು ಯಾಕಂದ್ರೆ ಇಬ್ಬರು ಮಕ್ಕಳ ಡಿಎನ್ಎ ಪರೀಕ್ಷೆ ಮಾಡಿಸಿದಾಗ ಇಬ್ಬರೂ ಬೇರೆ ಬೇರೆ ವ್ಯಕ್ತಿಯ ಮಕ್ಕಳು ಎಂಬುದು ತಿಳಿದು ಬಂದಿದೆ.
ಇದು ವೈದ್ಯರಲ್ಲಿಯೇ ಬಹಳ ಆಶ್ಚರ್ಯ ಮೂಡಿಸಿತು ಹಾಗಾಗಿ ಆ ಯುವತಿಯನ್ನು ಕರೆದು ಚರ್ಚೆ ಮಾಡಿದಾಗ ಇರುವ ಅಸಲಿಯತ್ತು ಹೊರ ಬಂದಿದೆ. ಆಕೆ ಒಂದೇ ದಿನ ಇಬ್ಬರು ವ್ಯಕ್ತಿಯ ಜೊತೆಗೆ ಸಂ-ಭೋಗ ನಡೆಸಿರುವುದಾಗಿ ಹೇಳಿದ್ದಾಳೆ. ಈ ಸುದ್ದಿ ತಿಳಿದ, ಆಕೆಯ ಜೊತೆ ಲೈಂ-ಗಿ-ಕ ಕ್ರಿಯೆ ನಡೆಸಿದ್ದ ಇಬ್ಬರೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸುದ್ದಿ ದೇಶ ಹಾಗೂ ವಿದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.