PhotoGrid Site 1668136854492

ಅವಳಿ ಜವಳಿ ಮಕ್ಕಳಿಗೆ ವಿಶೇಷವಾದ ಹೆಸರಿಟ್ಟ ನಟಿ ಅಮೂಲ್ಯ ದಂಪತಿ! ಡಿ ಬಾಸ್ ಕಡೆಯಿಂದ ಬಂತು ಅತೀ ದುಬಾರಿ ಉಡುಗೊರೆ, ವಾವ್ ಏನು ನೋಡಿ!!

ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಅಮೂಲ್ಯ ಮುದ್ದಾದ ನಟಿ. ಅವರನ್ನು ಗೋಲ್ಡನ್ ಕ್ವೀನ್ ಎಂದೇ ಕರೆಯಲಾಗುತ್ತೆ. ಕನ್ನಡದಲ್ಲಿ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ ಅಮೂಲ್ಯ ಅವರು ಕನ್ನಡಿಗರ ಅಚ್ಚುಮೆಚ್ಚಿನ ನಟಿ. ಇದೀಗ ಮದುವೆಯಾಗಿ ಅಮೂಲ್ಯಾ ಅವರು ತಾಯ್ತನದ ಸುಖ ಅನುಭವಿಸುತ್ತಿದ್ದಾರೆ. ಅಮೂಲ್ಯ ಅವರಿಗೆ ಮುದ್ದಾದ ಎರಡು ಅವಳಿ ಮಕ್ಕಳು ಜನಿಸಿದ್ದಾರೆ.

ನಿನ್ನೆ ಆ ಮಕ್ಕಳ ನಾಮಕರಣ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಅದ್ದೂರಿಯಾಗಿ ನೆರವೇರಿಸಲಾಗಿದೆ. ಕೊನೆಗೂ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ ಅಮೂಲ್ಯ ಜಗದೀಶ್ ದಂಪತಿ. ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ರು ಅಮೂಲ್ಯ. ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿರುವ ಅಮೂಲ್ಯ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಹೆಚ್ಚು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಅಮೂಲ್ಯ ಅವರ ಮುದ್ದು ಮುದ್ದಾದ ಮಾತು ಕನ್ನಡಿಗರಿಗೆ ಬಹಳ ಇಷ್ಟವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವೈವಾಹಿಕ ಜೀವನ ಆರಂಭಿಸಿದ ಅಮೂಲ್ಯ ಸಿನಿ ರಂಗದಿಂದ ದೂರ ಉಳಿದರು. ಉದ್ಯಮಿ ಜಗದೀಶ್ ಅವರನ್ನು ಮದುವೆಯಾದ ಬಳಿಕ ಅಮೂಲ್ಯ ಸಂಸಾರಿಕ ಜೀವನದಲ್ಲಿಯೇ ಬ್ಯುಸಿಯಾಗಿದ್ದರು. ಕೆಲವು ತಿಂಗಳ ಹಿಂದಷ್ಟೇ ಅಮೂಲ್ಯ ಅವರಿಗೆ ಅವಳಿ ಮಕ್ಕಳ ಜನನವಾಗಿತ್ತು.

ಆದರೆ ಆ ಮಕ್ಕಳಿಗೆ ಇನ್ನೂ ನಾಮಕರಣ ಮಾಡಿರಲಿಲ್ಲ ಹಾಗಾಗಿ ಅಮೂಲ್ಯ ಅವರ ಅಭಿಮಾನಿಗಳು ಮಕ್ಕಳ ಹೆಸರನ್ನ ತಿಳಿಸುವಂತೆ ಆಗಾಗ ಕೇಳುತ್ತಿದ್ದರು. ಇದೀಗ ಅಮೂಲ್ಯ ಹಾಗೂ ಜಗದೀಶ್ ಜೋಡಿ ಮಕ್ಕಳ ಹೆಸರನ್ನು ರಿವಿಲ್ ಮಾಡಿದೆ. ಅಮೂಲ್ಯ ಅವರ ಮುದ್ದಾದ ಮಕ್ಕಳ ಹೆಸರು ಏನು ಗೊತ್ತಾ? ಹೌದು, ನಟಿ ಅಮೂಲ್ಯ ಅವರ ಸೀಮಂತ ಶಾಸ್ತ್ರಕ್ಕೂ ಸ್ಯಾಂಡಲ್ವುಡ್ ನ ಎಲ್ಲಾ ತಾರೆಯರು ಬಂದು ಶುಭ ಹಾರೈಸಿದ್ರು.

ಆ ಸಂದರ್ಭದಲ್ಲಿ ನಟಿ ರಮ್ಯಾ ಅಮೂಲ್ಯಾ ಅವರಿಗೆ ದುಬಾರಿ ಸೀರೆ ಗಿಫ್ಟ್ ಕೊಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಇನ್ನು ಸೀಮಂತ ಶಾಸ್ತ್ರ, ಅದರ ನಂತರ ಬೇಬಿ ಬಂಪ್ ಫೋಟೋ ಶೂಟ್ ಹಾಗೂ ಮಕ್ಕಳು ಜನಿಸಿದ ನಂತರವೂ ಕೂಡ ಅಮೂಲ್ಯ ಫೋಟೋ ಶೂಟ್ ಮಾಡಿಸಿದ್ರು. ಅಮೂಲ್ಯ ಅವರ ಎಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪೋಟೋಗಳಿಗೆ ಲೈಕ್ ಗಳ ಸುರಿಮಳೆಯೇ ಬಂದಿದ್ದವು.

ಇದೀಗ ಅಮೂಲ್ಯ ಅವರ ಮಕ್ಕಳ ನಾಮಕರಣ ಶಾಸ್ತ್ರಕ್ಕೆ ಇಡಿ ಸ್ಯಾಂಡಲ್ವುಡ್ ತಾರೆಯರು ಸಾಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಡಿ ಬಾಸ್ ಕೂಡ ನಾಮಕರಣಕ್ಕೆ ಬಂದು ದಂಪತಿಗಳಿಗೆ ಹಾಗೂ ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಅಮೂಲ್ಯ ಹಾಗೂ ಜಗದೀಶ್ ತಮ್ಮ ಮುದ್ದಾದ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್ ಎಂದು ಹೆಸರನ್ನ ಇಟ್ಟಿದ್ದಾರೆ. ಮಕ್ಕಳ ಹೆಸರನ್ನು ಕೇಳಿದ ನಂತರ ಅಮೂಲ್ಯ ಅಭಿಮಾನಿಗಳು ಕಮೆಂಟ್ ಮಾಡಿ ವಿಶ್ ಮಾಡಿದ್ದಾರೆ. ನೀವು ಕೂಡ ತಪ್ಪದೇ ಅಮೂಲ್ಯಾ ಅವರ ಮಕ್ಕಳಿಗೆ ವಿಶ್ ಮಾಡಿ ಕಮೆಂಟ್ ಮಾಡಿ.

Leave a Reply

Your email address will not be published. Required fields are marked *