PhotoGrid Site 1669276850207

ಅವತ್ತು ವಿಷ್ಣು ಸರ್ ನನ್ನನ್ನ ಎಚ್ಚರಿಸದೆ ಇದ್ರೆ ಹೋಟೆಲ್ ಒಂದರಲ್ಲಿ ನನ್ನ ಗತಿ ಏನಾಗುತ್ತಿತ್ತೋ, ಅಂದು ನಡೆದ ಆ ಒಂದು ಘಟನೆಯನ್ನು ಹೇಳಿದ ನಟಿ ಭಾವನಾ ನೋಡಿ!! 

ಸುದ್ದಿ

ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ನಟಿ ಭಾವನ, ಕನ್ನಡಿಗರ ಮನೆ ಮಗಳು ಎಂದೇ ಖ್ಯಾತರಾಗಿದ್ದಾರೆ. ಭಾವನ ಅವರು ಇಂತಿ ನಿನ್ನ ಪ್ರೀತಿಯ ಎನ್ನುವ ಸಿನಿಮಾದಲ್ಲಿ ವಿಭಿನ್ನ ಪಾತ್ರವನ್ನು ನಿಭಾಯಿಸುವುದರ ಮೂಲಕ ಚಲನಚಿತ್ರ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ರು. ಇದಾದ ಬಳಿಕ ಇತರ ಭಾಷೆಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಭಾವನ ಅವರು ಸಿನಿಮಾ ಅಷ್ಟೇ ಅಲ್ಲ ಇತ್ತೀಚಿಗೆ ಸಿನಿಮಾದ ಜೊತೆಗೆ ಧಾರವಾಹಿಗಳಲ್ಲಿಯೂ ಕೂಡ ಇವರು ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಭಾವನ ತಮ್ಮ ಜೀವನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ತನ್ನ ಜೀವನದ ಒಂದು ಕಹಿ ಘಟನೆ ಹಾಗೂ ಅದರಿಂದ ತಾನು ಪಾರಾದ ವಿಷಯದ ಬಗ್ಗೆ ಹೇಳಿಕೊಂಡಿದ್ದಾರೆ.

ಅದರಲ್ಲೂ ತಾನು ಕಷ್ಟದಲ್ಲಿದ್ದ ಸಮಯದಲ್ಲಿ ವಿಷ್ಣು ವರ್ಧನ್ ಅವರು ತಮ್ಮ ಕೈ ಹಿಡಿದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನಟಿ ಭಾವನಾ ಭರತನಾಟ್ಯ ಕಲಾವಿದೆ. ಸಂಪ್ರದಾಯಸ್ಥ ಕುಟುಂಬದಿಂದ ಬಂದವರು. ಆದರೂ ಸಿನಿಮಾಗಳಲ್ಲಿ ವಿಭಿನ್ನ ಶೇಡ್ಸ್ ಇರುವ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಬೇರೆ ಬೇರೆ ಪಾತ್ರಗಳನ್ನು ಒಪ್ಪಿಕೊಂಡ ಭಾವನಾ ಸಾಕಷ್ಟು ಬೋಲ್ಡ್ ಪಾತ್ರಗಳನ್ನೂ ಕೂಡ ಆಯ್ಕೆ ಮಾಡಿಕೊಂಡು ಅದರಲ್ಲಿಯೂ ಕೂಡ ಅದ್ಭುತವಾಗಿಯೇ ನಟಿಸಿದ್ದಾರೆ. ಸಿನಿಮಾ ರಂಗಕ್ಕೆ ಭಾವನ ಪಾದಾರ್ಪಣೆ ಮಾಡಿದ ನಂತರ ಸಿನಿಮಾವನ್ನ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡ್ತಾ ಇದ್ರು ಎಲ್ಲರ ಜೊತೆಗೆ ಹೆಚ್ಚು ಹೆಚ್ಚು ಬೆರೆಯುವುದು ಎಲ್ಲರಂತೆ ಸಾಮಾನ್ಯವಾಗಿ ಇರುವುದನ್ನು ರೂಢಿ ಮಾಡಿಕೊಂಡಿದ್ದರು.

ಆದರೆ ಕೆಲವೊಮ್ಮೆ ಅವರ ಈ ಸರಳತೆಯನ್ನೂ ಕೆಲವು ನಿರ್ಮಾಪಕರು ಮಿಸ್ ಯೂಸ್ ಮಾಡಿಕೊಂಡಿದ್ದಾರೆ. ತಮಿಳು ಸಿನಿಮಾದಲ್ಲಿ ನಟಿಸುವಾಗಲೂ ಕೂಡ ಬಹಳ ಎಚ್ಚರಿಕೆಯಿಂದ ಇದ್ದೆ. ವಿಷ್ಣು ಸರ್ ಹೇಳಿ ಕೊಟ್ಟ ಮಾತು ಎಲ್ಳಾ ಸಮಯದಲ್ಲಿಯೂ ಹೆಲ್ಪ್ ಆಗಿದೆ ಎಂದು ಆ ದಿನಗಳನ್ನು ನೆನಪಿಸಿಕೊಂಡರು.

ಒಂದು ಜಾಹೀರಾತು ಶೂಟ್ ನಲ್ಲಿ ನನ್ನನ್ನು ರೆಡ್ ಆಗಿರುವಂತಹ ಹೋಟೆಲ್ ನಲ್ಲಿ ಹಾಕಿಬಿಟ್ಟಿದ್ದರು ಆಗ ನಾನು ವಿಷ್ಣು ಸರ್ ಅವರ ಮಾತುಗಳನ್ನು ನೆನಪಿಸಿಕೊಂಡು ಮುಂದೆ ಇಂತಹ ಅ-ಚಾ-ತು-ರ್ಯ-ಗಳು ನಡೆಯದೆ ಇರುವಂತೆ ಎಚ್ಚರಿಕೆವಹಿಸಿದೆ. ವಿಷ್ಣು ಸರ್ ನನ್ನನ್ನು ಕರೆದು ನೀನು ಹೀಗೆ ಇದ್ರೆ ಆಗಲ್ಲ ನಿನ್ನದೇ ಆದ ಡಿಸಿಪ್ಲಿನ್ ಬೆಳೆಸಿಕೊಳ್ಳಬೇಕು.

ಕೆಲವೊಂದು ವಿಷಯದಲ್ಲಿ ನನಗೆ ಹೀಗೆ ಆಗಬೇಕು ಎಂದು ಹೇಳಬೇಕು ಇಲ್ಲವಾದರೆ ನಿನಗೆ ಸಮಸ್ಯೆ ಆಗುತ್ತದೆ. ಒಬ್ಬಳು ಹೆಣ್ಣು ಹೇಗಿದ್ದಾಳೆ ಎನ್ನುವುದನ್ನು, ಆಕೆಯ ಗುಣವನ್ನು ಯಾರು ನೋಡುವುದಿಲ್ಲ ಆಕೆ ಎಲ್ಲಿಂದ ಹೊರ ಬರುತ್ತಿದ್ದಾಳೆ ಎನ್ನುವುದನ್ನು ಗಮನಿಸುತ್ತಾರೆ ಹಾಗಾಗಿ ನೀನು ಎಚ್ಚರಿಕೆಯಿಂದ ಇರಬೇಕು.

ಅಂತ ವಿಷ್ಣು ಸರ್ ಭಾವನಾ ಅವರಿಗೆ ಸೂಕ್ತವಾದ ಸಲಹೆ ನೀಡಿದರು ಇದು ನನ್ನ ಜೀವನದುದ್ದಕ್ಕೂ ತುಂಬಾನೇ ಹೆಲ್ಪ್ ಆಗಿದೆ ನಾನು ಅವರನ್ನು ಎಂದಿಗೂ ಮರೆಯೋದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ ನಟಿ ಭಾವನಾ. ನಿಮಗೆ ಈ ಸುದ್ದಿ ಇಷ್ಟವಾಗಿದ್ರೆ ತಪ್ಪದೇ ನಮಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *