ರಾಜಸ್ಥಾನದ ಚುರು ಜಿಲ್ಲೆಯ ಸದರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹೀಗೊಂದು ವಿಚಿತ್ರವಾದ ಕೇಸ್ ದಾಖಲಾಗಿದೆ. ಇದನ್ನು ಯಾರು ಊಹೆ ಮಾಡಲು ಸಾಧ್ಯವೇ ಇಲ್ಲ ಪ್ರೀತಿ ಎನ್ನುವುದು ಕುರುಡು ಅಂತಾರೆ. ಆದರೆ ಈ ಘಟನೆ ನೋಡಿದ್ರೆ ಪ್ರೀತಿಸಿದವರೇ ಕುರುಡು ಎಂದು ಅನಿಸುತ್ತೆ ಪ್ರೀತಿಗೆ ಯಾವ ವಯಸ್ಸಿನ ಮಿತಿ ಇಲ್ಲವಂತೆ, ಆದರೆ ಇಷ್ಟೊಂದು ಪ್ರೀತಿ ಅನ್ನೋದು ಜನರನ್ನ ವಶಪಡಿಸಿಕೊಳ್ಳುತ್ತಾ ಅಂತ ಈ ಘಟನೆಯ ಬಗ್ಗೆ ತಿಳಿದರೆ ನಿಮಗೆ ಅನಿಸುತ್ತೆ.
ಬನ್ನಿ ಆ ಘಟನೆಯ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತೇವೆ. ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ರಾಜಸ್ಥಾನದ ಚೂರು ಗ್ರಾಮದ ಬಿನಾರಸ್ ನಲ್ಲಿ. ಕಳೆದ ಹತ್ತು ವರ್ಷಗಳ ಹಿಂದೆ ಆಕೆಯನ್ನು ಮದುವೆಯಾಗಿದ್ದ ವ್ಯಕ್ತಿ ಇದೀಗ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಒಂದನ್ನು ದಾಖಲಿಸಿದ್ದಾರೆ. ಆಕೆಯ ಹೆಸರು ಪೂನಂ ಅವಳಿಗೆ 35 ವರ್ಷ ವಯಸ್ಸು ಇತ್ತೀಚಿಗೆ ತನ್ನ ಸೋದರ ಅಳಿಯನ ಜೊತೆ ಸಂಬಂಧ ಬೆಳೆಸಿಕೊಂಡಿದ್ದರು.
ಇದೇನು ವಿಶೇಷವಲ್ಲ ಅಂತ ನೀವು ಹೇಳಬಹುದು. ಆದರೆ ಆಕೆಯ ಸೋದರಳಿಯನಿಗೆ ಕೇವಲ 17 ವರ್ಷ ವಯಸ್ಸು. ಅಪ್ರಾಪ್ತ ವಯಸ್ಸಿನ ಸೋದರಳಿಯನ ಜೊತೆ 35 ವರ್ಷದ ವಿವಾಹಿತ ಮಹಿಳೆ ಪೂನಂ ಅ-ಕ್ರ-ಮ ಸಂ-ಬಂ-ಧ ಬೆಳೆಸಿದಳು. ಕೊನೆಗೆ ತಾನು ಆತನನ್ನೇ ಮದುವೆ ಆಗುವುದಾಗಿ ಕುಟುಂಬದವರ ಬಳಿ ಹೇಳಿದ್ದಾಳೆ. ಕುಟುಂಬಸ್ಥರು ಪತಿ ಎಲ್ಲರೂ ಸೇರಿ ಎಷ್ಟೇ ತಡೆದರು ಅವರಿಬ್ಬರನ್ನು ದೂರ ಮಾಡಲು ಮಾತ್ರ ಸಾಧ್ಯವಾಗಲೇ ಇಲ್ಲ.
ಇತ್ತೀಚೆಗೆ ಪೂನಂ ತಾನು ತನ್ನ ಸೋದರಳಿಯನ್ನು ಪ್ರೀತಿಸುತ್ತಿದ್ದೇನೆ ಅವನನ್ನ ಮದುವೆಯಾಗಿ ಅವನ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾಳೆ ಇದಕ್ಕೆ ಕುಟುಂಬದವರ ವಿರೋಧ ಇತ್ತು. ಆದರೂ ಪೂನಂ ಮಾತ್ರ ತನ್ನ ನಿರ್ಧಾರ ಬದಲಿಸಿಕೊಳ್ಳಲು ಸಿದ್ಧಲಿರಲಿಲ್ಲ. ಕೊನೆಗೆ ಆಕೆಯ ಪತಿ ಸದರ್ ಪೊಲೀಸ್ ಠಾಣೆಯಲ್ಲಿ ಈ ವಿಷಯಕ್ಕೆ ಸಂಬಂಧ ಪಟ್ಟ ಹಾಗೆ ದೂರು ನೀಡಿದ್ದಾನೆ.
ಈ ಮದುವೆ ಕಾನೂನಾತ್ಮಕವಾಗಿ ಸರಿಯಾಗಿ ಇಲ್ಲ. ನನಗೂ ಪೂನಂಗೂ ವಿ-ಚ್ಛೇ-ದ-ನ ಆಗಿಲ್ಲ. ಹಾಗಾಗಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಪೂನಂ ಹಾಗೂ ಆಕೆಯ ಸೋದರ ಅಳಿಯನನ್ನು ತರಾಟೆಗೆ ತೆಗೆದುಕೊಳ್ಳಬೇಕು ಹಾಗೂ ನನಗೆ ನ್ಯಾಯ ಒದಗಿಸಿ ಕೊಡಬೇಕು ಅಂತ ಪೊಲೀಸ್ ರ ಮೊರೆ ಹೋಗಿದ್ದಾನೆ. ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.