ಬಿಗ್ ಬಾಸ್ ಕನ್ನಡ ಸೀಸನ್ 9 ಯಶಸ್ವಿಯಾಗಿ ಮೊದಲ ವಾರ ಕಂಪ್ಲೀಟ್ ಮಾಡಿದೆ. ಬೈಕ್ ರೈಡರ್ ಐಶ್ವರ್ಯ ಪಿಸ್ಸೆ ತಮ್ಮ ರೈಡಿಂಗ್ ಅರ್ಧದಲ್ಲಿಯೇ ಮುಗಿಸಿ ಮೊದಲನೇ ವಾರಕ್ಕೆ ಮನೆಯಿಂದ ಹೊರ ಹೋಗಿದ್ದಾರೆ. ಇದೀಗ 2ನೇ ವಾರಕ್ಕೆ ಬಿಗ್ ಬಾಸ್ ಶೋ ಕಾಲಿರಿಸಿದ್ದು, ಉಳಿದಿರುವ ಈ ಎಲ್ಲಾ ಸ್ಪರ್ಧಿಗಳು ಬಹಳ ಉತ್ಸಾಹದಿಂದಲೇ ಆರಂಭವಾಗಿರುವ ಹೊಸ ಟಾಸ್ಕ್ ಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆ ಮನೋರಂಜನೆಯ ಅಂಗಳವಾಗಿದೆ.
ಇಲ್ಲಿರುವ ಪ್ರತಿಯೊಬ್ಬ ಸ್ಪರ್ಧೆಗಳು ತಮ್ಮ ವಿಶೇಷ ಟ್ಯಾಲೆಂಟ್ ಪ್ರದರ್ಶನ ಮಾಡುತ್ತಿದ್ದಾರೆ. ಈಗಾಗಲೇ ಹಾಸ್ಯ ನಟ ವಿನೋದ್ ಗೊಬ್ಬರಗಾಲ ಕಿಚ್ಚ ಸುದೀಪ್ ಅವರ ಬಳಿ ಚಪ್ಪಾಳೆಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಅರುಣ್ ಸಾಗರ್ ಏನೋ ಮಾಡಲು ಹೋಗಿ ಇನ್ನೇನೋ ಆಯ್ತು ಅನ್ನೋ ಹಾಗೆ ತಮ್ಮ ತಮಾಷೆಯಿಂದಲೇ ಕಿಚ್ಚ ಸುದೀಪ್ ಅವರ ಬಳಿ ಬುದ್ಧಿ ಹೇಳಿಸಿಕೊಳ್ಳುವಂಥಾಯ್ತು.
ಈ ಎಲ್ಲದರ ನಡುವೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಹವಾ ಜೋರಾಗಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಈಗಿರುವ ಈ ಎಲ್ಲಾ ಹುಡುಗೀರು ಬಹಳ ಸ್ಟ್ರೆಂತ್ ಹೊಂದಿದ್ದಾರೆ. ಫಿಸಿಕಲಿ ಹಾಗೂ ಮೆಂಟಲಿ ಬಹಳ ಸ್ಟ್ರಾಂಗ್ ಆಗಿರುವ ಮಹಿಳಾ ಸ್ಪರ್ಧಿಗಳೇ ಇರುವುದು ವಿಶೇಷ. ದೀಪಿಕಾ ದಾಸ್ ಅನುಪಮಾ ಗೌಡ, ಅಮೂಲ್ಯ ಗೌಡ ಸೇರಿದಂತೆ ಎಲ್ಲಾ ಮಹಿಳಾ ಸ್ಪರ್ಧಿಗಳು ಈಗಾಗಲೇ ಟಾಸ್ಕ್ ಮೂಲಕ ತಮ್ಮ ಸಾಮರ್ಥ್ಯದ ಪ್ರದರ್ಶನ ಮಾಡಿದ್ದಾರೆ.
ಇನ್ನು ಕಮಲಿ ಧಾರಾವಾಹಿಯ ಮೂಲಕ ಕನ್ನಡ ನಾಡಿನಲ್ಲಿ ಖ್ಯಾತಿಯನ್ನು ಗಳಿಸಿದ ನಟಿ ಅಮೂಲ್ಯ ಗೌಡ ಬಿಗ್ ಬಾಸ್ ಮನೆಗೆ ಪ್ರವೇಶ ನೀಡಿದ್ದು ಎರಡನೇ ವಾರಕ್ಕೆ ಯಶಸ್ವಿಯಾಗಿ ಕಾಲಿರಿಸಿದ್ದಾರೆ. ಮೊದಲ ವಾರ ದೀಪಿಕಾ ದಾಸ್ ಜೊತೆಗೆ ಜೋಡಿಯಾಗಿ ಟಾಸ್ಕ್ ಗಳನ್ನ ಮಾಡಿದ್ದ ಅಮೂಲ್ಯ ಗೌಡ, ದೀಪಿಕಾ ಅವರಿಗೆ ಸರಿಯಾದ ಸ್ಟ್ರೆಂತ್ ಎನ್ನುವಂತೆ ಎಲ್ಲಾ ಟಾಸ್ಕ್ ಕಂಪ್ಲೀಟ್ ಮಾಡುವಲ್ಲಿ ಸಹಕರಿಸಿದ್ರು.
ಇನ್ನು ಅಮೂಲ್ಯ ಗೌಡ ಮನೆಯಲ್ಲಿ ಎಲ್ಲರ ಜೊತೆಗೆ ಹೆಚ್ಚಾಗಿ ಮಾತನಾಡುವುದಿಲ್ಲ ಈ ಬಗ್ಗೆ ನಟಿ ಮಯೂರಿ ಅವರೊಂದಿಗೆ ಒಮ್ಮೆ ಚರ್ಚೆಯನ್ನು ಕೂಡ ಮಾಡಿದ್ದರು. ಮೊದಲ ವಾರ ನನಗೆ ಈ ಮನೆಯಲ್ಲಿ ಏನು ಸೆಟ್ ಆಗಿಲ್ಲ, ಹೇಗೋ ದೋಣಿ ಸಾಗುತ್ತಿದೆ ಅನ್ನುವಂತಹ ಮಾತುಗಳನ್ನು ಅಮೂಲ್ಯ ಗೌಡ ಆಡಿದ್ರು. ಆದರೆ ಟಾಸ್ಕ್ ವಿಚಾರ ಬಂದ್ರೆ ಮಾತ್ರ ಅಮೂಲ್ಯವಾದ ಎಲ್ಲಿಯೂ ಹಿಂದೆ ಉಳಿದಿಲ್ಲ ಎನ್ನುವುದು ವಿಶೇಷ.
ಅಂದಹಾಗೆ ಅಮೂಲ್ಯ ಅಪ್ಪ-ಅಮ್ಮನ ಮುದ್ದಿನ ಮಗಳು. ಕಮಲಿ ಧಾರವಾಹಿಯಲ್ಲಿ ಲಂಗ ದಾವಣಿ ಹಾಕಿ ಹಳ್ಳಿಯ ಹುಡುಗಿಯಂತೆ ಕಾಣುವ ಅಮೂಲ್ಯ ಗೌಡ ನಿಜ ಜೀವನದಲ್ಲಿ ಸಾಕಷ್ಟು ಮಾರ್ಡನ್. ರಿಲೇಶನ್ ಶಿಪ್ ಅಂದ್ರೆ ನನ್ನ ಅಪ್ಪ ಅಮ್ಮನ ಹಾಗೆ ಇರಬೇಕು ಅಂತ ತಂದೆ ತಾಯಿಯ ಬಗ್ಗೆ ಬಹಳ ಪ್ರೀತಿಯಿಂದ ಮಾತನಾಡುವ ಅಮೂಲ್ಯ ಗೌಡ ಇದೀಗ ಬಿಗ್ ಬಾಸ್ ಮನೆಯಲ್ಲಿ ತನ್ನ ತಂದೆ ತಾಯಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ತನ್ನ ಅಪ್ಪ ಅಮ್ಮನನ್ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತ ಕಣ್ಣೀರಿಟ್ಟಿದ್ದಾರೆ ಅಮೂಲ್ಯ ಗೌಡ. ಉಳಿದ ಸ್ಪರ್ಧಿಗಳು ಅಮೂಲ್ಯ ಅವರನ್ನು ಸಮಾಧಾನಪಡಿಸಿದರು. ಆದರೆ ಈ ಮನೆಯ ಫೀಲಿಂಗ್ ನಿಂದ ಹೊರಬಂದು ಬಿಗ್ ಬಾಸ್ ಗೆಲ್ಲುವಲ್ಲಿ ಹೆಜ್ಜೆ ಮುಂದಿಡ್ತಾರ ಅಮೂಲ್ಯ ಗೌಡ ಕಾದು ನೋಡಬೇಕು. ಸ್ನೇಹಿತರೆ ಅಮೂಲ್ಯಾ ಗೌಡ ನಿಮ್ಮ ನೆಚ್ಚಿನ ಸ್ಪರ್ಧಿ ಆಗಿದ್ರೆ ನಮಗೆ ತಮ್ಮದೇ ಕಮೆಂಟ್ ಮಾಡಿ ತಿಳಿಸಿ.