ಚಿಕ್ಕಮಂಗಳೂರಿನ ಹುಡುಗಿ ಅಶ್ವಿನಿ ಬಾಯಿ ಅವರ ಸಾವಿನ ವಿಚಾರ ಕರ್ನಾಟಕವನ್ನು ತಲ್ಲಣಗೊಳಿಸಿತ್ತು. ಸಾ-ಯುವ ವಯಸ್ಸಲ್ಲ ಅಕೆಯದ್ದು. ಇನ್ನೂ ಬದುಕಿ ಬಾಳಿ ಜೀವನದಲ್ಲಿ ಸಾಧಿಸುವ ಸಾಕಷ್ಟು ವಿಷಯಗಳು ಇದ್ದವು. ಆದರೆ ಆಗಲೇ ತನ್ನೆಲ್ಲ ಕನಸುಗಳಿಗೆ ತಿಲಾಂಜಲಿ ಇಟ್ಟು ಹೊರಟುಬಿಟ್ಟ ರಕ್ಷಿತಾ ಬಾಯಿ. ಇಡೀ ಕರ್ನಾಟಕ ಜನತೆ ರಕ್ಷಿತಾ ಬಾಯಿಯವರ ಸಾ-ವಿಗೆ ಕಂಬನಿ ಮಿಡಿದಿದ್ದಾರೆ.
ಹೌದು, ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಮಾಡುತ್ತಿದ್ದ ರಕ್ಷಿತಾ ಬಾಯಿ ಅಲ್ಲಿಯೇ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದುತ್ತಿದ್ದರು. ರಜೆ ಇರುವ ಸಮಯದಲ್ಲಿ ಮನೆಗೆ ಆಗಾಗ ಬಂದು ಹೋಗಿ ಮಾಡುತ್ತಿದ್ದರು ರಕ್ಷಿತಾ ಬಾಯಿ. ಈ ಬಾರಿ ಮನೆಗೆ ಹೋಗುತ್ತಿದ್ದಾಗ ಬಸ್ಸಿನಿಂದ ಆಯತಪ್ಪಿ ರಸ್ತೆ ಮಧ್ಯ ಬಿದ್ದ ರಕ್ಷಿತಾ ಬಾಯಿ ತ’ಲೆಗೆ ಆಳವಾಗಿ ಬಿಟ್ಟಾಗಿತ್ತು.
ಹಾಗಾಗಿ ಅವರ ಅಂಗಾಂಗಗಳಿಗೆ ಯಾವುದೇ ಡ್ಯಾ’ಮೇಜ್ ಆಗದೆ ಇದ್ದರೂ ಮೆದುಳು ಮಾತ್ರ ನಿಷ್ಕ್ರಿಯವಾಗಿತ್ತು. ಕೂಡಲೇ ಸ್ಥಳೀಯರು ರಕ್ಷಿತಾ ಬಾಯಿಯವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ರಕ್ಷಿತಾ ಬಾಯಿಯವರ ಮನೆಯವರ ಬಳಿ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಹಾಗಾಗಿ ಅವಳ ಅಂಗಾಂಗಗಳನ್ನು ಯಾರಿಗಾದರೂ ದಾನ ಮಾಡಬಹುದು ಎಂಬ ಸಲಹೆಯನ್ನು ನೀಡುತ್ತಾರೆ.
ರಕ್ಷಿತಾಭಾಯಿ ಅಪ್ಪುವಿನ ಫ್ಯಾನ್ ಆಗಿದ್ದರು. ಹಾಗಾಗಿ ಅಪ್ಪುವಿನಂತೆ ಅವರ ಮನೆಯವರು ತಮ್ಮ ಮಗಳ ಅಂಗಾಂಗ ದಾನ ಮಾಡಲು ಒಪ್ಪಿದರು. ಹಾಗೆ ರಕ್ಷಿತಾ ಬಾಯಿಯ ಒಂಬತ್ತು ಅಂಗಗಳನ್ನು ಇತರ 9 ಜನರಿಗೆ ವರ್ಗಾಯಿಸಲಾಗಿದೆ. ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಯಿಂದ ಮಂಗಳೂರಿಗೆ ಚಿಕ್ಕಮಗಳೂರು ಮೂಡಿಗೆರೆ ಕೊಟ್ಟಿಗೆಹಾರ ಚಾರ್ಮಾಡಿ ಘಾಟ್ ಉಜಿರೆ ಬೆಳ್ತಂಗಡಿ ಮಾರ್ಗವಾಗಿ ಜೀರೋ ಟ್ರಾಫಿಕ್ ನಲ್ಲಿ ಆಂಬುಲೆನ್ಸ್ ಮೂಲಕ ರಕ್ಷಿತಾ ಅವರ ಅಂಗಾಂಗ ಸಾಗಾಟ ಮಾಡಲಾಗಿತ್ತು.
ಅದೇ ರೀತಿ ರಕ್ಷಿತಾ ಅವರ ಜೀವಂತ ಹೃದಯವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಚಿಕ್ಕಮಂಗಳೂರಿನಿಂದ ಹೆಲಿಕ್ಯಾಪ್ಟರ್ ಸಹಾಯದಿಂದ ಕೂಡಲೇ ರವಾನಿಸಲಾಗಿದೆ. ನಾನು ಇನ್ನಷ್ಟು ಸಾಧಿಸಬೇಕು ಎಂದುಕೊಂಡಿದ್ದ ರಕ್ಷಿತಾ ಬಾಯಿಯವರ ಕನಸು ಕಮರಿ ಹೋದರು ಕೂಡ, ಅವರ ಅಂಗಾಂಗಗಳನ್ನು ದಾನ ಮಾಡಿ ಕುಟುಂಬಸ್ಥರು ನಿಜವಾಗಿಯೂ ಸಾರ್ಥಕತೆ ಮೆರೆದಿದ್ದಾರೆ.
ಇನ್ನು ಅಪ್ಪು ಅವರ ಪತ್ನಿ ಅಶ್ವಿನಿ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ರಕ್ಷಿತಾ ಅವರ ಒಂಬತ್ತು ಅಂಗಗಳು 9 ಜನರಿಗೆ ಸೇರಿವೆ. ನಿಜಕ್ಕೂ ಆ ಕುಟುಂಬಕ್ಕೆ ಕೈಮುಗಿಯಲೇಬೇಕು ಅಂತ ಅಶ್ವಿನಿ ಹೇಳಿದ್ದಾರೆ. ಪುನೀತ್ ರಾಜಕುಮಾರ್ ಅವರು ಕೂಡ ಇಂತಹ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ಕೈಜೋಡಿಸಿದವರು ಹಾಗಾಗಿ ಅವರ ಅಭಿಮಾನಿಯಾಗಿ ರಕ್ಷಿತಾ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ.
ರಕ್ಷಿತಾ ಭಾಯಿಯವರ ಪಾರ್ಥಿವ ಶರೀರವನ್ನು ಮನೆಗೆ ತಂಡಾಗ ಸ್ಥಳೀಯರು, ಆಕೆಯ ಕಾಲೇಜಿನ ಸಹಪಾಠಿಗಳು ಸ್ಥಳಾಕ್ಕೆ ಧಾವಿಸಿದರು. ಈ ಸಮಯದಲ್ಲಿ ರಕ್ಷಿತಾಬಾಯಿಯವರ ಅಣ್ಣ ಗೊಂಬೆ ಹೇಳುತೈತೆ ಎನ್ನುವ ಹಾಡನ್ನು ಹಾಡಿದ್ದು ಆಕೆಯ ಸಹಪಾಠಿಗಳ ಕಣ್ಣಲ್ಲಿ ನೀರು ತರಿಸಿತ್ತು. ರಕ್ಷಿತಾಬಾಯಿ ಹಾಗೂ ಅವರ ಮನೆಯವರು ಅಪ್ಪುಅವರನ್ನು ಇಷ್ಟಪಡುತ್ತಿದ್ದವರು. ಹಾಗಾಗಿ ಅಪ್ಪುವಿನ ಹಾಡನ್ನು ಹಾಡಿದ್ದು, ಅಪ್ಪು ಅಭಿಮಾನಿಗಳನ್ನೂ ಕೂಡ ಭಾವುಕರನ್ನಾಗಿಸಿತ್ತು!