PhotoGrid Site 1663503812630

ಅದೆಲ್ಲ ನಮಗೆ ತೋರುವ ಹಾಗೆ ಬಟ್ಟೆ ಧರಿಸಬೇಡಿ ಎಂದ ಅಭಿಮಾನಿಗೆ, ನಿರೂಪಕಿ ಅನಸೂಯಾ ಭಾರದ್ವಾಜ್ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ? ಗಾಬರಿಗೊಂಡ ತೆಲುಗು ಜನತೆ ನೋಡಿ!!

ಸುದ್ದಿ

ನಟನಾ ಫೀಲ್ಡ್ ಆಯ್ದುಕೊಂಡ ಮೇಲೆ ಹುಡುಗಿಯರು ಸಾಕಷ್ಟು ಅವಮಾನ ಕಿರುಕುಳ ಅನುಭವಿಸಬೇಕಾಗಿದ್ದು ಸಹಜವಾಗಿದೆ. ಆದರೆ ಇವುಗಳ್ಳನ್ನ ಎದುರಿಸಿ, ಎಲ್ಲವನ್ನು ಗೆದ್ದು, ಮುಂದುವರೆದರೆ ಮಾತ್ರ ಸಕ್ಸಸ್ ಕಾಣೋದಕ್ಕೆ ಸಾಧ್ಯ. ಅದೇ ರೀತಿ ನಟಿಯರಿಗೆ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಕೆಲವರಿಂದ ಅವಮಾನ ತಪ್ಪಿದ್ದಲ್ಲ. ಸಿನಿಮಾಗಳಲ್ಲಿ ನಟಿಸುತ್ತಾರೆ ಎನ್ನುವ ಮಾತ್ರಕ್ಕೆ ಏನೇ ಹೇಳಿದ್ರು ನಡೆಯುತ್ತೆ ಎನ್ನುವ ಮನೋಭಾವ ಹಲವರಿಗೆ ಇದೆ.

ಪಬ್ಲಿಕ್ ಫಿಗರ್ ಅಂದ್ರೆ ಅವರ ಬಗ್ಗೆ ಏನಾದರೂ ಕಮೆಂಟ್ ಮಾಡಬಹುದು ಎನ್ನುವ ಕಲ್ಪನೆ ತಪ್ಪು. ಅವರಿಗೂ ಅವರದ್ದೇ ಆದ ವೈಯಕ್ತಿಕ ಜೀವನ ಇರುತ್ತೆ ಅನ್ನೋದನ್ನ ಮರೆಯಬಾರದು. ಇಂದು ಸಾಕಷ್ಟು ಸಿನಿಮಾ ತಾರೆಯರು ಸಿನಿಮಾಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟಿವ್ ಆಗಿರುತ್ತಾರೆ. ಇದರಿಂದ ಅವರಿಗೆ ಸಾಕಷ್ಟು ಫಾಲೋವರ್ಸ್ ಇರುತ್ತಾರೆ. ಯಾರಾದ್ರೂ ಸಕ್ಸಸ್ ಕಂಡ್ರೆ ಕಾಲೇಳೆಯುವವರು ಇದ್ದೇ ಇರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಹಾಕುವ ಮೂಲಕ ಇಂತಹ ಕೆಲಸ ಮಾಡುತ್ತಾರೆ. ತೆಲುಗು ಸಿನಿಮಾ ನಟನೆ ಹಾಗೂ ನಿರೂಪಣೆಯಲ್ಲಿ ಮಿಂಚುತ್ತಿರುವ ಅನುಸೂಯ ಭಾರದ್ವಾಜ್ ಅವರ ಹೆಸರನ್ನ ನೀವು ಕೇಳಿರಬಹುದು. ನಟನ ಹಾಗೂ ನಿರೂಪಣೆಯ ಅತ್ಯದ್ಭುತ ಪ್ರತಿಭೆ ಇರುವ ಅನುಸೂಯ ಭಾರದ್ವಾಜ್ ಸಾಕಷ್ಟು ವಿ-ವಾದಗಳನ್ನು ಎದುರಿಸಿದ್ದಾರೆ. ಟಾಲಿವುಡ್ ನಲ್ಲಿ ಸಿನಿಮಾಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಆದ್ರು ಅಲ್ಲಿ ಅನಸೂಯ ಅವರ ನಿರೂಪಣೆ ಇದ್ದೇ ಇರುತ್ತೆ.

ವೇದಿಕೆಯ ಮೇಲೆ ಸೀರೆ ಮಾತ್ರವಲ್ಲ ಆಧುನಿಕ ಬಟ್ಟೆ ಧರಿಸಿಯು ನಿರೂಪಣೆ ಮಾಡಬಹುದು ಅನ್ನೋದನ್ನ ತೋರಿಸಿದ್ದೇ ಅನಸುಯಾ ಅವರು. ಸಾಕಷ್ಟು ಮಾಡ್ರನ್ ಬಟ್ಟೆ ಧರಿಸುತ್ತಾರೆ ಅನಸೂಯ. ನಟಿ ಅನಸೂಯ ಭಾರದ್ವಾಜ್ ಟಾಲಿವುಡ್ ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗೆ ತೆರೆಕಂಡಿದ್ದ ಪುಷ್ಪ ಸಿನಿಮಾದಲ್ಲಿ ಅನಸೂಯ ಅವರ ಅಭಿನಯ ಜನರ ಮೆಚ್ಚುಗೆ ಗಳಿಸಿದೆ.

ರವಿತೇಜ ಅಭಿನಯದ ಕಿಲಾಡಿ ಸಿನಿಮಾದಲ್ಲಿಯೂ ಅನುಸೂಯ ಅವರು ಉತ್ತಮ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಇತ್ತೀಚಿಗೆ ತೆರೆಕಂಡ ವಿಕ್ರಂ ಸಿನಿಮಾದಲ್ಲಿಯೂ ಅನುಸೂಯ ಭಾರದ್ವಾಜ್ ಅವರ ಗ್ಲಾಮರ್ ಲುಕ್ ಗೆ ಯುವಕರು ಫಿದಾ ಆಗಿದ್ದಾರೆ. ಇದರ ನಟಿಯರಂತೆ ಅನುಸೂಯ ಭಾರದ್ವಾಜ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಖಾತೆ ಹೊಂದಿರುವ ಅನಸೂಯ ಅವರು ಮಿಲಿಯನ್ ಗಟ್ಟಲೆ ಫಾಲೋವರ್ಸ್ ಹೊಂದಿದ್ದಾರೆ.

ಇಲ್ಲಿ ಅವರ ಫೋಟೋಗಳನ್ನು ನೋಡಿದರೆ ಅವರು ಎರಡು ಮಕ್ಕಳ ತಾಯಿ ಅಂತ ಯಾರು ಊಹಿಸುವುದಕ್ಕೂ ಸಾಧ್ಯವಿಲ್ಲ. ಸಕ್ಕತ್ ಹಾಟ್ ಫೋಟೋಗಳನ್ನ ಅಪ್ಲೋಡ್ ಮಾಡುವ ಅನಸೂಯ ಅವರಿಗೆ ಸಾಕಷ್ಟು ಕೆಟ್ಟ ಕಮೆಂಟ್ ಗಳು ಕೂಡ ತಪ್ಪಿದ್ದಲ್ಲ. ಇತ್ತೀಚೆಗೆ ಒಬ್ಬ ವ್ಯಕ್ತಿ ಅನುಸೂಯ ಭಾರದ್ವಾಜ್ ಅವರಿಗೆ ಫೋಟೋ ಒಂದಕ್ಕೆ ಕಮೆಂಟ್ ಮಾಡಿದ್ದ. ಆತನ ಕಮೆಂಟ್ ಓದಿ ಸುಮ್ಮನಾಗದ ಅನುಸೂಯ ಭಾರದ್ವಾಜ್ ಸರಿಯಾದ ಉತ್ತರವನ್ನು ನೀಡಿದ್ದಾರೆ.

ಸಿನಿಮಾ ತಾರೆಯರು ಅಂದಮೇಲೆ ಅವರ ಫೋಟೋಗಳಿಗೆ ಕಮೆಂಟ್ ಬರೋದು ಕಾಮನ್. ಕೆಲವರು ಒಳ್ಳೆಯ ಕಮೆಂಟ್ ಮಾಡಿದರೆ ಇನ್ನೂ ಕೆಲವರು ಅಸಭ್ಯವಾಗಿ ಕಮೆಂಟ್ ಮಾಡುತ್ತಾರೆ ಹಾಗಂತ ಹಾಗೆ ಬಿಟ್ರೆ ಇದು ಮುಂದುವರೆಯುತ್ತೆ. ಅದಕ್ಕಾಗಿ ಅನಸೂಯ ಭಾರದ್ವಾಜ್ ನೀಡಿದ ಉತ್ತರ ಸರಿಯಾಗಿದೆ ಅನ್ನೋದು ಹಲವರ ಅಭಿಪ್ರಾಯ. ಕಮೆಂಟ್ ಮಾಡಿದ ವ್ಯಕ್ತಿ ‘ನೀನು ಎರಡು ಮಕ್ಕಳ ತಾಯಿ ಇಂಥದೆಲ್ಲ ಬಟ್ಟೆ ಹಾಕ್ತಿಯಲ್ಲ ಇದು ತೆಲುಗು ಮಹಿಳೆಯರ ಸಮುದಾಯಕ್ಕೆ ಅವಮಾನ’ ಎಂದು ಬರೆದಿದ್ದ.

‘ಈ ರೀತಿ ಮಾತನಾಡುವುದೇ ಗಂಡಸರ ಕುಲಕ್ಕೆ ಅವಮಾನ. ಮೊದಲು ನಿಮ್ಮ ವಿಚಾರಧಾರೆಯನ್ನು ಬದಲಿಸಿ. ನಾನು ನನಗೆ ಏನನ್ನಿಸುತ್ತದೆಯೋ ಅದನ್ನ ಮಾಡುತ್ತೇನೆ ನೀವು ನಿಮ್ಮ ಕೆಲಸ ನೋಡಿಕೊಳ್ಳಿ’ ಎಂದು ಅನಸೂಯ ಭಾರದ್ವಾಜ್ ಖಾರವಾಗಿ ರಿಪ್ಲೈ ಮಾಡಿದ್ರು. ಹೀಗೆ ಆಗಾಗ ಚಮಕ್ ಕೊಡ್ತಾ ಇದ್ರೆ ಪಬ್ಲಿಕ್ ನಲ್ಲಿ ಈ ರೀತಿ ಕಮೆಂಟ್ ಮಾಡುವವರ ಬಾಯಿ ಮುಚ್ಚಿಸಬಹುದು ಏನಂತೀರಿ?!

Leave a Reply

Your email address will not be published. Required fields are marked *