ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿ ಆನಂತರ ಹೈದರಾಬಾದ್ ನಲ್ಲಿಯೇ ಸೆಟಲ್ ಆದ ನಟಿ ರಶ್ಮಿಕ ಮಂದಣ್ಣ ಟಾಲಿವುಡ್ ನಲ್ಲಿ ಈಗಾಗಲೇ ಅತ್ಯುತ್ತಮ ಹೆಸರು ಗಳಿಸಿದ್ದಾರೆ ಅವರು ಸಿನಿಮಾ ಇಂಡಸ್ಟ್ರಿಗೆ ಬಂದು ಕೇವಲ ಆರು ವರ್ಷ ಆಯ್ತು ಆದರೆ ಅವರು ಗಳಿಸಿರುವ ಹೆಸರು ಹಾಗೂ ಮಾಡಿರುವ ಸಾಧನೆ ಮಾತ್ರ ಸಾಕಷ್ಟು. ಇಂದು ರಶ್ಮಿಕ ಮಂದಣ್ಣ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ದಿನೇ ದಿನೇ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಳ್ಳುತ್ತಿರುವ ರಶ್ಮಿಕ ಮಂದಣ್ಣ ಬಾಲಿವುಡ್ ನಲ್ಲಿಯೂ ಕೂಡ ಮಿಂಚುತ್ತಿರುವುದು ವಿಶೇಷ. ಹೌದು, ರಶ್ಮಿಕ ಮಂದಣ್ಣ ಅವರಿಗೆ ಕೇವಲ 26 ವರ್ಷ ವಯಸ್ಸು. ಕೊಡಗಿನ ಬೆಡಗಿ ರಶ್ಮಿಕ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಅವರ ಲುಕ್ ಗೆ ಜನ ಕ್ಲೀನ್ ಬೋರ್ಡ್ ಆಗಿದ್ದಾರೆ. ಸುಂದರವಾಗಿರುವ ರಶ್ಮಿಕ ಮಂದಣ್ಣ ಸಾಕಷ್ಟು ಬೋಲ್ಡ್ ಆಗಿಯೂ ಕೂಡ ನಟಿಸುತ್ತಾರೆ.
ಕಿರಿಕ್ ಪಾರ್ಟಿಯ ಸಾನ್ವಿ ಹೆಸರಿನ ಮೂಲಕ ಹೆಚ್ಚು ಪ್ರಸಿದ್ಧಿ ಗಳಿಸಿದ ರಶ್ಮಿಕ ಮಂದಣ್ಣ ಅದಾದ ಬಳಿಕ ಕನ್ನಡದಲ್ಲಿ ಅಂಜನಿಪುತ್ರ, ಚಮಕ್, ಯಜಮಾನ, ಪೊಗರು ಮೊದಲ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಂತರ ಗೀತ ಗೋವಿಂದಂ ಎನ್ನುವ ತೆಲುಗು ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೊತೆಯಾದರೂ ಈ ಸಿನಿಮಾ ರಶ್ಮಿಕಾ ಮಂದಣ್ಣ ಅವರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು.
ಅದಾದ ಬಳಿಕ ಚಲೋ, ದೇವದಾಸ್ ಮೊದಲಾದ ಸಿನಿಮಾದಲ್ಲಿ ಅಭಿನಯಿಸಿದರು. ಇದೀಗ ಬಾಲಿವುಡ್ ನಲ್ಲಿ ಬಿಗ್ ಬಿ ಜೊತೆಗೂ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಇತ್ತೀಚಿಗೆ ಸೀತಾ ರಾಮ ಸಿನಿಮಾದಲ್ಲಿಯೂ ಕೂಡ ರಶ್ಮಿಕ ಮಂದಣ್ಣ ನಟ ದುಲ್ಕರ್ ಸಲ್ಮಾನ್ ಅವರಿಗೆ ಜೊತೆಯಾಗಿ ಅಭಿನಯಿಸಿದ್ದಾರೆ. ಹೆಚ್ಚು ಕಡಿಮೆ ಸೌತ್ ನ ಎಲ್ಲಾ ಸ್ಟಾರ್ ನಟರ ಜೊತೆ ರಶ್ಮಿಕ ಮಂದಣ್ಣ ತೆರೆ ಹಂಚಿಕೊಂಡಿದ್ದು ಅವರ ಚಾರ್ಮ್ ಹೆಚ್ಚಿಸಿದೆ.
ಕೊಡಗಿನ ಕುವರಿ ರಶ್ಮಿಕ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ. ಸಿನಿಮಾ ನಟಿ ಅಂದ್ಮೇಲೆ ದೇಹ ಸೌಂದರ್ಯವನ್ನು ಉಳಿಸಿಕೊಳ್ಳುವುದು ಬಹಳ ಅಗತ್ಯ. ಹಾಗಾಗಿ ರಶ್ಮಿಕಾ ಮಂದಣ್ಣ ಅವರ ಡಯಟ್ ಫುಡ್ಡಿಂಗ್ ಆಗಲಿ ವರ್ಕೌಟ್ ಮಾಡುವುದನ್ನಾಗಲಿ ಒಂದು ದಿನವೂ ಬಿಡುವುದಿಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ಹೆಚ್ಚು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಅವರಿಗೆ ಈಗಾಗಲೇ 33 ಮಿಲಿಯನ್ ಅಧಿಕ ಫಾಲೋವರ್ಸ್ ಇದ್ದಾರೆ.
ಲಾಕ್ ಡೌನ್ ಸಮಯದಲ್ಲಿಯೂ ಕೂಡ ರಶ್ಮಿಕಾ ಮಂದಣ್ಣ ವಿಡಿಯೋ ವನ್ನು ಮಾಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಇದೀಗ ರಶ್ಮಿಕ ಮಂದಣ್ಣ ತಮ್ಮ ಫಿಟ್ನೆಸ್ ಸೀಕ್ರೆಟ್ ಕೊಟ್ಟಿದ್ದಾರೆ. ತಮ್ಮ ಇನ್ಸ್ಟಾ ಖಾತೆಯಲ್ಲಿ ಪ್ಯಾನ್ ಕೇಕ್ ಮಾಡುವ ಸಣ್ಣ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರೆಸಿಪಿ ತೋರಿಸುವುದರ ಜೊತೆಗೆ ನನಗೆ ದಿನ ಬ್ರೇಕ್ ಫಾಸ್ಟ್ ಗೆ ಇದೆ ರೀತಿಯ ಪಾನ್ ಕೇಕ್ ಬೇಕು ಅಂತ ಹೇಳಿದ್ದಾರೆ.
ಇನ್ನು ಫಿಟ್ನೆಸ್ ಕೋಚ್ ಆಗಿರುವ ಡಾಕ್ಟರ್ ಸ್ನೇಹ ದಾಸ್ ಅವರಿಗೆ ಈ ವಿಡಿಯೋ ಕ್ರೆಡಿಟ್ ಅರ್ಪಿಸಿದ್ದಾರೆ ರಶ್ಮಿಕ ಮಂದಣ್ಣ. ರಶ್ಮಿಕ ಮಂದಣ್ಣ ತಾವು ಏನೇ ಮಾಡಿದರೂ ತಮ್ಮ ಜೊತೆಗಿರುವ ಸ್ನೇಹಿತರನ್ನ ಆಗಾಗ ಟ್ಯಾಗ್ ಮಾಡಿ ಪೋಸ್ಟ್ ಮಾಡುವುದು ನಿಜಕ್ಕೂ ಅವರ ಸ್ನೇಹಿತರಿಗೂ ಖುಷಿಯ ವಿಚಾರವೇ ಸರಿ. ಸದ್ಯ ರಶ್ಮಿಕಾ ಮಂದಣ್ಣ ಅವರು ತೋರಿಸಿದ ರೆಸಿಪಿ ಮಾಡೋದ್ರಲ್ಲಿ ಅವರ ಅಭಿಮಾನಿಗಳು ಬ್ಯುಸಿ ಆಗಿದ್ದಾರೆ.
View this post on Instagram