ನೀವು ಇತರ ಯಾವುದೇ ಬೆಳೆಗೆ ಹೋಲಿಸಿದರೆ ಅಡಿಕೆ ಮಾರುಕಟ್ಟೆ ಬಹಳ ವಿಭಿನ್ನವಾಗಿದೆ. ಯಾಕಂದ್ರೆ ಸಾಮಾನ್ಯವಾಗಿ ಇತರ ವಸ್ತುಗಳು ಜನರ ಬೇಡಿಕೆ ಹಾಗೂ ಉತ್ಪನ್ನದ ಆಧಾರದ ಮೇಲೆ ದರ ಹೆಚ್ಚು ಕಡಿಮೆ ಆಗುತ್ತದೆ. ಆದರೆ ಅಡಿಕೆ ಹಾಗಲ್ಲ, ಬೆಳೆ ಹೆಚ್ಚಾದರೂ ಬೆಲೆ ಏರಿಕೆ ಆಗಬಹುದು ಅಥವಾ ಅಡಿಕೆ ಬೆಲೆ ಕಡಿಮೆಯಾದರೂ ಬೆಲೆ ಏರಿಕೆ ಕಾಣಬಹುದು ಇದೆಲ್ಲ ಅಡಿಕೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ನಡೆಯುತ್ತದೆ. ವರ್ಷದುದ್ದಕ್ಕೂ ಗುಟ್ಕಾ ಫ್ಯಾಕ್ಟರಿ ಕೆಲಸ ಮಾಡುತ್ತವೆ.
ಗುಟ್ಕಾ ತಿನ್ನುವವರ ಸಂಖ್ಯೆ ಕಡಿಮೆ ಆಗಬಹುದು ಅಥವಾ ಹೆಚ್ಚಾಗಬಹುದು ಜನರ ಬೇಡಿಕೆಯ ಆಧಾರದ ಮೇಲೆ ಇಲ್ಲಿಯೂ ಕೂಡ ಬೆಲೆ ಏರಿಕೆ ಹಾಗೂ ಇಳಿತ ಇದ್ದೇ ಇರುತ್ತದೆ ಹಾಗಾಗಿ ಅಡಿಕೆ ಧಾರಣೆಯಲ್ಲಿಯೂ ಕೂಡ ಏರಿಳಿತ ಕಾಣಿಸಿಕೊಳ್ಳುತ್ತದೆ. ಕರಾವಳಿ ಹಾಗೂ ಇತರ ಭಾಗಗಳಲ್ಲಿ ಅಡಿಕೆಯನ್ನು ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತೆ ಮಾರುಕಟ್ಟೆಯಲ್ಲಿ ಏಕ ಸ್ವಾಮ್ಯ ಸಾಧಿಸಿ, ಅಗತ್ಯವಿದ್ದರೆ ದಾಸ್ತಾನು ಇಟ್ಟುಕೊಂಡ ಅಡಿಕೆಯ ಮೇಲೆ ಬೆಲೆ ಇಳಿಕೆ ಆಗಬಹುದು.
ಆದರೆ ಅದನ್ನು ಮತ್ತೆ ಏರಿಕೆ ಮಾಡಲೇಬೇಕು ಮಾಲಿಕನಿಗೆ ಕನಿಷ್ಠ 10 ರಿಂದ 15% ಆದ್ರೂ ಲಾಭ ಸಿಗುವಂತೆ ಅಡಿಕೆ ಧಾರಣೆ ನಡೆಸಲಾಗುತ್ತದೆ. ಅಡಿಕೆ ಖರೀದಿದಾರ ಅಡಿಕೆ ಬೇಡ ಎಂದು ಹೇಳಿದರೆ ಕೆಲವು ಸಮಯ ಅಡಿಕೆ ಖರೀದಿಯನ್ನು ನಿಲ್ಲಿಸಬೇಕಾಗುತ್ತದೆ ಆದರೆ ಗುಟ್ಕಾ ಅಥವಾ ಅಡಕೆ ಬಳಸುವ ಇನ್ನಿತರ ಉತ್ಪನ್ನಗಳ ತಯಾರಿಸುವ ಕ್ಷೇತ್ರಕ್ಕೆ ಹೊಡೆತ ಬೀಳುವಂಥಾದರೆ ಮತ್ತೆ ಖರೀದಿದಾರ ಅಡಿಕೆಯನ್ನು ಖರೀದಿಸಲು ಮುಂದಾಗುತ್ತಾನೆ.
ಅದರಲ್ಲೂ ಸಾಕಷ್ಟು ಜನ ಅಡಿಕೆ ದಾಸ್ತಾನು ಇಟ್ಟುಕೊಳ್ಳಲು ಬಯಸುತ್ತಾರೆ ಹಾಗಾಗಿ ಅಡಿಕೆ ಬೆಲೆ ಒಮ್ಮೆ ಇಳಿತ ಕಂಡರು ವರ್ಷ ಪೂರ್ತಿ ಕಡಿಮೆಯಾಗಿಯೇ ಇರುವುದಿಲ್ಲ ಬೇಗ ಅದು ಮತ್ತೆ ಚೇತರಿಸಿಕೊಳ್ಳುತ್ತದೆ. ಇನ್ನು ಅಡಿಕೆಯ ಮಾರುಕಟ್ಟೆಯ ಸ್ಥಿತಿ ನೋಡುವುದಾದರೆ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಚೇತರಿಕೆ ಕಂಡಿಲ್ಲ ಒಂದೇ ರೀತಿಯ ಸ್ಥಿತಿ ಮುಂದುವರಿದಿದೆ ನಿರ್ಧಾರ ಮಾಡಲಾಗುತ್ತದೆ.
ಖರೀದಿದಾರರಿಗೆ ಬೇಡಿಕೆ ಇರುವಷ್ಟು ಅಡಿಕೆ ಸರಬರಾಜು ಆಗದಿದ್ದರೆ ಬೆಲೆ ಕಡಿಮೆ ಇದೆ ಎಂದು ಹೇಳಿ ಕೊಳ್ಳುವುದಕ್ಕೆ ಹಿಂದೆಟು ಹಾಕುತ್ತಾರೆ. ಈ ವರ್ಷ ಚಾಲಿ ಅಡಿಕೆ ದರದಲ್ಲಿ ಭಾರಿ ಕುಸಿತ ಏನು ಕಂಡಿಲ್ಲ ಅಕ್ಟೋಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ದರ ಕಡಿಮೆಯಾಗಿದ್ದರು ಅದು ಕೇವಲ 4-5% ಮಾತ್ರ. ಇನ್ನು ಕೆಂಪಡಿಕೆ ಬೆಲೆ ಎರಡು ತಿಂಗಳಿನಿಂದ ಸ್ವಲ್ಪ ಕಡಿಮೆಯಾಗಿದೆ ಸೆಪ್ಟೆಂಬರ್ ತಿಂಗಳಿನಲ್ಲಿ 55,000ಕ್ಕೆ ಮುಟ್ಟಿದ್ದ ಧಾರಣೆ ಕಡಿಮೆ ಆಗಿ ಡಿಸೆಂಬರ್ ನ ಎರಡನೇ ವಾರಕ್ಕೆ 40,000 ಕ್ಕೆ ಇಳಿಕೆಯಾಗಿದೆ.
ಆದರೆ ಡಿಸೆಂಬರ್ ನ ಕೊನೆಯ ಭಾಗದಲ್ಲಿ ಮತ್ತೆ ಅಡಿಕೆಯ ಬೆಲೆ ಚೇತರಿಕೆ ಕಾಣುತ್ತಿದೆ. ಶಿವಮೊಗ್ಗ, ಚಿತ್ರದುರ್ಗ, ಹೊನ್ನಾಳಿ ಪ್ರದೇಶದಿಂದ ಮಾರುಕಟ್ಟೆಗೆ ಭಾರಿ ಪ್ರಮಾಣದ ಅಡಿಕೆ ಈ ತಿಂಗಳ ಮಧ್ಯಭಾಗದಲ್ಲಿ ಬಂದು ಸೇರಿತು ಸೋಮವಾರ ಗರಿಷ್ಠ 3550 ಚೀಲ ಅಡಿಕೆ ಮಾರಾಟವಾಗಿತ್ತು ಇನ್ನು ಉಳಿದ ಅಡಿಕೆ ಕೊಯ್ಲು ನಡೆಯುತ್ತಿದ್ದು ಸ್ವಲ್ಪೇ ದಿನಗಳಲ್ಲಿ ಮತ್ತೆ ಮಾರುಕಟ್ಟೆಗೆ ಅಡಿಕೆ ಬರುವ ಸಾಧ್ಯತೆ ಇದೆ ಇದೀಗ ಅಡಿಕೆ ಧಾರಣೆ ಸರಾಸರಿ 43 ಸಾವಿರದವರೆಗೆ ಬಂದು ತಲುಪಿದೆ.
ಇತ್ತ ಅಡಿಕೆ ಬೆಲೆಯಲ್ಲಿ ಏರಿಕೆ ಕಾಣಿಸುತ್ತಿದ್ದರು ಮಂಗಳವಾರ ಮಾರುಕಟ್ಟೆಗೆ ಅಡಿಕೆ ಕಡಿಮೆ ಪ್ರಮಾಣದಲ್ಲಿ ಬಂದಿದೆ. ಹಾಗಾಗಿ ಸದ್ಯದ ಪರಿಸ್ಥಿತಿ ನೋಡುವುದಾದರೆ ಅಡಿಕೆ ಬೆಲೆ 45,000 ರೂ. ಮುಟ್ಟುವ ಸಾಧ್ಯತೆ ಇದೆ. ಇನ್ನು ಚಾಲಿ ಅಡಿಕೆಗೆ ಬೆಲೆ ಏರಿಕೆ ಆಗುವ ನಿರೀಕ್ಷೆ ಇದೆ ಕಳೆದ ವರ್ಷದ ಅಡಿಕೆಯ ಗುಣಮಟ್ಟವನ್ನು ನೋಡಿ 490ರ ವರೆಗೆ ಅಡಿಕೆ ಖರೀದಿ ನಡೆದಿದೆ ಎಂದು ವರದಿಯಾಗಿದೆ. ಇನ್ನು ಕಳೆದ ವಾರಕ್ಕೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಕೆಂಪಡಿಕೆದರ 3000 ಕ್ಕೆ ಏರಿಕೆಯಾಗಿದೆ.