ಅಂದು ಶಿವಣ್ಣನಿಗೆ ಆರೋಗ್ಯ ಸಮಸ್ಯೆ ಆದಾಗ ದೊಡ್ಮನೆ ಸೊಸೆ ಗೀತಕ್ಕ ಮಾಡಿದ ಆ ತ್ಯಾಗ ಎಂತದ್ದು ಗೊತ್ತಾ? ಯಾವ ದೇವರ ಮೊರೆ ಹೋಗಿದ್ದರು ಗೊತ್ತಾ, ಗ್ರೇಟ್ ಕಣ್ರೀ ನಿಜವಾಗ್ಲೂ ನೋಡಿ!!

ಸುದ್ದಿ

ಕನ್ನಡದಲ್ಲಿ ದೊಡ್ಮನೆ ಅಂದ್ರೆ ಬಹಳ ದೊಡ್ಡ ಹೆಸರಿದೆ. ಡಾ. ರಾಜ್ ಕುಮಾರ್ ಕುಟುಂಬದ ಬಹುತೇಕ ಎಲ್ಲಾ ಸದಸ್ಯರು ಕನ್ನಡ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾರೆ ಅದರಲ್ಲೂ ಡಾಕ್ಟರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಯಸ್ಸು 60 ಆದರೂ 20 ವರ್ಷದ ಹುಡುಗರಂತೆ ಈಗಲೂ ಸ್ಟೆಪ್ಸ್ ಹಾಕುತ್ತಾರೆ. ಮಾಸ್ ಆದ್ರೂ ಸರಿ ಕ್ಲಾಸ್ ಆದ್ರೂ ಸರಿ ಯಾವ ಸಿನಿಮಾ ಆದರೂ ಕೂಡ ಮೊದಲುನಂತೆ ಈಗಲೂ ಅದೇ ಎನರ್ಜಿಯಿಂದ ಅಭಿನಯಿಸುತ್ತಾರೆ ಶಿವಣ್ಣ.

ಈಗಿನ ಅದೆಷ್ಟೋ ಯುವ ನಟರು ಕೂಡ ಶಿವಣ್ಣ ಅವರ ನಟನೆಯ ಮುಂದೆ ತಲೆಬಾಗಲೇಬೇಕು. ಇನ್ನು ಸಿನಿಮಾ ಮಾತ್ರವಲ್ಲದೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿಯೂ ಕೂಡ ಶಿವರಾಜ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ. ಹೌದು ನಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದ ವಿಶೇಷ ತೀರ್ಪುಗಾರರಾಗಿ ಶಿವರಾಜ್‍ಕುಮಾರ್ ಅವರು ಕಾಣಿಸಿಕೊಂಡಿದ್ದರು.

ಇದೀಗ ಝೀ ಕುಟುಂಬದ ಸದಸ್ಯರೇ ಆಗಿ ಹೋಗಿರುವ ಶಿವಣ್ಣ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಜಿ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಶಿವಣ್ಣ ಭಾಗವಹಿಸಿದ್ದರು. ಹೌದು ನಲ್ಲಿ ಶಿವಣ್ಣ ಅವರು ವಿಶೇಷ ಅತಿಥಿಯಾಗಿದ್ದು ಮಾತ್ರವಲ್ಲದೆ ಸಾಕಷ್ಟು ಕಲಾವಿದರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ಶಿವಣ್ಣ ಅವರ ಕೈಯಲ್ಲಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕೆ ನಿಜಕೂ ಹೆಮ್ಮೆಯಾಗುತ್ತದೆ ಎಂದು ಕಲಾವಿದರು ಮಾತನಾಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಅನುಶ್ರೀಯ ಬದಲು ರವಿಚಂದ್ರನ್ ಅವರು ಶಿವಣ್ಣ ಅವರ ಜೊತೆ ಕುಳಿತು ಸಾಕಷ್ಟು ಪ್ರಶ್ನೆ ಕೇಳಿದ್ದಾರೆ ಶಿವರಾಜ್ ಕುಮಾರ್ ಅವರು ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಎಲ್ಲಿಯೂ ಹೇಳುವುದಿಲ್ಲ. ಜೀ ಕನ್ನಡ ಅವಾರ್ಡ್ ವೇದಿಕೆಯ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಶಿವಣ್ಣ ಅವರ ಬಳಿ ಸಾಕಷ್ಟ್ ಪ್ರಶ್ನೆ ಕೇಳಿದ್ದಾರೆ ಅವರ ಬಗ್ಗೆ.

ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ ಶಿವರಾಜಕುಮಾರ್ ಅವರು. ಸಾಮಾನ್ಯವಾಗಿ ಶಿವರಾಜ್ ಕುಮಾರ್ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗುವುದಾದರೂ ಅವರ ಪತ್ನಿ ಗೀತಾ ಅವರ ಜೊತೆ ಇರುತ್ತಾರೆ. ಹೆಂಡತಿಯಿಂದ ನಾನು ಸಾಕಷ್ಟು ಪಡೆದುಕೊಂಡಿದ್ದೇನೆ ಎಂದು ಹೇಳುವ ಶಿವರಾಜ್ ಕುಮಾರ್ ಅವರು ತಮಗೆ ಐದು ವರ್ಷದ ಹಿಂದೆ ಬ್ರೈನ್ ಗೆ ಸಂಬಂಧಪಟ್ಟ ಆಪರೇಷನ್ ಆಗುವ ಸಮಯದಲ್ಲಿ ಗೀತಾ ಮಕ್ಕಳನ್ನು ಸಂಭಾಳಿಸಿ ಆಕೆಯು ಧೈರ್ಯವಾಗಿ ತನ್ನ ಜೊತೆ ನಿಂತಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.

ಹೌದು ಶಿವರಾಜ್ ಕುಮಾರ್ ಅವರು ಒಮ್ಮೆ ಬ್ರೈನ್ ಗೆ ಸಂಬಂಧಿಸಿದ ಆಪರೇಷನ್ ಮಾಡಿಸಿಕೊಳ್ಳಬೇಕಿತ್ತು ಅದು ಇಂಡಿಯಾದಲ್ಲಿ ಲಭ್ಯವಿಲ್ಲದೆ ಇರುವುದರಿಂದ ಪ್ಯಾರೀಸ್ಗೆ ತೆರಳಬೇಕಿತ್ತು ಆ ಸಂದರ್ಭದಲ್ಲಿ ಪುನೀತ್ ಗೆ ಶಿವಣ್ಣ ಜೊತೆ ಹೋಗಲು ವೀಸಾ ಸಿಕ್ಕಿರಲಿಲ್ಲ ಆಗ ಶಿವಣ್ಣ ಅವರ ಜೊತೆ ನಿಂತದ್ದು ಗೀತಾ ಅವರು ಅವರು ಸಂಪೂರ್ಣ ಕಾಯಿಲೆ ಗುಣವಾಗಲಿ ಎಂದು ಕೂದಲನ್ನು ಹರಕೆ ಕೊಟ್ಟಿದ್ದರಂತೆ ಗೀತಾ.

ಈ ವಿಷಯವನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು ಶಿವಣ್ಣ. ಇನ್ನು ಶಿವಣ್ಣ ಅವರ ಮೊದಲನೆಯ ಮಗಳು ಮದುವೆಯಾಗಿದ್ದಾರೆ ಅವರ ಪತಿ ಡಾಕ್ಟರ್ ಕೂಡ ಹೌದು ಎರಡನೆಯ ಮಗಳು ಸೀರೀಸ್ ನಿರ್ಮಾಣ ಮಾಡುತ್ತಾರೆ. ಇನ್ನು ಶಕ್ತಿಧಾಮ ಕೇಂದ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದು ಗೀತಾ ಶಿವರಾಜ್ ಕುಮಾರ್ ಅವರೇ.

ಇನ್ನು ಏಂಜಲ್ ಎನ್ನುವ ಪ್ರಾಡಕ್ಟ್ ಅನ್ನು ಕೂಡ ಶುರು ಮಾಡಿರುವ ಗೀತಾ ಅವರು ಇದರಿಂದ ಬರುವ ಆದಾಯವನ್ನು ಶಕ್ತಿಧಾಮ ಕೇಂದ್ರಕ್ಕೆ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ ಶಿವಣ್ಣ ಅವರದ್ದು ಹ್ಯಾಪಿ ಕುಟುಂಬ. ಸದಾ ಜೊತೆಯಲ್ಲಿ ಇರುವ ಗೀತಾ ಶಿವರಾಜ್ ಕುಮಾರ್ ಹಾಗೂ ಅವರ ಮಕ್ಕಳು ನಿಜಕ್ಕೂ ಇತರರಿಗೂ ಮಾದರಿ.

Leave a Reply

Your email address will not be published. Required fields are marked *